ಬಂಟ್ವಾಳ: ನಾವು ಮಾಡುವ ಕಾರ್ಯಗಳಿಗೆ ಯಶಸ್ಸು ಸಿಗಲು ದೇವರ ಅನುಗ್ರಹ ಬೇಕು ಅಂತೆಯೇ ದೇವಸ್ಥಾನದ ಜೀಣೋದ್ಧಾರ ಕಾರ್ಯಗಳು ನಡೆಯಲು ದೇವರ ಅನುಗ್ರಹ ಬೇಕು, ದೇವರ ಅನುಗ್ರಹದ ಜೊತೆಗೆ ಸಮಾಜದ ಎಲ್ಲರ ಕೊಡುವಿಕೆಯಲ್ಲಿ ದೇವಸ್ಥಾನ ಜೀಣೋದ್ಧಾರ ಕಾರ್ಯ ಸಾಂಗವಾಗಿ ನೆರವೇರಲಿ ಎಂದು ಉಡುಪಿ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಶ್ರೀ ಕ್ಷೇತ್ರ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿ, ತೀರ್ಥಮಂಟಪ ಮತ್ತು ಸುತ್ತುಪೌಳಿಯ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಅಸ್ರಣ್ಣರು ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ ಮಹಾಲಿಂಗೇಶ್ವರ ದೇವರು ರಾಯಿಯ ಸಂಪತ್ತು. ದೇವರು ಕೊಡುವಾಗ ಒಳ್ಳೆಯದನ್ನು ಅನುಗ್ರಹಿಸುತ್ತಾನೆ. ಕೆಟ್ಟದಕ್ಕೆ ಯಾವ ದೇವರು ಅನುಗ್ರಹಿಸುವುದಿಲ್ಲ. ಸಂಪತ್ತಿಗೆ ಹರಿವನ್ನು ಕೊಟ್ಟಾಗ ನೆಮ್ಮದಿ ಸಿಗುತ್ತದೆ ಎಂದರು. ದೇವಸ್ಥಾನಗಳು ಐಕ್ಯಮತ್ಯವನ್ನು ಕೊಡುತ್ತದೆ, ಅದುವೇ ನಮ್ಮನ್ನು ರಕ್ಷಣೆ ಮಾಡುತ್ತದೆ. ದೇವರ ಪ್ರೇಮದಿಂದ ರಾಷ್ಟ್ರ ಪ್ರೇಮವನ್ನು ಪಡೆಯಲು ಸಾಧ್ಯವಿದೆ. ದೇವರನ್ನು ಹೆಚ್ಚೆಚ್ಚು ಆರಾಧಿಸಿದಷ್ಟು ರಾಷ್ಟ್ರ ಪ್ರೇಮ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಭಕ್ತಿಯಿಂದ ಮಾಡುವ ಪ್ರಾರ್ಥನೆಗೆ ದೇವರು ಒಲಿಯುತ್ತಾನೆ. ಆಕ್ರಮಣಕಾರಿ ರಾಕ್ಷಸಿ ಪ್ರವೃತ್ತಿಯ ಭಯೋತ್ಪಾದನೆ ಇಂದು ಆವರಿಸಿಕೊಂಡಿದ್ದು ಅವರು ಜಗತ್ತು ಹಾಗೂ ಹಿಂದೂ ಧರ್ಮಕ್ಕೆ ಕಂಟಕವಾಗಿದ್ದಾರೆ. ಆದ್ದರಿಂದ ಎಲ್ಲರೂ ಎಚ್ಚರವಾಗಿರುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶ್ರದ್ದಾ ಕೇಂದ್ರವನ್ನು ಆಕ್ರಮಣ ಮಾಡುವ ದುಷ್ಕಾರ್ಯ ಆಗುತ್ತಿದ್ದು ಎಲ್ಲರೂ ಒಗ್ಗೂಡಿ ದೇವರು, ಧರ್ಮಕ್ಷೇತ್ರಗಳನ್ನು ರಕ್ಷಣೆ ಮಾಡುವ ಕಾರ್ಯ ಮಾಡಬೇಕಿದೆ ಎಂದರು.
ಓದಿನೊಂದಿಗೆ ಸಂಸ್ಕಾರ, ಧರ್ಮಶಿಕ್ಷಣವನ್ನು ಕೊಡುವ ಕಾರ್ಯ ಆಗಬೇಕು. ಧರ್ಮದ ವಿಚಾರವನ್ನು, ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ತಿಳಿಸಿದರು.
ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಉದ್ಯಮಿ ಸುರೇಶ್ ಶಿವರಾಂ ಗೌಡ ಮುದ್ದಾಜೆ, ವ್ಯಾಸರಾಯ ಪಾಂಗಣ್ಣಯ್ಯ
ರಾಯಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರತ್ನ ಆನಂದ್, ಪುಂಜ ಶ್ರೀ ಪಂಚ ದುರ್ಗಾಪರಮೇಶ್ವರೀ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರತ್ನಕುಮಾರ್ ಚೌಟ, ರಾಯಿ, ಕೊಯಿಲಾ, ಅರಳ, ಹಿಂದೂ ಧಮೋತ್ಥಾನ ವೇದಿಕೆ ಟ್ರಸ್ಟ್ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿದೇಶಕ ಸತೀಶ ಶೆಟ್ಟಿ, ರಾಯಿ ಕೊಯಿಲ ಅರಳ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವರ ಸಂಘ ಅಧ್ಯಕ್ಷ ಶೇಖರ ಅಂಚನ್ ಪಿಲ್ಕಾಜೆಗುತ್ತು, ರಾಯಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಂದರ ಭಂಡಾರಿ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸದಾನಂದ ಗೌಡ ಮತ್ತಾವು, ಪ್ರಧಾನ ಅರ್ಚಕ ರಾಮಚಂದ್ರ ಭಟ್ ದೈಲಾ, ಅರ್ಚಕ ದಿನೇಶ್ ಭಟ್ ದೈಲಾ, ರಾಜೇಶ್ ಶಿವನಗರ, ಜೀಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಜೇಶ್ ಶೆಟ್ಟಿ ರಾಯಿ ಶೀತಳ, ಸಚಿನ್ ಕುಮಾರ್ ಪಡ್ರಾಯಿಬೆಟ್ಟು, ರವೀಂದ್ರ ಪೂಜಾರಿ ಬದನಡಿ, ರಾಯಿ ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ವಸಂತ ಗೌಡ ಮುದ್ದಾಜೆ, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಗೌಡ ಕಾರಂಬಡೆ, ಇಂದಿರಾ ಮಧುಕರ ಬಂಗೇರ, ಹೇಮಾ ಎಚ್. ರಾವ್ ಮೊದಲಾದವರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
—