ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮಡಿವಾಳಪಡ್ಪು ಎಂಬಲ್ಲಿ ಒಣಗಿದ ಮುಳಿಹುಲ್ಲಿನ ಗುಡ್ಡದಲ್ಲಿ ಭಾನುವಾತ ಸಂಜೆ ಬೆಂಕಿ ಕಾಣಿಕೊಂಡು ಸುತ್ತಲೂ ವ್ಯಾಪಿಸಿ ಆತಂಕದ ಸ್ಥಿತಿ ನಿರ್ಮಾಣಗೊಂಡಿತು. ಮಡಿವಾಳಪಡ್ಪು ನದಿ ತೀರದಲಿದ್ದು ಬೆಂಕಿಯ ಕಪ್ಪು ಹೊಗೆ ನದಿಯ ಇನ್ನೊಂದು ಪಾರ್ಶ್ವದಲ್ಲಿರುವ ಬಿ.ಸಿ.ರೋಡು, ಕೈಕುಂಜೆವರೆಗೂ ಕಾಣಿಸುತ್ತಿತ್ತು. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದರು.


