
ಬಂಟ್ವಾಳ. ಲೊರೆಟ್ಟೋ ಮಾತಾ ಚರ್ಚ್ನಲ್ಲಿ ಗರಿಗಳ ಭಾನುವಾರವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು. ಲೊರೆಟ್ಟೊ ಶಾಲಾ ವಠಾರದಲ್ಲಿ ಆರಂಭಗೊಂಡ ಪ್ರಾರ್ಥನಾ ವಿಧಿಯ ಮೆರವಣಿಗೆಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡರು.

ಚರ್ಚ್ ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತಾ ಪ್ರಾರ್ಥನಾ ವಿಧಿ ನೆರವೇರಿಸಿದರು. ಪ್ರಧಾನ ಧರ್ಮಗುರುಗಳಾಗಿ ವಂ. ಜೈಸನ್ ಮೊನಿಸ್ ರವರು ಪವಿತ್ರ ಬಲಿ ಪೂಜೆಯನ್ನು ಭಕ್ತಾದಿಗಳೊಂದಿಗೆ ಅರ್ಪಿಸಿದರು. ಚರ್ಚ್ ಪಾಲನಾ ಮಂಡಳಿ ಮೇಲುಸ್ತುವಾರಿ ವಹಿಸಿತ್ತು. ಮೂರು ದಿನಗಳ ಧ್ಯಾನಕೂಟವನ್ನು ಸೋಮವಾರದಿಂದ ಬುಧವಾರ ತನಕ ಸಂಜೆ ೪ ರಿಂದ ೮ ವರೆಗೆ ಶಿವಮೊಗ್ಗ ಧರ್ಮ ಪ್ರಾಂತ್ಯದ ವಂದನಿಯ ರೋಮನ್ ಪಿಂಟೊ ರವರು ನಡೆಸಿಕೊಡಲಿದ್ದಾರೆ.

