ಬಂಟ್ವಾಳ: ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ 11ನೇ ಸಾಲೆತ್ತೂರು ಶಾಖೆ ಸಾಲೆತ್ತೂರಿನ ರಥನ್ ಕಾಂಪ್ಲೆಕ್ಸ್ನಲ್ಲಿ ಭಾನುವಾರ ಶುಭಾರಂಭಗೊಂಡಿತು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ನೂತನ ಶಾಖೆಯನ್ನು ಉದ್ಘಾಟಿಸಿದರು. ಅವರು ಮಾತನಾಡಿ ಮೂರ್ತೆದಾರಿಕೆ ಕಡಿಮೆಯಾಗುತ್ತ ಬರುತ್ತಿದ್ದಂತೆಯೇ ಮೂರ್ತೆದಾರರ ಸಹಕಾರಿ ಸಂಘವನ್ನು ಸ್ಥಾಪನೆ ಮಾಡುವ ಮೂಲಕ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಪರಿಣಾಮ ಇಂದು ಸಜೀಪಮುನ್ನೂರು ಮೂರ್ತೆದಾರರ ಸಹಕಾರಿ ಸಂಘದಂತಹ ಸಂಸ್ಥೆಗಳು ಉತ್ತಮ ಅರ್ಥಿಕ ಸಹಕಾರಿ ಸಂಘಗಳಾಗಿ ಮೂಡಿ ಬರಲು ಸಾಧ್ಯವಾಘಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕಡಿಮೆಯಿಲ್ಲದ ರೀತಿಯಲ್ಲಿ, ಪೈಪೋಟಿಯಲ್ಲಿ ಸಹಕಾರಿ ಸಂಘಗಳು ಸೇವೆ ನೀಡುತ್ತಿವೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಿಬ್ಬಂದಿಗಳ ಭಾಷಾ ಸಮಸ್ಯೆ, ನಿಯಮಿತ ಸಮಯದ ಸೇವೆಯಿಂದಾಗಿ ಇಂದು ಗ್ರಾಹಕರು ಸಹಕಾರಿ ಸಂಘಗಳತ್ತ ಮುಖ ಮಾಡಿದ್ದಾರೆ ಎಂದು ತಿಳಿಸಿದರು. ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ೩೦ಕ್ಕಿಂತಲೂ ಅಧಿಕ ಮಹಿಳೆಯರಿಗೆ ಉದ್ಯೋಗ ನೀಡಿ ಮಹಿಳಾ ಸ್ವಾವಲಂಬನೆಗೆ ಶಕ್ತಿ ತುಂಬಿದೆ, ೨೫ ಶಾಖೆಗಳನ್ನು ಹೊಂದುವ ಹಾಗೂ ಸ್ವಂತ ಕಟ್ಟಡ ನಿರ್ಮಾಣದ ಕನಸು ನನಸಾಗಲಿ ಎಂದು ಶುಭ ಹಾರೈಸಿದರು.
ವಿಟ್ಲ ಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಸೇಫ್ ಲಾಕರ್ ಉದ್ಘಾಟಿಸಿ ಮಾತನಾಡಿ ದಕ್ಷ ಆಡಳಿತ, ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಸಿಬ್ಬಂದಿಗಳು ಇದ್ದಾಗ ಸಹಕಾರಿ ಸಂಘಗಳು ಲಾಭದಾಯಕವಾಗಿ ಬೆಳೆಯಲು ಸಾಧ್ಯವಿದೆ. ಸಾಲೆತ್ತೂರು ಪರಿಸರದಲ್ಲಿ ಹೆಚ್ಚೆಚ್ಚು ಸಹಕಾರಿ ಸಂಘಗಳು ಸ್ಥಾಪನೆಯಾಗುತ್ತಿದ್ದು ಜನರ ಆರ್ಥಿಕ ಸ್ವಾವಲಂಬನೆ, ಸ್ವಾ ಉದ್ಯೋಗ ಹಾಗೂ ಹಣಕಾಸಿನ ಉಳಿತಾಯಕ್ಕೆ ಪ್ರೇರಣೆ ನೀಡುತ್ತಿದೆ ಎಂದರು.
ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಜೀಪಮುನ್ನೂರು ಮೂರ್ತೆದಾರರ ಸಹಕಾರಿ ಸಂಘ ಮಾರ್ಚ್ ಅಂತ್ಯಕ್ಕೆ 160 ಕೋಟಿಗಿಂತಲೂ ಮಿಕ್ಕಿ ವ್ಯವಹಾರ ನಡೆಸಿ ಶೇ. 95ರಷ್ಟು ವಸೂಲಾತಿಯನ್ನು ಮಾಡಿ ತಾಲೂಕಿನ ಸಹಕಾರಿ ಸಂಘಗಳ ಪೈಕಿ ಮುಂಚೂಣಿಯಲ್ಲಿದೆ. ೧೧ ಗ್ರಾಮಗಳಿಗೆ ಸೀಮಿತವಾಗಿದ್ದ ಸಂಘ ಇಂದು ತಾಲೂಕಿನಾದ್ಯಂತ ಶಾಖೆಗಳನ್ನು ತೆರೆದು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು. ಪ್ರಾಮಾಣಿಕವಾಗಿ ವ್ಯವಹರಿಸುವ ಬಡವರಿಗೆ ಸಾಲ ನೀಡುವ ಉದ್ದೇಶವನ್ನು ಹೊಂದಿರುವ ಬ್ಯಾಂಕ್ ಇಂದು 130 ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಸೇವೆ ನೀಡುತ್ತಿದೆ. ಮಹಿಳೆಯರಿಗೆ ತ್ವರಿತ ಸಾಲ ನೀಡುವ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಆಸರೆಯಾಗಿದೆ. ಇತರ ಸಹಕಾರಿ ಸಂಘಗಳ ಜೊತೆ ಉತ್ತಮ ಬಾಂಧವ್ಯ, ವಿಶ್ವಾಸ ಇಟ್ಟುಕೊಂಡು ಸಂಘ ಮುಂದುವರಿಯುತ್ತಿದೆ ಎಂದರು.
ಬಂಟ್ವಾಳ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ ಗಣಕಯಂತ್ರ ಉದ್ಘಾಟಿಸಿದರು. ಈ ಸಂದರ್ಭ ಠೇವಣಿ ಪತ್ರ ಹಾಗೂ ಉಳಿತಾಯ ಖಾತೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನ ಪಾಲು, ದೇವದಾಸ್ ಶೆಟ್ಟಿ ಪಾಲ್ತಜೆ, ಕಟ್ಟಡದ ಮಾಲಕ ಆನಂದ ಪೂಜಾರಿ ಸಾಲೆತ್ತೂರು, ಕೊಳ್ನಾಡು ಗ್ರಾ.ಪಂ. ಸದಸ್ಯ ಪ್ರಶಾಂತ್ ಕುಮಾರ್ ಶೆಟ್ಟಿ, ಜನಾರ್ದನ ಪೂಜಾರಿ ಸಾಲೆತ್ತೂರು, ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಕೊಳ್ನಾಡು ಗ್ರಾ.ಪಂ. ಮಾಜಿ ಅಧ್ಯಕ್ಷೆ ಜಯಂತಿ ಎಸ್. ಪೂಜಾರಿ, ವಕೀಲ ಈಶ್ವರ ಪೂಜಾರಿ, ನೌಕರರ ಸಹಕಾರಿ ಸಂಘ ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸತೀಶ್, ಭಗವತಿ ಬ್ಯಾಂಕ್ ನಿರ್ದೇಶಕ ಲೀಲಾರಾಮ ಯು. ಬಿಲ್ಲವ ಸಂಘದ ಸದಸ್ಯರಾದ ಮಾಂಕು ಪೂಜಾರಿ, ಜಯರಾಮ ಪೂಜಾರಿ, ನವಚೇತನ ಯುವಕ ಸಂಘದ ಮಾಜಿ ಅಧ್ಯಕ್ಷ ಸೋಮನಾಥ, ಬಾಲಕೃಷ್ಣ ಜಿ. ಮೆಲ್ಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಮಂಡಳಿ ನಿರ್ದೆಶಕರಾದ ರಮೇಶ್ ಅನ್ನಪ್ಪಾಡಿ, ವಿಠಲ ಬೆಳ್ಚಾಡ ಚೇಳೂರು, ಅಶೋಕ್ ಪೂಜಾರಿ ಕೋಮಾಲಿ, ಕೆ. ಸುಜಾತ ಮೋಹನದಾಸ್, ವಾಣಿ ವಸಂತ, ಅರುಣ್ ಕುಮಾರ್ ಎಂ., ಆಶಿಶ್ ಪೂಜಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಜಿ., ಶಾಖಾ ವ್ಯವಸ್ಥಾಪಕಿ ಪ್ರಜ್ಞಾ ಕೆ. ಉಪಸ್ಥಿತರಿದ್ದರು.
ಸಂಘದ ನಿರ್ದೇಶಕ ಗಿರೀಶ್ ಕುಮಾರ್ ಪೆರ್ವ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಜಯಶಂಕರ್ ಕಾನ್ಸಲೆ ವಂದಿಸಿದರು.
ಮಾಜಿ ಸಚಿವ ಬಿ. ರಮಾನಾಥ ರೈ, ಪ್ರಮುಖರಾದ ಬೇಬಿ ಕುಂದರ್, ವಕೀಲ ಅಶ್ವನಿ ಕುಮಾರ್ ರೈ, ಅಬ್ಬಾಸ್ ಅಲಿ, ರತ್ನಾಕರ ನಾಡಾರ್ ಸಂಜೀವ ಪೂಜಾರಿ ಸುಭಾಶ್ ನಗರ, ಶ್ರೀ ಗುರು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್, ಮೂರ್ತೆದಾರರ ಮಹಾಮಂಡಲದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಿಶೋರ್, ಗ್ರಾ.ಪಂ. ಸದಸ್ಯ ಲೋಹಿತ್ ಮತ್ತಿತರ ಗಣ್ಯರು ಆಗಮಿಸಿ ನೂತನ ಶಾಖೆಗೆ ಶುಭಕೋರಿದರು.