ಬಂಟ್ವಾಳ: ಬ್ಯಾಂಕ್ ಆಫ್ ಬರೋಡ ಮುಲ್ಕಿ ಶಾಖೆಯ ಸೀನಿಯರ್ ಮ್ಯಾನೇಜರ್ ಪ್ರಣಾಮ್ ಕುಮಾರ್ ಚೀಪ್ ಮ್ಯಾನೇಜರ್ ಆಗಿ ಬಡ್ತಿಗೊಂಡಿದ್ದಾರೆ.
ವಿಜಯ ಬ್ಯಾಂಕ್ ಸೋಮರ ಪೇಟೆ ಬ್ರಾಂಚ್ ನಲ್ಲಿ ಸಹಾಯಕ ಪ್ರಬಂಧಕ ಹುದ್ದೆಯಲ್ಲಿ ವೃತ್ತಿಜೀವನ ಆರಂಭಿಸಿದ ಬಳಿಕ ಮಡಿಕೇರಿ ಬ್ರಾಂಚ್ ಗೆ ವರ್ಗಾವಣೆಗೊಂಡು ಅಲ್ಲಿ ಕರ್ತವ್ಯ ನಿರ್ವಹಿಸಿ ಭಡ್ತಿ ಪಡೆದು ಬಂಟ್ವಾಳ ತಾಲೂಕಿನ ಸರಪಾಡಿ ವಿಜಯ ಬ್ಯಾಂಕಿನ ಬ್ರಾಂಚ್ ಮೆನೇಜರ್ ಆಗಿ ಅಧಿಕಾರ ಸ್ವೀಕರಿಸಿದರು.
ಬಳಿಕ ಕಲ್ಲಡ್ಕ ವಿಜಯ ಬ್ಯಾಂಕಿನ ಮ್ಯಾನೇಜರ್ ಆಗಿ ವರ್ಗಾವಣೆಗೊಂಡರು ಅದೇ ಸಂದರ್ಭದಲ್ಲಿ ಕೇಂದ್ರ ಸರಕಾರದ ಆದೇಶದಂತೆ ವಿಜಯ ಬ್ಯಾಂಕ್ , ಬ್ಯಾಂಕ್ ಆಫ್ ಬರೋಡ ಜೊತೆ ಲೀನವಾಯಿತ್ತು ಇವರ ಕಾರ್ಯದಕ್ಷತೆಯನ್ನು ಪರಿಗಣಿಸಿದ ಬ್ಯಾಂಕ್ ಆಫ್ ಬರೋಡ ಸೀನಿಯರ್ ಮ್ಯಾನೇಜರ್ ಹುದ್ದೆಗೆ ಬಡ್ತಿ ನೀಡಿ ಕಲ್ಲಡ್ಕ ಬ್ಯಾಂಕಿನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕರ್ತವ್ಯದಲ್ಲಿ ಮುಂದುವರಿಯಲು ಆದೇಶಿಸಿತು. ಬಳಿಕ ಮಂಗಳೂರು ತಾಲೂಕಿನ ಮುಲ್ಕಿ ಬ್ಯಾಂಕ್ ಆಫ್ ಬರೋಡ ಶಾಖೆಗೆ ಸೀನಿಯರ್ ಮ್ಯಾನೇಜರ್ ಆಗಿ ವರ್ಗಾವಣೆಗೊಂಡರು ಪ್ರಣಾಮ್ ಕುಮಾರ್ ರವರ ಬ್ಯಾಂಕಿನ ಅಭಿವೃದ್ಧಿಗಾಗಿ ಸದಾ ಪ್ರಾಮಾಣಿಕ ಸೇವೆಯನ್ನು ಗುರುತಿಸಿದ ಬ್ಯಾಂಕ್ ಇದೀಗ ಸೀನಿಯರ್ ಮ್ಯಾನೇಜರ್ ಹುದ್ದೆಯಿಂದ ಚೀಪ್ ಮ್ಯಾನೇಜರ್ ಹುದ್ದೆಗೆ ಬಡ್ತಿ ಗೊಳಿಸಿ ಮುಲ್ಕಿ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಚೀಪ್ ಮ್ಯಾನೇಜರ್ ಆಗಿ ಮುಂದುವರಿಯಲು ಬ್ಯಾಂಕಿನ ಆಡಳಿತ ಮಂಡಳಿ ಆದೇಶಿಸಿದೆ. ಇವರು ಬಂಟ್ವಾಳ ತಾಲೂಕು ಕುರಿಯಾಳ ಜಗದೀಶ ಭಂಡಾರಿ ಹರೇಕಳ ಮತ್ತು ಮೋಹಿನಿ ಭಂಡಾರಿ ದಂಪತಿಯ ಪುತ್ರ.