ಬಂಟ್ವಾಳ: ಜಿಲ್ಲೆಯ ಪ್ರಸಿದ್ದ ದೇವಸ್ಥಾನ ವಾಗಿರುವ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 108 ತೆಂಗಿನ ಕಾಯಿ ಗಣಯಾಗ ಹಾಗೂ ಮೂಡಪ್ಪ ಸೇವೆ ಮಂಗಳವಾರ ರಾತ್ರಿ ವಿಜ್ರಂಭಣೆಯಿಂದ ನಡೆಯಿತು. ಬಂಟ್ವಾಳದ ಉದ್ಯಮಿ ನಾಗೇಶ್ ಸಾಲ್ಯಾನ್ ಹಾಗೂ ಪಲ್ಲವಿ ಎನ್. ಸಾಲ್ಯಾನ್ ಇವರು ಸೇವಾರ್ಥವಾಗಿ 108 ತೆಂಗಿನಕಾಯಿಯ ಗಣಯಾಗ, ಮೂಡಪ್ಪ ಸೇವೆ ಹಾಗೂ ರಂಗ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭ ಶ್ರೀ ದೇವರನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು.
Advertisement
Advertisement