ಬಂಟ್ವಾಳ: ಕೆಲಸ ಕೊಡಿಸುವುದಾಗಿ ಹೇಳಿ ಸುಮಾರು 6 ಲಕ್ಷ ರೂ ವಂಚನೆ ನಡೆಸಿದ ಪ್ರಕರಣವೊಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಕಳ್ಳಿಗೆ ಗ್ರಾಮದ ಮಹಿಳೆಯೊಬ್ಬರು ಈ ಕುರಿತು ದೂರು ನೀಡಿದ್ದಾರೆ. ಮಂಗಳೂರಿನ ಸುಧೀರ್ ರಾವ್ ಎಂಬ ವ್ಯಕ್ತಿ ಮೋಸ ಮಾಡಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ದೂರು ನೀಡಿದ ಮಹಿಳೆಯ ಮಕ್ಕಳಿಗೆ ಬಲ್ಲೇರಿಯಾದಲ್ಲಿ ಕೆಲಸ ಕೊಡಿಸುವುದಾಗಿ ಬಿ.ಸಿ.ರೋಡ್ ನಲ್ಲಿ 2,83,800ರೂ ನಗದು ಮತ್ತು ಗೂಗಲ್ ಪೇ ಮೂಲಕ ವಿವಿಧ ದಿನಗಳಲ್ಲಿ ಹಣವನ್ನು ತನ್ನ ಅಕೌಂಟಿಗೆ ಹಾಕಿಸಿಕೊಂಡಿದ್ದಾನೆ. ಬಳಿಕ ದೂರು ನೀಡಿದ ಮಹಿಳೆಯ ಮಕ್ಕಳನ್ನು ಮುಂಬಯಿಗೆ ಬರಲು ಹೇಳಿ ಅಲ್ಲಿ ಮಕ್ಕಳಿಂದ ರೂ.15,600 ಹಣವನ್ನು ಪಡೆದು ಬಲ್ಲೆರಿಯಾದಲ್ಲಿ ಚಳಿಯಿರುವುದರಿಂದ ಜಾಕೆಟ್ ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೋದವನು ವಾಪಾಸು ಬರದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುತ್ತಾನೆ. ಸುಧೀರ್ ರಾವ್ ಎಂಬಾತನು ಒಟ್ಟು ರೂ.6,30,000 ಹಣವನ್ನು ಕೆಲಸ ಕೊಡಿಸುವುದಾಗಿ ಪಡೆದುಕೊಂಡು ಮೋಸ ಮಾಡಿರುವುದಾಗಿದೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ.