ಬಂಟ್ವಾಳ: ಕೇಂದ್ರ ಸರಕಾರದ ನಿಕ್ಷಯ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಕ್ಷಯ ರೋಗಿಗಳಿಗೆ ಆಹಾರ ಧವಸ ಧಾನ್ಯ ವಿತರಣ ಕಾರ್ಯಕ್ರಮ ಬುಧವಾರ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು.
ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಮಹಾಬಲೇಶ್ವರ ಶೆಟ್ಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಕ್ಷಯ ರೋಗ ಉಲ್ಭಣವಾಗುತ್ತದೆ. ಪೌಷ್ಠಿಕ ಆಹಾರಗಳು, ಧವಸ ಧಾನ್ಯಗಳನ್ನು ಸೇವೆಸುವ ಮೂಲಕ ರೋಗ ನಿಯಂತ್ರಣ ಮಾಡಿಕೊಳ್ಳಬಹುದಾಗಿದೆ ಎಂದರು. ಕ್ಷಯ ಗುಣವಾಗುವ ಕಾಯಿಲೆಯಾಗಿದ್ದು ರೋಗಿಗಳು ಯಾಔಉದೇ ಆತಂಕ ಪಡದೆ ಕೋರ್ಸ್ ಮುಗಿಯುವರೆಗೆ ಪ್ರತಿದಿನ ಮಾತ್ರೆಯನ್ನು ಸೇವಿಸಬೇಕು, ಧೂಮಪಾನ, ಮಧ್ಯಪಾನದಂತಹ ವ್ಯಸನಗಳ ದಾಸರಾದಾಗ ಮಾತ್ರ ರೋಗ ಉಲ್ಭಣಿಸುತ್ತದೆ ಎಂದು ತಿಳಿಸಿದರು. ಧೂಳು ಮೊದಲಾದ ಮಾಲಿನ್ಯದಿಂದ ಕ್ಷಯ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸರ್ಕಾರ ರೋಗ ನಿರ್ಮೂಲನೆಗಾಗಿ ಪಣ ತೊಟ್ಟಿದ್ದು ೨೦೨೫ರವೇಳೆಗೆ ದೇಶವನ್ನು ಕ್ಷಯ ಮುಕ್ತ ಭಾರತವನ್ನಾಗಿ ಮಾಡುವ ಸಂಕಲ್ಪ ತೊಟ್ಟಿದೆ ಎಂದರು.
ನಿವೃತ್ತ ಪ್ರಾಧ್ಯಪಕ ಪ್ರೊ. ಅನಂತ ಪದ್ಮನಾಭ ರಾವ್ ಮಾತನಾಡಿ ನಮ್ಮ ದೈನಂದಿನ ಜೀವನಕ್ರಮಗಳು ಅಭ್ಯಾಸಗಳಾಗಿ ಶಿಸ್ತು ಮೂಡುತ್ತದೆ. ಇಂತಹ ಶಿಸ್ತು ಜೀವನ ಮೌಲ್ಯಗಳಾಗಿ ಬದಲಾವಣೆಯಾಗುತ್ತದೆ ಎಂದು ತಿಳಿಸಿದರು.
ನಿವೃತ್ತ ಬ್ಯಾಂಕಿ ಉದ್ಯೋಗಿ ಶೈಲಜಾ ಎ.ಪಿ. ರಾವ್, ಉದ್ಯಮಿ ಭುವನೇಶ್ ಪಚ್ಚಿನಡ್ಕ
ಫರಂಗಿಪೇಟೆ ರೋಟರಿ ಕ್ಲಬ್ ಅಧ್ಯಕ್ಷ ಜಯರಾಂ ಶೇಖ, ಕೊಡ್ಮಾನ್ ನವೀನ್ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಕಾರ್ಯಕ್ರಮ ನಿರೂಪಿಸಿದರು.
ಪ್ರಮುಖರಾದ ರಮೇಶ್ ತುಂಬೆ, ಪ್ರಕಾಶ್ ಕಿದೆಬೆಟ್ಟು, ದೇವದಾಸ್ ಶೆಟ್ಟಿ ಕೊಡ್ಮಾಣ್
ಫರಂಗಿಪೇಟೆ ರೋಟರಿ ಕ್ಲಬ್ ಕೋಶಾಧಿಕಾರಿ ದಿನೇಶ್ ಶೆಟ್ಟಿ ಕೊಟ್ಟಿಂಜ, ಪ್ರಶಾಂತ್ ತುಂಬೆ
ಪುದು ಗ್ರಾ.ಪಂ. ಮಾಜಿ ಅಧ್ಯಕ್ಷ ಅಖ್ತರ್ ಹುಸೇನ್, ಅರುಣ್ ಕುಮಾರ್ ನೀರೋಲ್ಬೆ, ಮೋಹನ್ ಬೆಂಜನಪದವು, ದೇವಸ್ಯ ಬಾಲಕೃಷ್ಣ ರೈ, ಸುರೇಶ್ ರೈ ಪೆಲಪಾಡಿ ಮೊದಲಾದವರು ಉಪಸ್ಥಿತರಿದ್ದರು.