ಬಂಟ್ವಾಳ: ಕ್ಷೇತ್ರದ ಜನರ ಪ್ರೀತಿ, ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡಿದ್ದು, ಮುಂದಿನ ದಿನದಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಭಾನುವಾರ ಸಂಜೆ ಕಡೇಶ್ವಾಲ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ೫.೫೦ ಕೋ.ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಬಳಿಕ ಪೆರ್ಲಾಪು ವಠಾರದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
೨೦ ಕೋಟಿ ಸದಸ್ಯರನ್ನು ಹೊಂದಿರುವ ಜಗತ್ತಿನ ಅತೀ ದೊಡ್ಡ ಪಕ್ಷ ಬಿಜೆಪಿಯಾಗಿದ್ದು ಅಭಿವೃದ್ಧಿ ನಿರಂತರವಾಗಿ ನಡೆಯುವ ಕಾರ್ಯವಾಗಿದೆ, ವಯಕ್ತಿಕ ವರ್ಚಸ್ಸಿಗಾಗಿ ಯಾವತ್ತು ಕೆಲಸ ಮಾಡಿಲ್ಲ, ಪಕ್ಷದ ಸಂಘಟನೆಯ ದೆಸೆಯಲ್ಲಿ ಮುಂದಿನ ದಿನಗಳಲ್ಲೂ ಕೆಲಸ ಮಾಡುವುದಾಗಿ ಶಾಸಕ ರಾಜೇಶ್ ನಾಕ್ ಹೇಳಿದರು.
ಕಳೆದ ಐದೂವರೆ ವರ್ಷದ ಅವಧಿಯಲ್ಲಿ ಕಡೇಶ್ವಾಲ್ಯ ಗ್ರಾ.ಪಂ.ವ್ತಾಪ್ತಿಯಲ್ಲಿ ೧೦ ಕೋ.ರೂ.ವಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಹೇಳಿದ ಅವರು ಬಂಟ್ವಾಳ ಕ್ಷೇತ್ರದಲ್ಲಿ ೧೪೯೩ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು.
ಅತಿಥಿಯಾಗಿದ್ದ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ ಪ್ರತಿಯೋರ್ವರು ರಾಜಕೀಯ ಚಿಂತನೆ ಬೆಳಸಿಕೊಳ್ಳಬೇಕು, ೨೦೩೦ ರ ವೇಳೆಗೆ ಪ್ರಪಂಚದಲ್ಲಿಯೇ ಆರ್ಥಿಕವಾಗಿ ಪ್ರಧಾನಿ ನರೇಂದ್ರ ಮೋದಿಯ ನೇತೃತ್ವದಲ್ಲಿ ದೇಶ ನಂಬರ್ ಒಂದನೇ ಸ್ಥಾನಕ್ಕೆ ಬರಲಿದೆ ಎಂದರು.
ಅಡಕೆ ಕುರಿತಾದ ಗೃಹಸಚಿವರ ಹೇಳಿಕೆ ಉಲ್ಲೇಖಿಸಿ ಬಿಜೆಪಿ ಶಾಸಕರ ರಾಜೀನಾಮೆಗೆ ಒತ್ತಾಯಿಸಿರುವ ಮಾಜಿ ಸಚಿವ ರಮಾನಾಥ ರೈ ಹೇಳಿಕೆಯನ್ನು ಖಂಡಿಸಿದ ಅವರು ಅಡಕೆ ಬೆಳೆಗಾರರ ಬಗ್ಗೆ ಮಾತನಾಡಲು ರೈ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಡಕೆ ಬೆಲೆ ೫೦೦ ರೂ.ವಿನ ಗಡಿದಾಟಿದೆ. ರೈ ಸಚಿವರಾಗಿದ್ದ ಕಾಲದಲ್ಲಿ ಅಡಕೆ ಬೆಲೆ ೧೮೦ ರೂ.ವಿನಲ್ಲೆ ಇತ್ತು. ಇದನ್ನು ಬಹಿರಂಗ ವಾಗಿ ಹೇಳಿಕೊಳ್ಳದೆ ಡಬ್ಬಲ್ ಗೇಮ್ ಆಡುವ ರೈ ಅವರು ರಾಜಕೀಯ ನಿವೃತ್ತಿ ಪಡೆಯಲಿ ಎಂದರು.
ಬಿಜೆಪಿ ಬಾಳ್ತಿಲ ಮಹಾಶಕ್ತಿಕೇಂದ್ರದ ಅಧ್ಯಕ್ಷ ಮೋಹನ್ ಪಿ.ಎಸ್ ಅಧ್ಯಕ್ಷತೆ ವಹಿಸಿದ್ದರು.
ಕಡೇಶ್ವಾಲ್ಯ ಗ್ರಾ .ಪಂ.ಉಪಾಧ್ಯಕ್ಷೆ ಜಯ ಆರ್.ದೇವಾಡಿಗ, ಕಡೇಶ್ವಾಲ್ಯ ವ್ಯ.ಸೇ.ಸ ಸಂಘ ನಿಯಮಿತದ ಅಧ್ಯಕ್ಷ ವಿದ್ಯಾಧರ ರೈ, ಬಿಜೆಪಿ ಬಂಟ್ವಾಳ ಮಂಡಲ ಪ್ರ.ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ,ಕಾರ್ಯದರ್ಶಿ ರಮಾನಾಥ ರಾಯಿ,ಕಡೇಶ್ವಾಲ್ಯ ಶಕ್ತಿ ಕೇಂದ್ರದ ಅಧ್ಯಕ್ಷ ನಾರಾಯಣ ಸಪಲ್ಯ,ಕಡೇಶಿವಾಲಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಾಂತಪ್ಪ ಪೂಜಾರಿ, ಕಡೇಶಿವಾಲಯ ಗ್ರಾಮದ ಬೂತ್ ಸಮಿತಿ ಅಧ್ಯಕ್ಷರು ಉಪಸ್ಥಿತರಿದ್ದರು.
ಇದೇ ವೇಳೆ ಶಾಸಕ ರಾಜೇಶ್ ನಾಕ್ ಅವರನ್ನು ಗ್ರಾಮಸ್ಥರ ಪರವಾಗಿ ಅಭಿನಂದಿಸಲಾಯಿತು.
ಕಡೇಶ್ವಾಲ್ಯ ಗ್ರಾ.ಪಂ.ಅಧ್ಯಕ್ಷ ಸುರೇಶ್ ಬನಾರಿ ಸ್ವಾಗತಿಸಿ, ಪ್ರಸ್ತಾವಿಸಿದರು. ಶ್ರುತಿನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮೊದಲಿಗೆ ಕಡೇಶ್ವಾಲ್ಯ ದೇವಸ್ಥಾನ ೯೦ ಲಕ್ಷ ರೂ.ಗಳ ತಡೆಗೋಡೆ ಕಾಮಗಾರಿ ವೀಕ್ಷಿಸಿದ ಶಾಸಕರು ಬಳಿಕ ಆರಿಕಲ್ಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ತಡೆಗೋಡೆ ೫೦ ಲಕ್ಷ ರೂ, ಪೆರ್ಲಾಪು-ಕೊರತಿಗುರಿ-ಕುಡುಕುಮೇರು ರಸ್ತೆ-೧.೨೦ ಕೋ.ರೂ, ಶೇರಾ-ನೀರಕಜೆ ರಸ್ತೆ-೧೦ ಲಕ್ಷ ರೂ, ಮುಂಡಾಲ ಕಿರುಸೇತುವೆ-೧೦ ಲಕ್ಷ ರೂ, ಬಟ್ರಬೆಟ್ಟು-ಬೋರುಗುಡ್ಡೆ ರಸ್ತೆ ೩೦ ಲಕ್ಷ ರೂ, ಇರ್ಕ್ಲಾಜೆ-ಬೀರಕೋಡಿ ರಸ್ತೆ-೫ ಲಕ್ಷ ರೂ, ಪಡ್ಡಂಗೆ-ಕಾಡಬೆಟ್ಟು ರಸ್ತೆ-೧೦ ಲಕ್ಷ ರೂ, ಓಡಲು ರಸ್ತೆ-೧೮ ಲಕ್ಷ ರೂ, ಅಮೈ-ಹಿರ್ತಡ್ಕ ರಸ್ತೆ ೧೦ ಲಕ್ಷ ರೂ, ತಾರಿಗುರಿ ರಸ್ತೆ-೧೦ ಲಕ್ಷ ರೂ, ಗ್ರಾ.ಪಂ.ಅಮೃತ ಸೋಲಾರ್ ವ್ಯವಸ್ಥೆ-೮ ಲಕ್ಷ ರೂ, ಕೊರತಿಗುರಿ ಸಾರ್ವಜನಿಕ ಶೌಚಾಲಯ-೫ ಲಕ್ಷ ರೂ. ಹಾಗೂ ಎಲ್ಲಾಜೆ-ತಾರಿಗುರಿ ರಸ್ತೆ ೧೦ ಲಕ್ಷ ರೂ.ಕಾಮಗಾರಿಯನ್ನು ಶಾಸಕರು ಉದ್ಘಾಟಿಸಿದರು.
ನಡ್ಯೇಲು-ಮುನ್ನಿಮಾರು ರಸ್ತೆ-೧೦ ಲಕ್ಷ ರೂ, ಬೊಳ್ಳಾರು-ಭಂಡರಿಬೆಟ್ಟು ರಸ್ತೆ-೧೦ ಲಕ್ಷ ರೂ, ಮುಂಡಾಲ-ಪ್ರತಾಪನಗರ ರಸ್ತೆ ೧೦ ಲಕ್ಷ ರೂ, ಓಣಿಬಾಗಿಲು-ಬನಾರಿ ರಸ್ತೆ-೨೦ ಲಕ್ಷ ರೂ, ಕುರುಬ್ಲಾಜೆ-ಕೊರತಿಗುರಿ ರಸ್ತೆ ೧೦ ಲಕ್ಷ ರೂ, ಬೋರುಗುಡ್ಡೆ-ಗುಮ್ಮೊಡಿ ರಸ್ತೆ-೧೦ ಲಕ್ಷ ರೂ, ಕಲ್ಲಾಜೆಪಲ್ಕೆ-ಮುಂಡಾಲ ರಸ್ತೆ ೫ ಲಕ್ಷ ರೂ, ತಾರಿಗುರಿ-ದಾಳಿಂಬ ರಸ್ತೆ ೨೫ ಲಕ್ಷ ರೂ, ಗ್ರಾ.ಪಂ.ಅಮೃತ ಭವನ-೨೫ ಲಕ್ಷ ರೂ, ಮುಚ್ಚಿಲ-ನೇಜಿನಡ್ಕ ರಸ್ತೆ-೧೦ ಲಕ್ಷ ರೂ, ಮುಚ್ಚಿಲ-ಕಾಡಬೆಟ್ಟು ರಸ್ತೆ ೧೮ ಲಕ್ಷ ರೂ. ಶಿಲಾನ್ಯಾಸವನ್ನು ಶಾಸಕರು ನೆರವೇರಿಸಿದರು.