ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಸಾಧಕರಿಗೆ ಸನ್ಮಾನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಹಾಗೂ ಹೊಸವರ್ಷಾಚರಣೆ ಕಾರ್ಯಕ್ರಮ ಶನಿವಾರ ರಾತ್ರಿ ಬಿ.ಸಿ ರೋಡಿನ ಕುಲಾಲ ಭವನದಲ್ಲಿ ನಡೆಯಿತು.
ರಾಜ್ಯಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ,ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಪತ್ರಕರ್ತ ವೆಂಕಟೇಶ್ ಬಂಟ್ವಾಳ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಚಿತ್ರ ಕಲಾವಿದ ಮನೋಜ್ ಕನಪ್ಪ್ಪಾಡಿ ಮತ್ತು ಹೆಣ್ಣು,ಗಂಡು ಸ್ವರದಲ್ಲಿ ಏಕ ಕಾಲದಲ್ಲಿ ಹಾಡುವ ಕಲಾವಿದ ರಾಜೇಶ್ ಸಜೀಪ ರವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷರಾದ ಚಿತ್ತರಂಜನ್ ಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಜಿಲ್ಲಾ ಪ್ರಕಾಶ್ ಕಾರಂತ್, ಉಪ ಗವರ್ನರ್ ಮಂಜುನಾಥ್ ಆಚಾರ್ಯ ಅವರನ್ನು ಕ್ಲಬ್ ವತಿಯಿಂದ ಗೌರವಿಸಲಾಯಿತು. ಇದೇ ವೇಳೆ ೨೦೨೪-೨೫ನೆ ಸಾಲಿನ ನೂತನ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಸರ್ವಾನುಮತದ ಆಯ್ಕೆಯನ್ನು ಪ್ರಕಟಿಸಲಾಯಿತು, ಕಾರ್ಯದರ್ಶಿ ಉಮೇಶ್ ಆರ್ ಮೂಲ್ಯ ಅವರು ತಿಂಗಳ ವರದಿ ವಾಚಿಸಿ, ವಂದಿಸಿದರು ಬಳಿಕ ರೋಟರಿ ಅನೆಟ್ಸ್ ಮತ್ತು ಆನ್ಸ್ ನವರಿಂದ ನೃತ್ಯ ಮತ್ತು ರಸಮಂಜರಿ ಕಾರ್ಯಕ್ರಮ ನಡೆಯಿತು. ಎಲ್ಲಾ ಸದಸ್ಯರು ಭಾಗವಹಿಸಿ ಸಂಭ್ರಮದಿಂದ ಕ್ಯಾಲೆಂಡರ್ ಹೊಸ ವರ್ಷವನ್ನು ಬರಮಾಡಿಕೊಂಡರು.