ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಇಲ್ಲಿಗೆ ಜಿಲ್ಲಾ ಗವರ್ನರ್ ಎಚ್ . ಆರ್. ಕೇಶವ್ ಅವರ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು.
ಬಿ.ಸಿ.ರೋಡಿನ ರೋಟರಿ ಬಿ.ಎ. ಸೋಮಯಾಜಿ ಮೆಮೋರಿಯಲ್ ಹಾಲ್ ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್. ಕೇಶವ ಮಾತನಾಡಿ ಬಂಟ್ವಾಳ ಆರ್ ಸಿ ಬಿ. ಯಾವಾಗಲೂ ಗೆಲುವಿನ ಹಾದಿಯಲ್ಲಿ ಸಾಗುತ್ತಿದೆ ಎಂದು ತಿಳಿಸಿದರು. ಕಲ್ಲಡ್ಕ ಮ್ಯೂಸಿಯಂ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಇಂಟರಾಕ್ಟ್ ಕ್ಲಬ್ ಸದಸ್ಯರನ್ನು ಮ್ಯೂಸಿಯಂ ಗೆ ಭೇಟಿ ಮಾಡಿಸುವಂತೆ ಮನವಿ ಮಾಡಿದ ಅವರು ಅಲ್ಲಿ ಅದ್ಬುತ ಸಂಗ್ರಹಗಳು ಇದೆ ಎಂದರು. ರೋಟರಿ ಕ್ಲಬ್ ಬಂಟ್ವಾಳದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಪ್ರಕಾಶ್ ಬಾಳಿಗ ಪ್ರಾಸ್ತಾವಿಕ ವಾಗಿ ಮಾತನಾಡಿ ರೂ. 75 ಲಕ್ಷ ವೆಚ್ಚದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಬ್ಲಡ್ ಬ್ಯಾಂಕ್ ಸ್ಥಾಪಿಸುತ್ತಿದ್ದು ಈಗಾಗಲೇ 56.40 ಲಕ್ಷ ರೂಪಾಯಿ ಗ್ಲೋಬಲ್ ಗ್ರಾಂಟ್ ಬಂದು ಖಾತೆಗೆ ಜಮೆಯಾಗಿದ್ದು ಆದಷ್ಟು ಶೀಘ್ರ ರಕ್ತನಿಧಿ ಸಾಪಿಸುವುದಾಗಿ ತಿಳಿಸಿದರು. ಜಿಲ್ಲಾ ಕ್ರೀಡಾಕೂಟ ಬಂಟ್ವಾಳ ಹಾಗೂ ಮೂಡಬಿದರೆ ರೋಟರಿ ಕ್ಲಬ್ ಸಹಯೋಗದಲ್ಲಿ ನಡೆಯಲಿದೆ. ಶಾಲೆಗಳಿಗೆ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ, ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಹಾಯಕ ಗವರ್ನರ್ ಲಾರೆನ್ಸ್ ಗೋನ್ಸ್ವಾಲಿಸ್, ಮಾತನಾಡಿ ರೋಟರಿ ಕ್ಲಬ್ ಬಂಟ್ವಾಳವೊಂದು ಪ್ರತಿಷ್ಢಿತ ಘಟಕವಾಗಿದ್ದು ಇಲ್ಲಿನ ಸೇವಾ ಕಾರ್ಯಗಳು ಅಫೂರ್ವವಾದುದು ಎಂದು ತಿಳಿಸಿದರು.
ಈ ಸಂದರ್ಭ ವಿವಿಧ ಶಾಲೆಗಳಿಗೆ ಕ್ಲಬ್ ವತಿಯಿಂದ ಕೊಡಗೆಗಳನ್ನು ನೀಡಲಾಯಿತು. ರೋಟರಿ ಫೌಂಡೇಶನ್ ಗೆ ದೇಣಿಗೆ ನೀಡಿದವರನ್ನು ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳಾದ ವೈಷ್ಣವಿ, ಸೌರವ್ ರಿತೇಶ್ ಬಾಳಿಗ ಅವರನ್ನು ಅಭಿನಂದಿಸಲಾಯಿತು.
ವಲಯ ಸೇನಾನಿ ರವೀಂದ್ರ ದರ್ಬೇ, ನಿಕಟ ಪೂರ್ವಾಧ್ಯಕ್ಷ ಪುಷ್ಪರಾಜ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸದಾಶಿವ ಬಾಳಿಗ ವಾರ್ಷಿಕ ವರದಿ ವಾಚಿಸಿದರು. ಸದಸ್ಯ ಮಹಮ್ಮದ್ ಮುಸ್ತಾಫ ಕಾರ್ಯಕ್ರಮ ನಿರೂಪಿಸಿದರು.