ಮುಂಬಯಿ: ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ರಂಗಭೂಮಿ ಪ್ರಯೋಗಗಳ ತಪಾಸಣಾ (ಸೇನ್ಸರ್) ಮಂಡಳಿ ಸದಸ್ಯರನ್ನಾಗಿ ಕಳೆದ ಅನೇಕ ವರ್ಷಗಳಿಂದ ಕನ್ನಡ ಮತ್ತು ತುಳು ಭಾಷಾ ಪರಾಮರ್ಶಕರಾಗಿದ್ದ ರಂಗ ಎಸ್.ಪೂಜಾರಿ ಮತ್ತು ಪತ್ರಕರ್ತ ರೋನ್ಸ್ ಬಂಟ್ವಾಳ್ ಅವರನ್ನು ನೇಮಗೊಳಿಸಿದೆ.


ಸರ್ಕಾರದ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯು ನಾಟಕಗಳು, ಏಕಾಂಕ ನಾಟಕಗಳು ಮತ್ತು ವಿವಿಧ ಮನರಂಜನೆಗಳ ಸಂಹಿತೆಯನ್ನು ಪೂರ್ವವೀಕ್ಷಿಸಲು ಭಾಷಾತಜ್ಞತರ ನೇಮಕ ನಡೆಸಿ ಮಂಡಳಿ ತನ್ನ ಆದೇಶ ಹೊರಡಿಸಿದೆ. ಸರ್ಕಾರದ ನಿರ್ಧಾರದಂತೆ ರಾಜ್ಯದ ಮರಾಠಿ ಮತ್ತು ಹಿಂದಿ ಹೊರತುಪಡಿಸಿ ಇತರ ಭಾಷೆಗಳ ಲ್ಲಿ ಸ್ವೀಕರಿಸಿದ ಮನರಂಜನಾ ಪ್ರಯೋಗಗಳ ಸಂಹಿತೆಯನ್ನು ಪರಿಶೀಲಿಸಲು ಇನ್ನಿತರ ಭಾಷೆಗಳಿಗೆ ಭಾಷಾತಜ್ಞರ ಪರಿನಿರೀಕ್ಷಕರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಕನ್ನಡ, ತುಳು ಮತ್ತು ರೋಮನ್ ಲಿಪಿಯನ್ನೊಳಗೊಂಡ (ಗೋವಾ) ಕೊಂಕಣಿ ಭಾಷೆಗಳಿಗೆ ರೋನ್ಸ್ ಬಂಟ್ವಾಳ್ ಅವರನ್ನು ನೇಮಿಸಿದೆ.

ಬೆಂಗಾಲಿ, ಇಂಗ್ಲಿಷ್, ಪಂಜಾಬಿ, ಗುಜರಾತಿ, ತೆಲುಗು, ತಮಿಳು, ಮಾಲ್ವಾನಿ, ರಾಜಸ್ಥಾನಿ, ಸಿಂದಿ ಗೋವಾ, ಮಲಯಾಳಂ ಭಾಷೆಗಳಿಗೂ ನುರಿತ ಭಾಷಾತಜ್ಞತರನ್ನು ನೇಮಿಸಿ ಆದೇಶ ಹೊರಡಿಸಿದ್ದು ಬೋರ್ಡ್ ಆಫ್ ಇನ್ಸ್ಪೆಕ್ಷನ್ ಆಫ್ ಥಿಯೇಟರ್ ಇದರ ಕಾರ್ಯದರ್ಶಿ ಎಸ್.ಪಿ ಖಮ್ಕರ್ ಅಧಿಕೃತ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

