
ಮೂಡಬಿದಿರೆ; ಡಾ.ಮೋಹನ ಆಳ್ವ ಅವರ ತೀರ್ಥರೂಪ ಶತಾಯುಷಿ ಆನಂದ ಆಳ್ವ ನಿಧನ
ಮೂಡುಬಿದಿರೆ:ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾಎಂ. ಮೋಹನ ಆಳ್ವ ಅವರ ತಂದೆ ಮಿಜಾರುಗುತ್ತು ಆನಂದ ಆಳ್ವ(106) ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ ಮಧ್ಯಾಹ್ನ ನಿಧನರಾದರು.


ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳ ಹಿಂದೆ ಅವರನ್ನು ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಕಂಬಳ ಯಜಮಾನರಾಗಿದ್ದು ಮಿಜಾರಿನಲ್ಲಿ ಕಂಬಳ ಆಯೋಜಿಸಿ ಆಗಿನ ಮುಖ್ಯಮಂತ್ರಿ ಗುಂಡೂರಾವ್ ಅವರಿಂದ ಉದ್ಘಾಟಿಸಿದ್ದರು. ಪ್ರಗತಿಪರ ಕ್ರಷಿಕರಾಗಿದ್ದು ಭತ್ತ, ಅಡಿಕೆ, ತೆಂಗು, ಕೊಕ್ಕೊ ಬೆಳೆಸುತ್ತಿದ್ದರು. ಹೈನುಗಾರಿಕೆಯಲ್ಲು ತೊಡಗಿಸಿಕೊಂಡಿದ್ದರು. ಪುತ್ರ ಡಾ. ಎಂ ಮೋಹನ ಆಳ್ವ ಅವರ ಆಳ್ವಾಸ್ ಹೆಲ್ತ್ ಸೆಂಟರ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಪ್ರಗತಿಗೆ ತಂದೆ ಬೆಂಬಲವಾಗಿದ್ದರು. ಡಾ.ಎಂ. ಮೋಹನ ಆಳ್ವ ಸಹಿತ ಮೂವರು ಪುತ್ರರು ಓರ್ವ ಪುತ್ರಿ ಇದ್ದಾರೆ
