ಬಂಟ್ವಾಳ: ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇದರ ಆಶ್ರಯದಲ್ಲಿ ಮಂಗಳೂರಿನ ಪುರಭವನದಲ್ಲಿ ನಡೆಯುವ ಪ್ರಪ್ರಥಮ ಉಭಯ ಜಿಲ್ಲೆಗಳ ಗ್ಯಾರೇಜ್ ಮಾಲಕರ ಹಾಗೂ ನೌಕರರ ಬೃಹತ್ ಮಹಾಸಮಾವೇಶದ ಪ್ರಯುಕ್ತ ಬಂಟ್ವಾಳ ವಲಯ ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಸೋಮವಾರ ಬೆಳಿಗ್ಗೆ ಬಿ.ಸಿ.ರೋಡಿನಿಂದ ಬೈಕ್ ರ್ಯಾಲಿ ಹಾಗೂ ವಾಹನ ಜಾಥ ನಡೆಯಿತು.
ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ವಾಹನ ಜಾಥಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭ ಗ್ಯಾರೇಜ್ ಮಾಲಕರ ಸಂಘದ ಬಂಟ್ವಾಳ ವಲಯ ಅಧ್ಯಕ್ಷ ಜಗದೀಶ್ ರೈ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸಾಲ್ಯಾನ್, ಕೋಶಾಧಿಕಾರಿ ಜನಾರ್ದನ ಕುಲಾಲ್, ಸಂಚಾಲಕ ಸುಧಾಕರ ಸಾಲ್ಯಾನ್, ಪ್ರಮುಖರಾದ ಗಣೇಶ್ ಸುವರ್ಣ ತುಂಬೆ, ಅಣ್ಣು ಪೂಜಾರಿ, ರಾಜೇಶ್, ರಮೇಶ್ ಗಣೇಶ್ ಟಯರ್ಸ್, ಸುಧೀರ್, ರಮೇಶ್ ಭಂಡಾರಿ, ಪ್ರಶಾಂತ ಭಂಡಾರ್ಕರ್ ಮೊದಲಾದವರು ಉಪಸ್ಥಿತರಿದ್ದರು. ಪೇಟ ಧರಿಸಿ ಗ್ಯಾರೇಜ್ ಮಾಲಕರ ಸಂಘದ ಸದಸ್ಯರು ಗಮನ ಸೆಳೆದರೆ, ಗ್ಯಾರೇಜ್ ಜೀವನ ಪ್ರತಿಬಿಂಬಿಸುವ ಸ್ತಬ್ದ ಚಿತ್ರ ಮೆರವಣಿಗೆಯ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು