Advertisement
ಬಂಟ್ವಾಳ: ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ,ನೇತ್ರಾವತಿ ವಲಯ ಜಿಲ್ಲಾ ಸಮಿತಿ ವತಿಯಿಂದ ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ, ಬಂಟ್ವಾಳ ರಥ ಸಪ್ತಮಿ ಪ್ರಯುಕ್ತ ಭಾನುವಾರ ಮುಂಜಾನೆ ಸಾಮೂಹಿಕ 108 ಸೂರ್ಯ ನಮಸ್ಕಾರ ನಡೆಯಿತು.
ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ,
ಗ್ರಾಮಣಿ ವೆಂಕಟರಮಣ ಮುಚ್ಚಿನ್ನಯ ಕಳಿಮರ್
ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ ದಕ್ಷಿಣ ಕನ್ನಡ ಬಂಟ್ವಾಳ ತಾಲೂಕು ಪ್ರಾಂತ ಸಂಚಾಲಕ, ಸಂಘಟನ ವಿಭಾಗದ ಹರೀಶ, ಪ್ರಾಂತ ಪ್ರತಿನಿಧಿ ಶಿವಾನಂದ, ಜಿಲ್ಲಾ ಶಿಕ್ಷಣ ಪ್ರಮುಖ ಹರೀಶ್. ತಾಲೂಕು ಸಹ ಸಂಚಾಲಕಿ ನಯನ, ತಾಲೂಕು ವಿಸ್ತರಣ ಪ್ರಮುಖ್ ಕಿಶೋರ್ ಉಪಸ್ಥಿತರಿದ್ದರು.
ರಥಸಪ್ತಮಿಯ ವಿಶೇಷತೆ ಬಗ್ಗೆ ಲೋಕಯ್ಯ ಬೌದ್ಧಿಕ್ ನೀಡಿದರು. ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಸುರೇಶ ವಂದಿಸಿದರು.
Advertisement