ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಕಾಪು ಶ್ರೀ ಉಮಾಮಹೇಶ್ವರ ದೇವಸ್ಥಾನದ ಪುನರ್ ನಿರ್ಮಾಣದ ಪ್ರಯುಕ್ತ ನೂತನ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಉಡುಪಿ ಅದಮಾರು ಮಠದ ಕಿರಿಯ ಯತಿವರ್ಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಶಿಲಾನ್ಯಾಸ ನೆರವೇರಿಸಿದರು. ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಆಶೀರ್ವಚನ ನೀಡಿ ಮಾತನಾಡಿ, ಪ್ರಕೃತಿಯಲ್ಲಿ ದೇವರನ್ನು ಕಂಡ ಸಂಸ್ಕೃತಿ ನಮ್ಮದು. ಪ್ರಕೃತಿ ಆರಾಧನೆ ಮೂಲಕ ದೇವರನ್ನು ಕಾಣಬೇಕು.ಪ್ರಕೃತಿಗೆ ಹಾನಿಯಾಗದಂತೆ ದೇವಸ್ಥಾನ ನಿರ್ಮಾಣವಾಗುವ ಮೂಲಕ ಮಾದರಿ ಬ್ರಹ್ಮಕಲಶೋತ್ಸವ ನಡೆಯಬೇಕು ಎಂದು ನುಡಿದರು.
ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಪ್ರ.ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಅವರು ಆಶೀರ್ವಚನ ನೀಡಿದರು. ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರದ ತಂತ್ರಿಗಳಾದ ಶ್ರೀಪಾದ ಪಾಂಗಣ್ಣಾಯ ಪ್ರಸ್ತಾವಿಸಿದರು. ಅಂಡಿಂಜೆ ಶ್ರೀ ಸುಽಂದ್ರ ವಿಷ್ಣುತೀರ್ಥ ಪ್ರಭು ಶ್ರೀ ಪಾದರು,ಶ್ರೀ ಕ್ಷೇ.ಧ.ಗ್ರಾ.ಯೋಜನೆ ಸಮುದಾಯ ಮತ್ತು ಅಭಿವೃದ್ಧಿ ವಿಭಾಗ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಇರ್ವತ್ತೂರು ಗ್ರಾ.ಪಂ.ಅಧ್ಯಕ್ಷ ಎಂ.ಪಿ.ಶೇಖರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ, ಆಡಳಿತ ಸಮಿತಿ ಅಧ್ಯಕ್ಷ ಪ್ರಕಾಶ್ಚಂದ್ರ ಆಳ್ವ,ಕ್ಷೇತ್ರದ ಅರ್ಚಕ ಪ್ರಸನ್ನ ಕಕೃಣ್ಣಾಯ, ಶ್ರೀ ಕ್ಷೇತ್ರ ಪೂಂಜದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರತ್ನ ಕುಮಾರ ಚೌಟ, ಪದವು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ, ಚೆನ್ನೈತ್ತೋಡಿ ಗ್ರಾ.ಪಂ.ಉಪಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ಸಮಿತಿ ಗೌರವಾಧ್ಯಕ್ಷರಾದ ಜಯಪ್ರಕಾಶ್ ಶೆಟ್ಟಿ ಬುಳೇರಿ, ವಿನಾಯಕ ಪ್ರಭು ಆಲದಪದವು, ಸುಂದರ ಶೆಟ್ಟಿ ಬಜೆ, ಜಿ.ಕೆ.ಭಟ್ ಕಕ್ಕಿಬೆಟ್ಟು, ಡಾ.ರಾಮಕೃಷ್ಣ ಎಸ್., ಶೀನ ಶೆಟ್ಟಿ ಕುಂಡೋಳಿಗುತ್ತು, ದಾಮೋದರ ಶೆಟ್ಟಿ ಕಂಚಾರು, ನವೀನಚಂದ್ರ ಶೆಟ್ಟಿ ಅಜ್ಜಿ ಬೆಟ್ಟು, ಮಹಾಲಿಂಗ ಶರ್ಮ,ಶಂಕರ ಶೆಟ್ಟಿ ಪಲ್ಕೆತ್ತು,ಕಾರ್ಯಾಧ್ಯಕ್ಷರಾದ ಬೂಬ ಸಫಲ್ಯ, ಯುವರಾಜ ಆಳ್ವ, ವೃಷಭನಾಥ ಇಂದ್ರ, ಮಂಜಪ್ಪ ಮೂಲ್ಯ, ಪ್ರಭಾಕರ ಶೆಟ್ಟಿ, ಯತೀಶ್ ಶೆಟ್ಟಿ, ಕೊರಗ ಶೆಟ್ಟಿ, ಜಯಚಂದ್ರ ಬೊಳ್ಮಾರು, ಗಂಗಾಧರ ಶೆಟ್ಟಿ, ಭಾರತಿ ರೈ. ಪ್ರಕಾಶ ಗಟ್ಟಿ, ದೇವದಾಸ ಶೆಟ್ಟಿ, ಆಡಳಿತ ಸಮಿತಿ ಸದಸ್ಯರಾದ ಪ್ರದೀಪ್ ಶೆಟ್ಟಿ, ಆನಂದ ಮೂಲ್ಯ, ಮಮತಾ ಗಟ್ಟಿ, ಪದ್ಮಾವತಿ ಶೆಟ್ಟಿ, ಸುಂದರ ನಾಕ, ಕಾರ್ಯದರ್ಶಿ ಚಂದಪ್ಪ ಪೂಜಾರಿ ಆಗಮೆ ಮತ್ತಿತರರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಪ್ರ.ಕಾರ್ಯದರ್ಶಿ ಯೋಗೀಶ್ ಕಳಸಡ್ಕ ಸ್ವಾಗತಿಸಿದರು.ಉದಯ ಕುಮಾರ್ ಶೆಟ್ಟಿ ಮೇಲ್ಮನೆ ವಂದಿಸಿದರು. ರಂಗ ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.