ಬಂಟ್ವಾಳ: ಶ್ರೀ ತಿರುಮಲ ವೆಂಕಟ್ರಮಣ ಸ್ವಾಮಿ ದೇವಸ್ಥಾನ ಬಂಟ್ವಾಳ ಇಲ್ಲಿನ ಕಾಲಾವಧಿ ಬ್ರಹ್ಮ ರಥೋತ್ಸವ ಕಾರ್ಯಕ್ರಮವು ಫೆ.22 ರಿಂದ ಫೆ. 27 ರವರೆಗೆ ಜರುಗಲಿದ್ದು ಭಕ್ತಾದಿಗಳಿಗೆ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಮಂಗಳೂರು, ಪುತ್ತೂರು, ಉಪ್ಪಿನಂಗಡಿ ಕಡೆಯಿಂದ ಬರುವವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಬದಿಯ ಜಾಗದಲ್ಲಿ ಹಾಗೂ ದೇವಳದ ಸಮೀಪ ಇರುವ ಎಸ್.ವಿ. ಎಸ್ ದೇವಳದ ವಿದ್ಯಾ ಸಂಸ್ಥೆಯ ವಠಾರದಲ್ಲಿ ನಿಲ್ಲಿಸಬೇಕು. ಮೂಡಬಿದರೆ , ಕಾರ್ಕಳ, ಕಡೆಯಿಂದ ಬರುವ ವಾಹನಗಳು ಬೈಪಾಸ್ ಜಂಕ್ಷನ್ ನಿಂದ ಬಂಟ್ವಾಳ ಪೇಟೆ ರಸ್ತೆಯಲ್ಲಿ ದೇವರಕಟ್ಟೆಯ ಬಸ್ ನಿಲ್ದಾಣದಲ್ಲಿ ವಾಹನವನ್ನು ನಿಲ್ಲಿಸ ಬೇಕು. ಪುಂಜಾಲ ಕಟ್ಟೆ, ಗುರುವಾಯನಕೆರೆ, ಬೆಳ್ತಂಗಡಿ ಉಜಿರೆ ಕಡೆಯಿಂದ ಬರುವ ಭಕ್ತಾದಿಗಳು ಜಕ್ರಿಬೆಟ್ಟಿನಿಂದ ಬಂಟ್ವಾಳ ಪೇಟೆಯ ತ್ಯಾಗರಾಜ ರಸ್ತೆಯಲ್ಲಿ ಸರಸ್ವತಿ ನರ್ಸಿಂಗ್ ಹೋಂ ಇದರ ಎದುರುಗಡೆ ಇರುವ ವಿಶಾಲ ಮೈದಾನ ದಲ್ಲಿ ನಿಲ್ಲಿಸಲು ತಿಳಿಸಲಾಗಿದೆ.
ಬ್ರಹ್ಮ ರಥೋತ್ಸವದ ಹಿನ್ನಲೆಯಲ್ಲಿ ಈ ದಿನಗಳಲ್ಲಿ ಬಂಟ್ವಾಳ ಪೋಸ್ಟ್ ಆಫೀಸ್ನಿಂದ ಪೂರ್ಣಿಮಾ ಸ್ಟೋರ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನವನ್ನು ನಿಲ್ಲಿಸುವುದನ್ನು ನಿಷೇಧಿಸಲಾಗಿದೆ ಹಾಗಾಗಿ ದೇವಳದ ಕಡೆಯಿಂದ ಸೂಚಿಸಿದ ಸ್ಥಳದಲ್ಲಿಯೇ ತಮ್ಮ ವಾಹನವನ್ನು ನಿಲ್ಲಿಸಿ ಸಹಕರಿಸುವಂತೆ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.