ಬಂಟ್ವಾಳ: ಫೆ.22 ರಿಂದ ಫೆ. 28ರವರೆಗೆ ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದದಲ್ಲಿ ನಡೆಯಲಿರುವ ಅಷ್ಟಬಂಧ, ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಬುಧವಾರ ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಮೂಲಕ ಚಾಲನೆ ಸಿಕ್ಕಿತು.
ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದ ಹೊರೆಕಾಣಿಕೆ ಸಂಗ್ರಹಣಾ ಕೇಂದ್ರ ಬಳಿ ಗಣ್ಯರ ಸಮಕ್ಷಮದಲ್ಲಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಚೆಂಡೆ, ಗೊಂಬೆ ಕುಣಿತ, ಕೀಲು ಕುದರೆ ಕುಣಿತ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ರಾಷ್ಟ್ರೀಯ ಹೆದ್ದಾರಿ ಮೂಲಕ ಕೈಕಂಬಕ್ಕೆ ಹೋಗಿ, ಕೈಕಂಬದ ಸಂಗ್ರಹಣ ಕೇಂದ್ರದ ಬಳಿ ಹಸಿರು ಹೊರೆಕಾಣಿಕೆಯನ್ನು ಸೇರಿಸಿಕೊಂಡು ಮತ್ತೆ ವಾಪಸ್ಸು ದೇವಸ್ಥಾನದತ್ತ ಮೆರವಣಿಗೆ ಸಾಗಿ ಬಂತು. ಹೊರೆ ಕಾಣಿಕೆ ಹೊತ್ತ ವಾಹನಗಳು ಮೆರವಣಿಗೆಯ ಸರತಿಯಲ್ಲಿ ಸಾಗಿ ಸಂಭ್ರಮದ ಬ್ರಹ್ಮಕಲಶೋತ್ಸವಕ್ಕೆ ಮುನ್ನುಡಿ ಬರೆಯಿತು.
ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜೀರ್ಣೊದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಇಂದಿರೇಶ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ರಾಮಚಂದ್ರ ರಾವ್, ಹೊರೆಕಾಣಿಕೆ ಸಮಿತಿ ಸಂಚಾಲಕ ಕೃಷ್ಣಪ್ಪ ಬಿ. ಕಲ್ಲಡ್ಕ, ಸಹ ಸಂಚಾಲಕರಾದ ಭಕ್ತ ಕುಮಾರ್ ಶೆಟ್ಟಿ, ಶಿವಾನಂದ ಮೊಡಂಕಾಪು, ಪ್ರಶಾಂತ್ ಭಟ್, ಸದಾಶಿವ ಕೈಕಂಬ, ವಿವಿಧ ಸಮಿತಿ ಪ್ರಮುಖರಾದ ತಿಮ್ಮಪ್ಪ ರೈ ಏರಿಮಾರ್, ಸದಾಶಿವ ನಾಯಕ್, ಮಂಜುನಾಥ ಪೈ, ಐತಪ್ಪ ಆಳ್ವ, ಸದಾನಂದ ಶೆಟ್ಟಿ, ಐತ್ತಪ್ಪ ಪೂಜಾರಿ, ಸಂಕಪ್ಪ ಶೆಟ್ಟಿ, ಸತೀಶ್ ಭಂಡಾರಿ, ಬಿ.ಮೋಹನ್, ಜಯರಾಮ ಶೆಟ್ಟಿ, ರಮೇಶ್ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ಭುವನೇಶ್ ಪಚ್ಚಿನಡ್ಕ, ಶಂಕರ್ ಶೆಟ್ಟಿ ನಡ್ಯೋಡಿಗುತ್ತು, ಆಶಾ ಪಿ. ರೈ, ರಾಜೇಶ್ ಎಲ್. ನಾಯಕ್ ಪ್ರಮೋದ್ ಅಜ್ಜಿಬೆಟ್ಟು, ಪ್ರದೀಪ್ ರಾವ್, ಬೇಬಿ ಕುಂದರ್, ಚಿತ್ತರಂಜನ್ ಶೆಟ್ಟಿ ಬೊಂಡಾಲ, ರೋನಾಲ್ಡ್ ಡಿಸೋಜಾ ಮತ್ತಿತರರು ಇದ್ದರು. ಅಪಾರ ಸಂಖ್ಯೆಯ ಭಕ್ತರು, ವಿವಿಧ ಸಂಘಟನೆಯ ಪ್ರಮುಖರು, ಗ್ರಾಮಸ್ಥರು, ಮೆರವಣಿಗೆಯಲ್ಲಿ ಭಾಗವಹಿಸಿದರು. ಬೆಳಿಗ್ಗೆ ದೇವಸ್ಥಾನದಲ್ಲಿ ಗಣಹೋಮ ಹಾಗೂ ಉಗ್ರಾಣ ಮುಹೂರ್ತ ನಡೆಯಿತು.