ಬಂಟ್ವಾಳ: ಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದ ಬಂಟ್ವಾಳ ತಾಲೂಕಿನ ಶಂಭೂರಿನ ಹರೀಶ್ ಕುಲಾಲ್ ಎಂಬವರ ಮಗ ತನೀಷ್ ನ ಎರಡೂ ಕಾಲುಗಳಿಗೆ ಕ್ಯಾಲೀಪರ್ ಅಳವಡಿಸಲು ಜೆಸಿಐ ಬಂಟ್ವಾಳದ ವತಿಯಿಂದ ರೂ.14 ಸಾವಿರ ಆರ್ಥಿಕ ಸಹಕಾರ ಹಸ್ತಾಂತರಿಸಲಾಯಿತು.
Advertisement
ಈ ಸಂದರ್ಭ ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ., ಉಪಾಧ್ಯಕ್ಷ ಕಿಶೋರ್ ಆಚಾರ್ಯ, ಕೋಶಾಧಿಕಾರಿ ಶ್ರೀನಿವಾಸ ಅರ್ಬಿಗುಡ್ಡೆ, ಪೂರ್ವಾಧ್ಯಕ್ಷ ಸುರೇಶ್ ಕುಮಾರ್ ನಾವೂರು, ಸದಸ್ಯರಾದ ಶಿವರಾಮ ಮರ್ತಾಜೆ, ನಾಗೇಶ್ ಸಜೀಪ ಉಪಸ್ಥಿತರಿದ್ದರು.
Advertisement