ಬಂಟ್ವಾಳ: ಸಜೀಪಮೂಡ ಗ್ರಾಮದ ಈಶ್ವರ ಮಂಗಳ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ದೇವರಿಗೆ ಫಲ ಪಂಚಾಮೃತ ಅಭಿಷೇಕ, ರುದ್ರ ಸೂಕ್ತ ಅಭಿಷೇಕ ಪೂಜೆ, ಪ್ರಸನ್ನ ಪೂಜೆ ಮಹಾಮಂಗಳಾರತಿ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಅಂದಾಡಿ ಸೀತಾರಾಮ ಗಟ್ಟಿ ಪ್ರಾಯೋಜಕತ್ವದಲ್ಲಿ ವಿಶ್ವ ಭಾರತಿ ಯಕ್ಷ ಸಂಜೀವಿನಿ ಮುಡಿಪು ಇವರಿಂದ ವಾಲಿಮೋಕ್ಷ ಯಕ್ಷಗಾನ ತಾಳಮದ್ದಳೆ ನಡೆಯಿತು. ಯಕ್ಷಗಾನ ಕಲಾವಿದ ಕೆ.ಗೋವಿಂದ ಭಟ್ ಪದ್ಯಾಣ ಶಂಕರನಾರಾಯಣ ಭಟ್, ರಾಮ ಹೊಳ್ಳ, ವಿದ್ಯಾ ಐತಾಳ್, ಗುಂಡ್ಯಡ್ಕ ಈಶ್ವರ ಭಟ್, ಪ್ರಶಾಂತ್ ಹೊಳ್ಳ, ಕುಶಲ ಮುಡಿಪು ಮೊದಲಾದವರು ಭಾಗವಹಿಸಿದ್ದರು. ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜಾ, ನಂದಾವರ ಕ್ಷೇತ್ರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಮುಗಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರೀತಾಯ, ಕೆ.ಸದಾನಂದ ಶೆಟ್ಟಿ, ರವಿಚಂದ್ರ, ಬಾಲಕೃಷ್ಣ, ಕುಸುಮಾವತಿ, ಗೀತಾ, ಗಣೇಶ ಕಾರಂತ, ಜಯಪ್ರಕಾಶ್, ರಮೇಶ, ಸಂಜೀವ ಪೂಜಾರಿ, ಅಜಯ್, ರಾಮ್ ಪ್ರಸಾದ್ ಪೂಂಜ, ಗಿರೀಶ್ ಪೆರ್ವ, ಚರಣ್ ಕುಮಾರ್, ಪ್ರವೀಣ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.