ಬಂಟ್ವಾಳ: ಶಾಲಾ ಬಾಲಕಿಯೊಬ್ಬಳು ತನ್ನ ಕೂದಲನ್ನು ಕ್ಯಾನ್ಸರ್ ಪೀಡಿತರಿಗಾಗಿ ದಾನ ಮಾಡಿ ಗಮನ ಸೆಳೆದಿದ್ದಾಳೆ.
ತಾಲೂಕಿನ ಕಣಿಯೂರು ಸರಕಾರಿ ಪ್ರಾಥಮಿಕ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ ಹರ್ಷಿಕ ಕೇಶ ದಾನ ಮಾಡಿದ ವಿದ್ಯಾರ್ಥಿನಿಯಾಗಿದ್ದು ಕಣಿಯೂರಿನ ಲೋಕೇಶ್ ಮತ್ತು ರೇಣುಕಾ ಅವರ ಪುತ್ರಿಯಾಗಿದ್ದಾಳೆ.
ತಾಯಿ ರೇಣುಕಾ ಕಾಣಿಯೂರು ಶಿಕ್ಷಕಿಯಾಗಿದ್ದು, ತನ್ನ ಮಗಳು 1ನೇ ತರಗತಿಯಲ್ಲಿ ಇರುವಾಗ ಶಾಲೆಯಲ್ಲಿ ತನ್ನ ಸಹಪಾಠಿಗಳು ಕೂದಲು ಕತ್ತರಿಸಿರುವುದನ್ನು ನೋಡಿ ಮನೆಗೆ ಬಂದು ತನ್ನ ಅಮ್ಮನಲ್ಲಿ ತನ್ನ ಕೂದಲನ್ನು ಕತ್ತರಿಸುವಂತೆ ಹೇಳಿದಾಗ ಬೇಡ ಎಂದಿದ್ದರು.
ಕೂದಲು ಉದ್ದ ಬಂದ ಮೇಲೆ ಕತ್ತರಿಸಿದರೆ ಕೂದಲು ಇಲ್ಲದ ಅದೆಷ್ಟೋ ಮಂದಿಗೆ ನಮ್ಮ ಕೂದಲು ನೀಡಿ ಅವರು ಸುಂದರವಾಗಿ ಕಾಣುವಂತೆ ಮಾಡಬಹುದು ಎಂದು ಹೇಳಿ ಕೂದಲು ಇಲ್ಲದ ಕ್ಯಾನ್ಸರ್ ಪೀಡಿತರ ಫೋಟೋ ತೋರಿಸಿದರು, ಆ ದಿನದಿಂದ ಮಗು ಕೂದಲು ಬೆಳೆಸವ ಯೋಚನೆಯಲ್ಲಿ ಇತ್ತು, ಪೋಷಕರು ಮರೆತರು ಮಗು ಈ ವಿಚಾರ ಮರೆತಿರಲಿಲ್ಲ. ಪ್ರತಿ ವಾರ ತನ್ನ ಕೂದಲನ್ನು ಅಳತೆ ಮಾಡುತ್ತಿದ್ದ ಹರ್ಷಿತಾ ಇತ್ತೀಚೆಗೆ ಅಮ್ಮ ನನ್ನ ಕೂದಲು 30 ಸೆಂಟಿಮೀಟರ್ ಆಗಿದೆ, ಈಗ ಕತ್ತರಿಸಿ ಕೂದಲು ಇಲ್ಲದವರಿಗೆ ಕೊಡುವ ಎಂದು ಹೇಳಿದಾಗ ತಾಯಿ ಆಶ್ಚರ್ಯ ಗೊಂಡಿದ್ದರು. ಮಗಳ ಇಚ್ಛೆಯಂತೆ ತನ್ನ ಸುಂದರವಾದ ಕೂದಲನ್ನು ಕತ್ತರಿಸಿ ಯುವಶಕ್ತಿ ಕಡೆ ಶಿವಾಲಯದ ಸಂಘಟನೆಯ ಮೂಲಕ ಕ್ಯಾನ್ಸರ್ ರೋಗಿಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ದಾನ ಮಾಡಿದ್ದಾರೆ.
ಎಳೆಯ ಬಾಲಕಿಯ ಈ ಕಾರ್ಯಕ್ಕೆ ವ್ಯಾಪಾಕ ಪ್ರಶಂಸೆ ವ್ಯಕ್ತವಾಗಿದೆ.