ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿಯ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವಂತೆ ಬ್ಯಾಂಕ್ ಆಫ್ ಬರೋಡಾದ ಬಂಟ್ವಾಳ ಶಾಖೆ ವತಿಯಿಂದ ಕಲಿಕಾ ಆಟಿಕೆಗಳನ್ನು ಮಂಗಳವಾರ ಜ.30ರಂದು ಹಸ್ತಾಂತರಿಸಲಾಯಿತು.
Advertisement
ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ವಾಮನ್ ನಾಯಕ್ ಮತ್ತು ಸಿಬಂದಿ ಹಾಗೂ ಹಳೆ ವಿದ್ಯಾರ್ಥಿ ಚೇತನ್ ಕುಮಾರ್ ಅವರು ಮುಖ್ಯೋಪಾಧ್ಯಾಯರಾದ ಲಕ್ಷ್ಮೀ ಕೆ. ಅವರಿಗೆ ಹಸ್ತಾಂತರ ಮಾಡಿ ಇದು ಮಕ್ಕಳಿಗೆ ಉಪಯೋಗವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಎಸ್.ಡಿ.ಎಂ.ಸಿ. ಅಧ್ಯಕ್ಷ ಹರೀಶ ಮಾಂಬಾಡಿ, ಸಹಶಿಕ್ಷಕರಾದ ತಾಹಿರಾ, ಸುಶೀಲಾ, ಶಿಕ್ಷಕಿಯರಾದ ಪೂರ್ಣಿಮಾ, ಲಾವಣ್ಯ ಉಪಸ್ಥಿತರಿದ್ದರು.
Advertisement