ಬಂಟ್ವಾಳ: ಬೆಂಕಿ ಅವಘಡಕ್ಕೆ ಸಿಕ್ಕಿ ದಂಪತಿ ಸುಟ್ಟು ಮೃತಪಟ್ಟ ಘಟನೆ ಬಂಟ್ವಾಳದ ಅಮ್ಟಾಡಿ ಗ್ರಾ.ಪಂ. ವ್ಯಾಪ್ತಿಯ ತುಂಡು ಪದವು ಎಂಬಲ್ಲಿ ನಡೆದಿದೆ.
Advertisement
ಇಲ್ಲಿನ ನಿವಾಸಿ ಗಿಲ್ಬರ್ಟ್ ಕಾರ್ಲೋ ( 78) ಹಾಗೂ ಕ್ರಿಸ್ಟಿನಾ ಕಾರ್ಲೋ ಕಾರ್ಲೊ ( 70) ಮೃತಪಟ್ಟ ದುರ್ದೈವಿಗಳು.
ಮನೆಯ ಪಕ್ಕ ಕಸ ಕಡ್ಡಿಗೆ ಹಾಕಿದ ಬೆಂಕಿ ವ್ಯಾಪಿಸಿ ಮನೆಯ ಸಮೀಪದ ಕಾಡನ್ನು ಆವರಿಸಿದ ವೇಳೆ ಅದನ್ನು ನಂದಿಸಲು ತೆರಳಿದ ವೃದ್ದ ದಂಪತಿಗಳು ಬೆಂಕಿಗೆ ಸಿಕ್ಕಿ ಸುಟ್ಟು ಹೋಗಿದ್ದಾರೆ.
ಮೃತರಿಗೆ 3 ಮಕ್ಕಳಿದ್ದು ಇಬ್ಬರು ವಿದೇಶದಲ್ಲಿ ಇನ್ನೊಬ್ಬಕೆ ಮಂಗಳೂರಿನಲ್ಲಿ ನೆಲೆಸಿದ್ದು ಮನೆಯಲ್ಲಿ ಇಬ್ಬರು ದಂಪತಿಗಳು ಮಾತ್ರ ವಾಸವಿದ್ದರು ಎಂದು ತಿಳಿದು ಬಂದಿದೆ. ಭಾನುವಾರ ಮಧ್ಯಾಹ್ದದ ವೇಳೆಗೆ ಘಟನೆ ನಡೆದಿದೆ.
Advertisement