
ಬಂಟ್ವಾಳ: ಸೇವಾಂಜಲಿ ಪ್ರತಿಷ್ಟಾನ ಫರಂಗಿಪೇಟೆ ಇದರ ವತಿಯಿಂದ ಎ.ಜೆ.ಆಸ್ಪತ್ರೆ ಮಂಗಳೂರು ಇವರ ಸಹಕಾರದಲ್ಲಿ 126ನೇ ರಕ್ತದಾನ ಶಿಬಿರ ಭಾನುವಾರ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು.
ಮಂಗಳೂರಿನ ಜೆಪ್ಪು ಶ್ರೀ ಅಂಬಾಮಹೇಶ್ವರೀ ಭಜನಾ ಮಂದಿರದ ಅಧ್ಯಕ್ಷ ಸೀತರಾಮ ಎ. ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಒಂದೆರಡು ರಕ್ತದಾನ ಶಿಬಿರಗಳನ್ನು ಆಯೋಸಜಿಸುವುದು ಸಾಮಾನ್ಯ . ಆದರೆ ಸೇವಾಂಜಲಿ ಪ್ರತಿಷ್ಠಾನ 126 ಶಿಬಿರಗಳನ್ನು ಸಂಘಟಿಸಿ ರೋಗಿಗಳಿಗೆ ರಕ್ತ ಒದಗಿಸುವ ಕಾರ್ಯ ಮಾಡಿರುವುದು ಅಭಿನಂದನೀಯ ಎಂದರು. ಸೇವಾಂಜಲಿ ಸಂಸ್ಥೆಯ ಕೃಷ್ಣಕುಮಾರ್ ಪೂಂಜ ಹಾಗೂ ಅದರ ಎಲ್ಲಾ ಕಾರ್ಯಕರ್ತರ ಸೇವಾ ಮನೋಭಾವನೆಯಿಂದ ಇಂತಹ ಮಹತ್ಕಾರ್ಯಗಳನ್ನು ನಡೆಸಿಕೊಂಡು ಬರಲು ಸಾಧ್ಯವಿದೆ. ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಕ್ಷಯರೋಗಿಗಳಿಗೆ ಆಹಾರದ ಕಿಟ್ ವಿತರಣೆಯಂತಹ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸೇವಾಂಜಲಿಯ ಎಲ್ಲಾ ಕಾರ್ಯಗಳಿಗೂ ಸಹಕಾರ ನೀಡುವುದಾಗಿ ತಿಳಿಸಿದರು.

ಮೆಸ್ಕಾಂನ ಹಿರಿಯ ಎಂಜಿನಿಯರ್ ದಿನೇಶ್ ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ತುರ್ತ ಸಂದರ್ಭದಲ್ಲಿ ರಕ್ತ ಪಡೆಯಲು ಅನೇಕ ರೋಗಿಗಳು ಪರದಾಡುತ್ತಾರೆ. ಆದರೆ ಸೇವಾಂಜಲಿ ಸಂಸ್ಥೆಯ ಈ ಸೇವಾ ಕಾರ್ಯದಿಂದಾಗಿ ಅನೇಕ ರೋಗಿಗಳು ತುರ್ತು ಸಂದರ್ಭದಲ್ಲಿ ರಕ್ತ ಪಡೆದು ಜೀವ ಉಳಿಸಿಕೊಂಡಿದ್ದಾರೆ. ಕೃಷ್ಣ ಕುಮಾರ್ ಪೂಂಜರ ಸೇವಾ ಕಾರ್ಯ ಅಭಿನಂದನೀಯ ಎಂದರು.
ಎ.ಜೆ. ಆಸ್ಪತ್ರೆಯ ಬ್ಲಡ್ ಬ್ಯಾಂಕಿನ ಮ್ಯಾನೇಜರ್ ಗೋಪಾಲಕೃಷ್ಣ, ಅಡ್ಯಾರ್ ಪಂಚಾಯತಿ ಸದಸ್ಯ ಪ್ರವೀಣ್ ಅರ್ಕುಳ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಪದ್ಮನಾಭ ಶೆಟ್ಟಿ ಪುಂಚಮೆ, ಪದ್ಮನಾಭ ಕಿದೆಬೆಟ್ಟು
ಪ್ರಶಾಂತ್ ತುಂಬೆ, ಉಮೇಶ್ ಕೊಳಂಬೆ, ಕೃಷ್ಣ ತುಪ್ಪೆಕಲ್ಲು, ದಿನೇಶ್ ತುಂಬೆ
ಸುಕುಮಾರ್ ಅರ್ಕುಳ, ನೀಲನ್ ಡಿಸೋಜಾ, ಪ್ರವೀಣ್ ಬಿ. ತುಂಬೆ, ವಿಕ್ರಂ ಬರ್ಕೆ
ಶಿವರಾಜ್ ಸುಜೀರ್, ನಾರಾಯಣ ಮೇರಮಜಲು, ಕಿಶೋರ್ ಸುಜೀರು,
ಶೇಖರ ಪೂಜಾರಿ, ನಿರಂಜನ್ ನಾಣ್ಯ, ಪ್ರಕಾಶ್ ಆಚಾರ್ಯ ಮೊದಲಾದವರು ಹಾಜರಿದ್ದರು. ನೀಲನ್ ಡಿಸೋಜಾ ಹಾಗೂ ಅಡ್ಯಾರ್ ಪಂಚಾಯತಿ ಸದಸ್ಯ ಪ್ರವೀಣ್ ಅರ್ಕುಳ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಶಿಬಿರದಲ್ಲಿ ಒಟ್ಟು 52 ಯುನಿಟ್ ರಕ್ತ ಸಂಗ್ರಹವಾಯಿತು.
