ಬಂಟ್ವಾಳ: ಶ್ರೀ ದುರ್ಗಾ ಫ್ರೆಂಡ್ಸ್ ಇವರ ವತಿಯಿಂದ ಕುರಿಯಾಳ ದುರ್ಗಾನಗರ ವಠಾರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ 17ನೇ ವರ್ಷದ ಮೊಸರು ಕುಡಿಕೆ ಉತ್ಸವವು ವಿಜ್ರಂಭಣೆಯಿಂದ ನಡೆಯಿತು.
ಬೆಳ್ಳಿಗ್ಗೆ ಕ್ರೀಡಾಕೂಟ ಉದ್ಘಾಟನೆ ಸಮಾರಂಭದಲ್ಲಿ ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರದ ಅರ್ಚಕ ಹೊನ್ನಪ್ಪ ಪೂಜಾರಿ, ಅಮ್ಟಾಡಿ ಗ್ರಾಮ ಪಂಚಾಯತಿ ಸದಸ್ಯೆ ಯಶೋಧ ಮೇಗಿನ ಕುರಿಯಾಳ, ಸದಸ್ಯರಾದ ರೂಪೇಶ್ ಕುಟೀಲ, ಅಶ್ವಿನಿ ಶೆಟ್ಟಿ ನೋಡಾಜೆ, ಕುರಿಯಾಳ ಬಿಲ್ಲವ ಸಂಘ ಅಧ್ಯಕ್ಷ ವಿಶ್ವನಾಥ ಪೂಜಾರಿ ಗಾಣದಕೊಟ್ಯ, ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರದ ಅಧ್ಯಕ್ಷ ಶ್ರೀನಿಧಿ ವಿ ಬಂಗೇರ, ಓಂಕಾರ ಸೇವಾ ಬಳಗ ಅಧ್ಯಕ್ಷ ಸಂತೋಷ್ ಸುವರ್ಣ, ಶ್ರೀ ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಸಂದೇಶ್ ಪೂಜಾರಿ ಭಾಗವಹಿಸಿದ್ದರು. ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀರಾಮ ವಿದ್ಯಾಕೇಂದ್ರದ ನಿವೃತ್ತ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ, ಉದ್ಯಮಿ ಜಗದೀಶ್ ನೆತ್ತರಕೆರೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಪತ್ರಕರ್ತ ಹರೀಶ್ ಮಾಂಬಾಡಿ, ಅಮ್ಟಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ವಿಜಯ ಕುಮಾರ್ ,ಅಮ್ಟಾಡಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ಶ್ರೀ ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಸಂದೇಶ್ ಪೂಜಾರಿ ಸೀಮಾಸದನ ಉಪಸ್ಥಿತರಿದ್ದರು. CPL ಖ್ಯಾತಿಯ ಕುರಿಯಾಳದ ಕಲಾವಿದ ಗಣೇಶ್ ಸುವರ್ಣ ಇವರಿಗೆ ಸನ್ಮಾನಿಸಲಾಯಿತು.
ಪ್ರಕಾಶ್ ಪೂಜಾರಿ ಹೊಸಮಣ್ಣು ಸ್ವಾಗತಿಸಿ, ಶ್ರೀನಿಧಿ ವಿ ಬಂಗೇರ ವಂದಿಸಿದರು. ಚೈತ್ರ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು.