

ಬಂಟ್ವಾಳ: ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ಬಳಿಕ ಭಾನುವಾರ ಅವಭೃತೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಬೆಳಿಗ್ಗೆ ದ್ವಾರಪೂಜೆ, ಚೂರ್ಣೊತ್ಸವ ನಡೆದು ಮಧ್ಯಾಹ್ನ ಅವಭೃತೋತ್ಸವ ಹಾಗೂ ನದೀಸ್ನಾನ ನಡೆಯಿತು. ಸಂಜೆ ಧ್ವಜಾವರೋಹಣ, ಯಜ್ಞವಿಸರ್ಜನೆ, ಮಹಾಪೂಜೆ, ಸಂಪ್ರೋಕ್ಷಣೆ, ರಾತ್ರಿ ಮಹಾ ನೈವೇದ್ಯ, ಮಂಗಳಾರತಿ, ಸಮಾರಾಧನೆ ನಡೆದು ಸಣ್ಣ ರಥೋತ್ಸವ, ವಸಂತಪೂಜೆ, ಕಲಶದಾನ, ಅಂಕುರಪ್ರಸಾದ ವಿತರಣೆ ನಡೆಯಿತು.


