
ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಸೇವಾ ಕಚೇರಿ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಬೆಳಿಗ್ಗೆ ನಡೆಯಿತು.
ಬಂಟ್ವಾಳ ತಹಶೀಲ್ದಾರ್ ಸೇವಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ ಬಂಟ್ವಾಳದ ಜನರನ್ನು ಕಾಯುವ ಶ್ರೀ ರಕ್ತೇಶ್ವರಿ ತಾಯಿಯ ಬ್ರಹ್ಮಕಲಶಾಭಿಷೇಕ ವಿಜ್ರಂಭಣೆಯಿಂದ ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಸೇವಾ ಕಚೇರಿ ಉದ್ಘಾಟನೆಯಾಗಿದೆ. ಈ ಉತ್ಸವ ಯಶಸ್ವಿಯಾಗಿ ನಡೆಯಲಿ, ಜಗದಂಬೆ ಎಲ್ಲರಿಗೂ ಒಳಿತು ಮಾಡಲಿ ಎಂದು ಶುಭ ಹಾರೈಸಿದರು.

ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಎಸ್. ವಿಜಯಪ್ರಸಾದ್ ಮಾತನಾಡಿ ದೇವಿಯ ಬ್ರಹ್ಮಕಲಶಾಭಿಷೇಕ ಸಂಭ್ರಮದಲ್ಲಿ ಎಲ್ಲರೂ ಸಮಾನ ಮನಸ್ಕಾರಾಗಿ ತೊಡಗಿಸಿಕೊಂಡು ಯಶಸ್ವಿಗೊಳಿಸೋಣ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ರಮೇಶಾನಂದ ಸೋಮಯಾಜಿ, ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಬಿ. ವಿಶ್ವನಾಥ್, ವಿವಿಧ ಸಮಿತಿಗಳ ಪ್ರಮುಖರಾದ ಸಂಜೀವ ಪೂಜಾರಿ ಗುರುಕೃಪಾ, ಬೇಬಿ ಕುಂದರ್, ಭುವನೇಶ್ ಪಚ್ಚಿನಡ್ಕ, ಎನ್. ಶಿವಶಂಕರ್, ಅಶ್ವನಿ ಕುಮಾರ್ ರೈ, ಐತಪ್ಪ ಪೂಜಾರಿ, ಕೆ. ನಾರಾಯಣ ಹೆಗ್ಡೆ, ಬಿ.ಮೋಹನ್, ಗೋಪಾಲ ಸುವರ್ಣ, ಸತೀಶ್ ಶೆಟ್ಟಿ ಮೊಡಂಕಾಪು, ಸತೀಶ್ ಕುಮಾರ್, ರಮೇಶ್ ಸಾಲ್ಯಾನ್, ಪುಷ್ಪರಾಜ ಶೆಟ್ಟಿ, ವಸಂತರಾವ್, ಚಿತ್ತರಂಜನ್ ಶೆಟ್ಟಿ, ಅರ್ಚಕ ರಘುಪತಿ ಭಟ್ ಮತಿತರರು ಉಪಸ್ಥಿತರಿದ್ದರು. ಮೋಹನದಾಸ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.
