
ಬಂಟ್ವಾಳ : ಇಲ್ಲಿನ ಕುಕ್ಕಿಪಾಡಿ ಗ್ರಾಮದ ಪೆಲತ್ತಕಟ್ಟೆ ಎಂಬಲ್ಲಿ ಚಿರತೆ ದಾಳಿ ನಡೆಸಿ ಒಂದು ತಿಂಗಳ ಕರು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ, ಕೋಟ್ಯಪ್ಪ ಪೂಜಾರಿ ಎಂಬವರ ಹಟ್ಟಿಯಲ್ಲಿ ನಾಲ್ಕು ದನಗಳಿದ್ದು, ಒಂದು ತಿಂಗಳ ಕರುವನ್ನು ಸ್ವಲ್ಪ ದೂರ ಕಟ್ಟಿ ಹಾಕಿದ್ದರು ಎನ್ನಲಾಗಿದೆ.
ಸೋಮವಾರ ತಡರಾತ್ರಿ ಚಿರತೆ ಬಂದಿದ್ದು, ನಾಯಿ ಬೊಗಳಿದಾಗ ಕರುವನ್ನು ಕೊಂದು ಹೊಟ್ಟೆ ಭಾಗ ಮಾಂಸ ಕಚ್ಚಿ ತಿಂದು ಪರಾರಿಯಾಗಿದೆ . ಬಂಟ್ವಾಳ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ದೂರು ದೂರು ನೀಡಲಾಗಿದೆ.

Advertisement







