
ಬಂಟ್ವಾಳ: ಸೌತ್ ಕೆನರಾ ಫೋಟೊಗ್ರಾಫರ್ ಅಸೋಸಿಯೇಶನ್(ರಿ) ಇದರ ಬಂಟ್ವಾಳ ವಲಯದ ರಜತ ಸಂಭ್ರಮದ ಪ್ರಯುಕ್ತ ಬಂಟ್ವಾಳ ತಾಲೂಕಿನ ಮಕ್ಕಳಿಗೆ ಆನ್ ಲೈನ್ ಚಿತ್ರ ಬಿಡಿಸುವ ಸ್ಪರ್ಧೆ ( 8 ರಿಂದ 10 ನೇ ತರಗತಿಯ ಮಕ್ಕಳಿಗೆ ) ಆಯೋಜಿಸಲಾಗಿದೆ.
ಚಿತ್ರದ ವಿಷಯ ಚೌತಿಯ ಸಂಭ್ರಮವಾಗಿದ್ದು ತಾವು ಬಿಡಿಸಿದ ಚಿತ್ರವನ್ನು ಸೆ.3 ಬುಧವಾರದೊಳಗಾಗಿ 9741480614 ಈ ನಂಬರಿನ ವಾಟ್ಸಫ್ ಮೂಲಕ ಕಳುಹಿಸಲು ಕೋರಲಾಗಿದೆ.
ಸೂಚನೆಗಳು :
*ಎ4 ಅಳತೆಯ ಕಾಗದದ ಮೇಲೆ ಚಿತ್ರ ಬಿಡಿಸಿ ಕಳುಹಿಸುವುದು.
* ಚಿತ್ರದ ಕೆಳಗೆ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು.
* ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಿರುವುದು.
* ವಿಜೇತರಿಗೆ ಗೌರವ ಧನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.
* ಸಂಘಟಕರ ತೀರ್ಮಾನವೇ ಅಂತಿಮ.
* ವಿಜೇತರಾದ ಮಕ್ಕಳು ಸಮಾರಂಭದ ದಿನ ತಾವು ಬಿಡಿಸಿದ ಚಿತ್ರವನ್ನು ಸಂಘಟಕರ ಸಮಕ್ಷಮದಲ್ಲಿ ಮತ್ತೊಮ್ಮೆ ಬಿಡಿಸಬೇಕು.
* ವಿಜೇತರಾದ ಮಕ್ಕಳಿಗೆ 05-09-2025 ರಂದು ನಡೆಯುವ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗೆ 9845278904. 9449167316 ಸಂಪರ್ಕಿಸಬಹುದಾಗಿದೆ.
Advertisement







