
ಬಂಟ್ವಾಳ: ಮಲೆಯಾಳಿ ಬಿಲ್ಲವ ಸೇವಾ ಸಂಘ, ಯುವ ವೇದಿಕೆ ಹಾಗೂ ಮಹಿಳಾ ವೇದಿಕೆ ಇರಾ- ಕಲ್ಲಾಡಿ ಇದರ 55 ನೇ ವಾರ್ಷಿಕೋತ್ಸವ ಇರಾ ಮಲೆಯಾಳಿ ಬಿಲ್ಲವ ಸೇವಾ ಸಂಘದ ಸಮುದಾಯ ಭವನದಲ್ಲಿ ನಡೆಯಿತು.
ಬೆಳಿಗ್ಗೆ ನಡೆದ ಭಜನಾ ಸಂಕೀರ್ತನೆ ಹಾಗೂ ಕುಣಿತಾ ಭಜನೆ ವಿಶೇಷ ಗಮನ ಸೆಳೆಯಿತು.
ಸಂಜೆ ನಡೆದ ಸಭಾ ಕಾರ್ಯಕ್ರಮವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಉದ್ಘಾಟಿಸಿದರು. ಅವರು ಮಾತನಾಡಿ ನಮ್ಮ ಸಮಾಜದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯ ಪೋಷಕರಿಂದ ಆಗಬೇಕಾಗಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರು ಉನ್ನತ ಉದ್ಯೋಗಗಳನ್ನು ಪಡೆಯಲು ಶ್ರಮಿಸಬೇಕು.ಯುವಕರು ಸಕ್ರಿಯವಾಗಿದ್ದುಕೊಂಡು
ಆ ಮೂಲಕ ಸಮಾಜದ ಸಂಘಟನೆಯನ್ನು ಮಾಡಬೇಕು ಎಂದರು.
ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷ ಪ್ರಶಾಂತ್ ಕಾಜವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಇರಾ ಕಲ್ಲಾಡಿಯ ಮಲಯಾಳಿ ಬಿಲ್ಲವ ಸಂಘ 55 ವರ್ಷ ಪೂರೈಸಿರಬೇಕಾದರೆ ಅದು ಮಲೆಯಾಳ ಬಿಲ್ಲವ ಹಿರಿಯರ ಶಕ್ತಿ ಎಂದರು. ಇರಾ ಸಾಧಕರ ಊರು. ಸಮುದಾಯದ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಿ ವಿದ್ಯೆ ಬುದ್ದಿ ನೀಡಿ. ಎಲ್ಲಾ ಜನರನ್ನು ಒಗ್ಗಟ್ಟಾಗಿ ಮುದುವರೆಸಿಕೊಂಡು ಕೊಂಡು ಹೋಗುವ ಕಾರ್ಯ ಆಗಲಿ ಎಂದರು.


ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಿಕಾ ಛಾಯಾಗ್ರಾಹಕ ಸತೀಶಾ ಇರ ಅವರ ಪರವಾಗಿ ಅವರ ಪತ್ನಿ ಬಿಂದು ಸತೀಶ್, ಸುವರ್ಣ ಕರ್ನಾಟಕ ಬಾಲ್ಯ ನಾಟ್ಯ ರಾಣಿ ಪುರಸ್ಕೃತ ಬಾಲಪ್ರತಿಭೆ ಬ್ರಿಶಾ ಬಿ. ಇರಾ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಟಿ.ಬಿ. ರಾಜರಾಮ ಭಟ್ ಅವರನ್ನು ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷ ಚಂದ್ರಹಾಸ ಆರ್. ಕರ್ಕೆರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಸಮಾಜದ ಶಕ್ತಿಯಾಗಲು ಸಾಧ್ಯವಿದೆ. ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಉತ್ತಮ ಆಚಾರ ವಿಚಾರ ನೀಡಿ ಸಮಾಜದ ಆಸ್ಯಿಯಾಗಿ ಮಾಡಬೇಕು ಎಂದ ಅವರು
ಇಚ್ಚಾಶಕ್ತಿ, ತಾಳ್ಮೆ ಪರಿಶ್ರಮ, ಪ್ರಯತ್ನ ಇದ್ದಾಗ ನಾವು ಯಶಸ್ಸು ಗಳಿಸಲು ಸಾಧ್ಯ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ
ಶ್ರೀ ಭಗವತಿ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ದೇವದಾಸ್ ಕೊಲ್ಯ.., ಉದ್ಯಮಿ ಗೋಪಾಲ್, ಗುರಿಕಾರರಾದ ರಾಮ ಗುರಿಕಾರ, ನಾಗೇಶ್ ಗುರಿಕಾರ, ಸತೀಶ್ ಗುರಿಕಾರ, ಯುವ ವೇದಿಕೆ ಅಧ್ಯಕ್ಷ ಹೇಮಚಂದ್ರ, ಮಹಿಳಾ ವೇದಿಕೆ ಅಧ್ಯಕ್ಷೆ ಅಕ್ಷತಾ ಜಗದೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳ್ಯಾರ್, ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ, ಲೋಕೇಶ್ ಬೋಳಾರ್ ಭೇಟಿ ನೀಡಿ ಶುಭ ಹಾರೈಸಿದರು.
ವೈ.ಬಿ.ಸುಂದರ್ ಇರಾ ಸ್ವಾಗತಿಸಿದರು. ದೇವಿಕಾ ಆನಂದ್
ವಂದಿಸಿದರು, ದಿನೇಶ್ ಇರಾ ಕಾರ್ಯಕ್ರಮ ನಿರೂಪಿಸಿದರು.
Advertisement







