
ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿಧೋದ್ದೇಶ ಸಹಕಾರ ಸಂಘ ನಿ. ಇದರ ಬಂಟ್ವಾಳ ಶಾಖೆಯು ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಹಿಂಭಾಗದಲ್ಲಿರುವ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.
ಮಾಜಿ ಸಚಿವ ಬಿ.ರಮಾನಾಥ ರೈ ನೂತನ ಶಾಖೆಯನ್ನು ಉದ್ಘಾಟಿಸಿದರು. ಬಳಿಕ ಬಿ.ಸಿ.ರೋಡಿನ ಅಂಬೇಡ್ಕರ್ ಸಭಾಭವನದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ದೀಪಪ್ರಜ್ವಲಿಸಿ ಮಾತನಾಡಿ ಪೊಟೋಗ್ರಾಫಿ ಎನ್ನುವುದು ಒಂದು ದಾಖಲೆ, ವರ್ತಮಾನದ ಸಂದರ್ಭದಲ್ಲಿ ಛಾಯಾಗ್ರಾಹಕರು ಅಗತ್ಯ. ವೃತ್ತಿ ಜೀವನದಲ್ಲಿ ಛಾಯಗ್ರಾಹಕರು ತಮ್ಮದೇ ರೀತಿಯಲ್ಲಿ ಸಹಕಾರಿ ಸಂಘವನ್ನು ಸ್ಥಾಪನೆ ಮಾಡಿ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಅಭಿನಂದನೀಯ ಎಂದರು.
10 ವರ್ಷದ ಹಿಂದೆ ಈ ಸಹಕಾರಿ ಸಂಘದ ಉದ್ಘಾಟನೆಯಲ್ಲಿ ಭಾಗವಹಿಸುವ ಅವಕಾಶ ದೊರೆತ್ತಿದ್ದು ಈ ದಿನ ಉದ್ಘಾಟಿಸುವ ಅವಕಾಶ ಸಿಕ್ಕಿರುವುದು ಋಣಾನುಬಂಧ ಎಂದು ನೆನೆಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಕನ್ಯಾನ ಭಾರತ ಸೇವಾಶ್ರಮದ ಕಾರ್ಯದರ್ಶಿ ಈಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು.

ಎಸ್ ಕೆ ಪಿ. ಎ, ದ.ಕ ಮತ್ತು ಉಡುಪಿ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವೃತ್ತಿಪರ ಛಾಯಾಗ್ರಾಹಕರು ಒಟ್ಟು ಸೇರಿ ಹುಟ್ಟು ಹಾಕಿದ ಈ ಸಹಕಾರಿ ಸಂಘ ಎರಡನೇ ಶಾಖೆಯನ್ನು ಆರಂಭಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಬಂಟ್ಬಾಳ ಕೃಷಿಕ ಸಮಾಜದ ಅಧ್ಯಕ್ಷ ಪದ್ಮರಾಜ್ ಬಳ್ಳಾಲ್ ಮಾವಂತೂರುಗುತ್ತು ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಅವರು ಮಾತನಾಡಿ ವ್ಯವಹಾರ ಕ್ಷೇತ್ರದಲ್ಲಿ ವಿಶ್ವಾಸ ಮುಖ್ಯ
ಅಂತಹ ವಿಶ್ವಾಸವನ್ನು ಗ್ರಾಹಕರಲ್ಲಿ ಮೂಡಿಸಿ ಮುನ್ನಡೆದಾಗ ಸಹಕಾರಿ ಸಂಘಗಳು ಅಭಿವೃದ್ಧಿಯಾಗುತ್ತದೆ ಎಂದರು.
ಎಸ್ ಕೆ ಪಿ ಎ ಬಂಟ್ವಾಳ ವಲಯದ ಅಧ್ಯಕ್ಷ ರಾಜೇಂದ್ರ ಮಾತನಾಡಿ ಉತ್ತಮ ನಾಯಕತ್ವ ಇದ್ದರೆ ಆ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತದೆ ಎನ್ನುವುದಕ್ಕೆ ಈ ಸೊಸೈಟಿಯ ಅಧ್ಯಕ್ಷ ವಾಸುದೇವರಾವ್ ಅವರೇ ಉದಾಹರಣೆ ಎಂದರು.


ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ. ವಾಸುದೇವರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹತ್ತು ವರ್ಷಗಳ ಅವಧಿಯಲ್ಲಿ ನಮ್ಮಸಹಕಾರಿ ಸಂಘ ಛಾಯಗ್ರಾಹಕರು ಹಾಗೂ ಜನರ ಪ್ರೀತಿಗೆ ಪಾತ್ರವಾಗಿದೆ.14 ವಲಯದ ಎಲ್ಲಾ ಛಾಯಗ್ರಾಹಕ ಸಹಕಾರ, ನಿರ್ದೇಶಕರು ಹಾಗೂ ಸಿಬ್ಬಂದಿಗಳ ಶ್ರಮದಿಂದ ಈ ಹಂತಕ್ಕೆ ಬಂದಿದೆ ಎಂದರು.
ಮುಖ್ಯ ಅತಿಥಿಗಳಾಗಿ ಎಸ್ ಕೆ. ಪಿ.ಎ ಜಿಲ್ಲಾ ಸಂಚಾಲಕ ಗೋಪಾಲ ಸುಳ್ಯ, ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಟಿ. ಹರೀಶ್ ರಾವ್ , ಎಸ್ ಕೆ ಪಿ ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ ಎನ್. ಕಟ್ಟಡ ಮಾಲಕ ಕಿಶೋರ್ ಎಸ್. ಕುಮಾರ್, ಗೌರವ ಸಲಹೆಗಾರ ನರಸಿಂಹ ಸ್ವಾಮಿ ಆಡಳಿತ ಮಂಡಳಿ ನಿರ್ದೇಶಕರಾದ ವಿಠಲ ಚೌಟ, ಬಿ.ದಾಮೋದರ ಆಚಾರ್ಯ ಮಂಗಳೂರು, ಸುದರ್ಶನ ರಾವ್ ಎ. ಪುತ್ತೂರು, ಸ್ಟೀಪನ್ ಬಿ. ಲೂವಿಸ್ ಬ್ರಹ್ಮಾವರ, ಪಾವಂಜೆ ಮೋಹನ್ ರಾವ್ ಮುಲ್ಕಿ, ಭಾರದ್ವಾಜ್ ಬೆಳ್ತಂಗಡಿ, ಜಯಕರ್ ಸಾಲ್ಯಾನ್ ಸುರತ್ಕಲ್, ಪಾರ್ವತಿ ಕೆ. ಅಮೀನ್ ಸುರತ್ಕಲ್, ಚಿದಾನಂದ ಎ. ಉಳ್ಳಾಲ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜೇಶ್ ಕೆ. ಉಪಸ್ಥಿತರಿದ್ದರು.
ಸಹಕಾರ ಸಂಘದ ಅಧ್ಯಕ್ಷ ಕೆ.ವಾಸುದೇವಾರಾವ್ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ನಿರ್ದೇಶಕ ರವಿ ಕಾಪು ವಂದಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
Advertisement







