
ಬಂಟ್ವಾಳ: ಸೌತ್ ಕೆನರಾ ಪೊಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ.ಉಡುಪಿ ಜಿಲ್ಲೆ ಇದರ ಬಂಟ್ವಾಳ ವಲಯದ ರಜತ ಸಂಭ್ರಮದ ಸಮಾರೋಪ ಹಾಗೂ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ರಾಜೇಂದ್ರ ಕೆ. ಕಾರ್ಯದರ್ಶಿಯಾಗಿ ರವಿ ಕಲ್ಪನೆ, ಕೋಶಾಧಿಕಾರಿಯಾಗಿ ಕೃಷ್ಣರಾವ್ ಹಾಗೂ ಇತರ ಪದಾಧಿಕಾರಿಗಳು ಆಯ್ಕೆಯಾಗಿದ್ದು ನೂತನ ತಂಡಕ್ಕೆ ಜವಾಬ್ದಾರಿ ಹಸ್ತಾಂತರಿಸಲಾಯಿತು. ಅಭಿಮತ ವಾಹಿನಿಯ ಆಡಳಿತ ಪಾಲುದಾರರಾಗಿರುವ ಡಾ. ಮಮತಾ ಪಿ. ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಸ್ಕೆಪಿಎ ಬಂಟ್ವಾಳ ವಲಯ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವುದು ಅಭಿನಂದನೀಯ ಎಂದರು. ಮೊಬೈಲ್ ಬಂದ ಬಳಿಕ ವೃತ್ತಿನಿರತ ಪೊಟೊಗ್ರಾಫರ್ ಗಳಿಗೆ ಅವಕಾಶಗಳು ಕಡಿಮೆಯಾಗುತ್ತಿದೆ. ಕೌಶಲ್ಯ , ತಾಳ್ಮೆ ಇದ್ದಾಗ ಛಾಯಗ್ರಾಹಕರು ವೃತ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ ಅಧ್ಯಕ್ಷತೆ ವಹಿಸಿ ಮಾತನಾಡಿ ರಜತ ಸಂಭ್ರಮದ ಈ ಕಾರ್ಯಕ್ರಮ ವಿಶಿಷ್ಟವಾಗಿ ಸಂಪನ್ನಗೊಂಡಿದೆ. ಸಂಘಟನೆ ಹಾಗೂ ಸದಸ್ಯರಿಗೆ ಪೂರಕವಾದ ಕೆಲಸವನ್ನು ಬಂಟ್ವಾಳ ವಲಯ ಮಾಡಿದೆ ಎಂದರು.
ನಿರ್ಗಮನ ಅಧ್ಯಕ್ಷ ಕಿಶೋರ್ ಎಸ್. ಕುಮಾರ್ ಹಾಗೂ ನೂತನ ಅಧ್ಯಕ್ಷ ರಾಜೇಂದ್ರ ಕೆ. ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮುದ್ದುಕಂದ ಸ್ಪರ್ಧೆ, ದಸರ ಸಂಭ್ರಮ ಪೊಟೊ ಸ್ಪರ್ಧೆ, ಮದುವೆ ಸಂಭ್ರಮ ಜಿಲ್ಲಾಮಟ್ಟದ ಪೊಟೋ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು. ಅಶಕ್ತರಿಗೆ ವೈದ್ಯಕೀಯ ನೆರವು ನೀಡಲಾಯಿತು. 25 ವರ್ಷದಲ್ಲಿ ಸಂಘವನ್ನು ಮುನ್ನಡೆಸಿದ ಮಾಜಿ ಅಧ್ಯಕ್ಷರನ್ನು ಗೌರವಿಸಲಾಯಿತು. ವಲಯದ ಸದಸ್ಯರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಯಿತು. ಕ್ರೀಡಾಕ್ಷೇತ್ರದ ಸಾಧಕಿ ಆರಾಧ್ಯ ಆನಂದ್, ಕೋಶಾಧಿಕಾರಿ ಕೃಷ್ಣಾರಾವ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ವಕೀಲ ಉಮೆಶ್ ಕುಮಾರ್ ವೈ, ಜೆಸಿಐ ಬಂಟ್ವಾಳದ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ, ಜಿಲ್ಲಾ ಸಂಚಾಲಕ ಗೋಪಾಲ ಸುಳ್ಯ , ಎಸ್ ಕೆಪಿಎ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ವಾಸುದೇವ ರಾವ್ , ಜಿಲ್ಲಾ ಉಪಾಧ್ಯಕ್ಷ ದೇವರಾಜ್ ಶೆಟ್ಟಿ, ದತ್ತಾತ್ರೇಯ, ಪ್ರಧಾನ ಕಾರ್ಯದರ್ಶಿ ಅಜಯ್ ಮಂಗಳೂರು ಜಿಲ್ಲಾ ಕಾರ್ಯದರ್ಶಿ ಹರೀಶ್ ಕುಂದರ್, ನಿರ್ಗಮನ ಕಾರ್ಯದರ್ಶಿ ಪ್ರಶಾಂತ್ ಕಲ್ಲಡ್ಕ, ಕೋಶಾಧಿಕಾರಿ ವರುಣ್ ಕಲ್ಲಡ್ಕ ಉಪಸ್ಥಿತರಿದ್ದರು.
ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ ಎನ್. ಸ್ವಾಗತಿಸಿ, ಪ್ರಾಸ್ತಾವಿಕ ಮಾತಗಳನ್ನಾಡಿದರು. ಕಾರ್ಯದರ್ಶಿ ರವಿ ಕಲ್ಪನೆ ವಂದಿಸಿದರು.ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
Advertisement







