
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕೇಟರಿಂಗ್ ಮಾಲಕರ ಸಂಘದ ನೇತ್ರತ್ವದಲ್ಲಿ ಕೆಟರಿಂಗ್ ಪ್ರೀಮಿಯರ್ ಲೀಗ್ -2026 ಕ್ರಿಕೆಟ್ ಪಂದ್ಯಾಟ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಗಂಜಿಮಠದ ಒಡ್ಡೂರು ಫಾರ್ಮ್ಸ್ ನಲ್ಲಿ ನಡೆಯಿತು.
ಬೆಳಿಗ್ಗೆ ಕ್ರಿಕೆಟ್ ಪಂದ್ಯಾಟವನ್ನು ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಜಾತಿ, ಧರ್ಮವನ್ನು ಮೀರಿ ನಾವೆಲ್ಲರೂ ಒಂದೇ ಎಂಬ ಭಾವನೆಯ ಮೂಲಕ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ದೈನಂದಿನ ಒತ್ತಡದ ಕೆಲಸದ ನಡುವೆಯೂ ಕ್ಯಾಟರಿಂಗ್ ಮಾಲಕರು ಒಂದು ದಿನ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವುದು ಅಭಿನಂದನಿಯವಾಗಿದ್ದು ಈ ದಿನವನ್ನು ಸಂಭ್ರಮಿಸುವಂತೆ ಅವರು ಶುಭ ಹಾರೈಸಿದರು.
ಮಂಗಳೂರು ಸಂಸದ ಕ್ಯಾ. ಬೃಜೇಶ್ ಚೌಟ ಭಾಗವಹಿಸಿ ಪಂದ್ಯಾಟಕ್ಕೆ ಶುಭ ಕೋರಿದರು. ಮತ್ತಿತರ ಗಣ್ಯರು ಭಾಗವಹಿಸಿದ್ದರು.
ಕೇಟರಿಂಗ್ ಪ್ರೀಮಿಯರ್ ಲೀಗ್ ನಲ್ಲಿ
ಉರುವಲ್ ಚಾಲೆಂಜರ್ಸ , ಪನೀರ್ ರೋಯಲ್ಸ್ , ಬಿರಿಯಾನಿ ಸ್ಟೈಕರ್ಸ್, ಟಿಕ್ಕ ನೈಟ್ ರೈಡರ್ಸ್, ಗೀ ರೋಸ್ಟ್ ಸೂಪರ್ ಕಿಂಗ್, ಅಂಜಲ್ ಕ್ಯಾಪಿಟಲ್ಸ್ ಸೇರಿಂದಂತೆ ಆರು ತಂಡಗಳು ಲೀಗ್ ಮಾದರಿಯಲ್ಲಿ ಕ್ರಿಕೆಟ್ ಆಡಿದವು. ಅಂತಿಮವಾಗಿ ಬಿರಿಯಾನಿ ಸ್ಟ್ರೈಕರ್ಸ್ ಹಾಗೂ ಪನೀರ್ ರಾಯಲ್ಸ್ ತಂಡದ ನಡುವೆ ಫೈನಲ್ ಹಣಾಹಣಿ ನಡೆದು ಬಿರಿಯಾನಿ ಸ್ಟ್ರೈಕರ್ಸ್ ತಂಡ ಕೆಟರಿಂಗ್ ಪ್ರೀಮಿಯರ್ ಲೀಗ್ ಕಪ್ ಅನ್ನು ತಮ್ಮ ಮುಡಿಗೇರಿಸಿಕೊಂಡಿತು. ತೀವ್ರ ಪೈಪೋಟಿ ನೀಡಿದ ಪನೀರ್ ರೋಯಲ್ಸ್ ತಂಡ ರನ್ನರ್ ಅಪ್ ಆಗಿ ಉಳಿಯಿತು.


ಸಮಾರೋಪ ಸಮಾರಂಭದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಈ ಸಂದರ್ಭ ಅವರು ಮಾತನಾಡಿ ಇಂತಹ ಕ್ರೀಡಾಕೂಟವನ್ನು ಹಮ್ಮಿಕೊಳ್ಳುವ ಮೂಲಕ ಸಂಘದ ಸದಸ್ಯರ ನಡುವೆ ಬಾಂಧವ್ಯವನ್ನು ವೃದ್ದಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು. ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಕೆ.ಮಾತನಾಡಿ ಸಿಪಿಎಲ್ ಪಂದ್ಯಾಟಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಪದಾಧಿಕಾರಿಗಳು ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದರು.
Advertisement







