ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗುರುವಾರ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿದರು.
೧೦ ಲಕ್ಷ ರೂ ಅನುದಾನದ ರಾಮರೆಪಾಲು ಹೊಸಹೊಕ್ಲು ರಸ್ತೆ ಉದ್ಘಾಟನೆ, ೩೦ ಲಕ್ಷ ಅನುದಾನದ ನಡು ಉರ್ದಿಲ ತಡೆಗೋಡೆ, ೨ನೇ ವಾರ್ಡಿನ ಜನತಾ ಕಾಲನಿರಸ್ತೆ ಉದ್ಘಾಟನೆ, ಉರ್ದಿಲ ಕ್ರೀಡಾಂಗಣದ ಹೈ ಮಾಸ್ಕ್ ದೀಪ ಉದ್ಘಾಟನೆ, ೧೩ ಲಕ್ಷ ವೆಚ್ಚದ ಕರಿಂಕ ಅಂಗನವಾಡಿ ಕೇಂದ್ರ ಉದ್ಘಾಟನೆ, ೧೫ ಲಕ್ಷ ವೆಚ್ಚದ ಪಂತಡ್ಕ -ಗುಂಡ್ಯ-ಎಲ್ಕಾಜೆ ಪರಿಶಿಷ್ಠ ಪಂಗಡ ಕಾಲನಿ ರಸ್ತೆ ಕಾಂಕ್ರೀಟಿಕರಣ, ೧೦ ಲಕ್ಷ ವೆಚ್ಚದ ಮಾದೇಲು- ಮೀನಾವು ರಸ್ತೆಗೆ ಶಿಲಾನ್ಯಾಸ, ೧೦ಲಕ್ಷ ಅನುದಾನದಲ್ಲಿ ಮೈಕೆ ಯಿಂದ ಏಮಾಜೆ ಸಂಪರ್ಕ ಕಾಂಕ್ರೀಟ್ ರಸ್ತೆ ಉದ್ಘಾಟನೆ, ೫೦ ಲಕ್ಷ ವೆಚ್ಚದ ಏಮಾಜೆ ರಸ್ತೆಗೆ ಶಿಲಾನ್ಯಾಸ, ೧೪ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕರಿಂಕ ಹೊಸ ಹೊಕ್ಲು ಕಾಲುಸಂಕ ಉದ್ಘಾಟನೆ, ೧೦ ಲಕ್ಷದದಲ್ಲಿ ಕಾಂಕ್ರಿಟೀಕರಣಗೊಂಡ ನೇರಳಕಟ್ಟೆ ಕರ್ಲೆತ್ತಿಮಾರ್ ರಸ್ತೆಯನ್ನು ಹಾಗೂ ನೆಟ್ಲಮುಡ್ನೂರು ಗ್ರಾ.ಪಂ.ಕಚೇರಿ ಬಳಿ ನಿರ್ಮಾಣಗೊಂಡ ಜಲಜೀವನ್ ಮಿಷನ್ ಯೋಜನೆಯ ಮೇಲ್ ಸ್ತರದ ನೀರಿನಟ್ಯಾಂಕ್ ಅನ್ನು ಶಾಸಕರು ಉದ್ಘಾಟಿಸಿದರು.
ಈ ಸಂದರ್ಭ ನೆಟ್ಲಮುಡ್ನೂರು ಗ್ರಾ.ಪಂ.ಅಧ್ಯಕ್ಷ ಸಚ್ಚಿದಾನಂದ, ಉಪಾಧ್ಯಕ್ಷೆ ಶಕೀಲಾ ಕೃಷ್ಣ ಪೂಜಾರಿ, ಅನಂತಾಡಿ ಗ್ರಾ.ಪಂ.ಸದಸ್ಯರಾದ ಸುಜಾತ, ಧನಂಜಯ, ಗ್ರಾ.ಪಂ.ಅಧ್ಯಕ್ಷ ಗಣೇಶ್ ಪೂಜಾರಿ, ವಿಟ್ಲ ಪಡ್ನೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸನತ್ ಕುಮಾರ್ ರೈ, ನೇರಳ ಕಟ್ಟೆ ಸಿಎ ಬ್ಯಾಂಕ್ ಉಪಾಧ್ಯಕ್ಷ ತನಿಯಪ್ಪ ಗೌಡ, ರವೀಂದ್ರ ರೈ, ಧನಲಕ್ಷ್ಮಿ ಪೂಜಾರಿ, ಪಿಡಿಓ ಅನುಷಾ ವಿಟ್ಲ ಶಿಶುಅಭಿವೃದ್ಧಿ ಯೋಜನಾಧಿಕಾರಿ ಉಷಾ, ಮೇಲ್ವಿಚಾರಕಿ ಸೋಮಕ್ಕ, ಅಂ.ಕಾರ್ಯಕರ್ತೆ ಯೋಗಿನಿ ಮೊದಲಾದವರು ಉಪಸ್ಥಿತರಿದ್ದರು.
—