ಬಂಟ್ವಾಳ: ಅನಂತಾಡಿ ಗ್ರಾ.ಪಂ.ಬಿಜೆಪಿಯ ಬಲಿಷ್ಠ ಶಕ್ತಿಕೇಂದ್ರವಾಗಿದ್ದು, ಅದಕ್ಕೆ ಪೂರಕವಾಗಿ ಹೆಚ್ಚಿನ ಅನುದಾನಗಳ ಮೂಲಕ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿದೆ. ಜತೆಗೆ ಕೋಟ್ಯಂತರ ರೂಪಾಯಿ ಅನುದಾನ ನೇರವಾಗಿ ಫಲಾನುಭವಿಗಳ ಖಾತೆಗೆ ಬಂದಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.
ಅವರು ಅನಂತಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು ೧.೫೦ ಕೋ.ರೂ.ಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ- ಶಿಲಾನ್ಯಾಸ ನೆರವೇರಿಸಿ ಬಳಿಕ ಮಂದಿರದಲ್ಲಿ ನಡೆದ ಮಾತನಾಡಿದರು.
ಯಾವುದೇ ಚುನಾವಣೆಯನ್ನು ಅತಿಯಾದ ಆತ್ಮವಿಶ್ವಾಸದಿಂದ ಕೊಂಚ ಲೈಟಾಗಿ ಪರಿಗಣಿಸಿದರೂ, ದೊಡ್ಡ ಹೊಡೆತ ಸಿಗುತ್ತದೆ. ಅಭಿವೃದ್ಧಿಯ ಜತೆಗೆ ಪಕ್ಷ ಸಂಘಟನೆಯ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಅಭ್ಯರ್ಥಿ ಸೋತಾಗ ಎಷ್ಟು ಹಿನ್ನಡೆಯಾಗುತ್ತದೆ ವಿಮರ್ಶೆ ಮಾಡಬೇಕು.
ವೇದಿಕೆಯಲ್ಲಿ ಅನಂತಾಡಿ ಗ್ರಾ.ಪಂ.ಅಧ್ಯಕ್ಷ ಗಣೇಶ್ ಪೂಜಾರಿ, ನೆಟ್ಲಮುಡ್ನೂರು ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ, ಉಪಾಧ್ಯಕ್ಷೆ ಶಕೀಲ ಕೃಷ್ಣ ಪೂಜಾರಿ, ಸದಸ್ಯೆ ಸುಜಾತ, ನೇರಳಕಟ್ಟೆ ಸಿಎ ಬ್ಯಾಂಕ್ ಅಧ್ಯಕ್ಷೆ ಪುಷ್ಪರಾಜ್ ಚೌಟ, ಉಪಾಧ್ಯಕ್ಷ ತನಿಯಪ್ಪ ಗೌಡ, ಮಹಾಶಕ್ತಿ ಕೇಂದ್ರದ ಅಧ್ಯಕ್ಷೆ ಸನತ್ ಕುಮಾರ್ ರೈ, ತಾ.ಪಂ.ಮಾಜಿ ಸದಸ್ಯೆ ಗೀತಾ ಚಂದ್ರಶೇಖರ, ಅನಂತಾಡಿ ಗ್ರಾ.ಪಂ.ಸದಸ್ಯರಾದ ಸಂಧ್ಯಾ, ರಶ್ಮೀ, ಮೊದಲಾದವರು ಉಪಸ್ಥಿತರಿದ್ದರು.
ನಾಗೇಶ್ ಭಂಡಾರಿ ಕರಿಂಕ ಸ್ವಾಗತಿಸಿದರು. ದಿನೇಶ್ ಅನಂತಾಡಿ ವಂದಿಸಿದರು.