ಬಂಟ್ವಾಳ: ಜೆಸಿಐ ಬಂಟ್ವಾಳದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಬಂಟ್ವಾಳದ ವಾಸುದೇವ ಟವರ್ಸ್ನಲ್ಲಿರುವ ಕಿಯೋನಿಕ್ಸ್ ಸೆಂಟರ್ನಲ್ಲಿ ಆಚರಿಸಲಾಯಿತು. ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಿಯೋನಿಕ್ಸ್ ಸೆಂಟರ್ನ ಗೀತಾ ಜೆ. ಜೈನ್ ಭಾಗವಹಿಸಿದ್ದರು.
Advertisement
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭಾರತಿ ವಸಂತ್ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪವಿತ್ರ ಸುರೇಶ್ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಕಾನೂನು ಮತ್ತು ಹಕ್ಕುಗಳ ಬಗ್ಗೆ ವಕೀಲೆ ಶೈಲಜಾ ರಾಜೇಶ್ ತರಬೇತಿ ನೀಡಿದರು. ವೇದಿಕೆಯಲ್ಲಿ ಜೆಸಿಐ ಬಂಟ್ವಾಳದ ಉಪಾಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ, ಕಾರ್ಯದರ್ಶಿ ರಶ್ಮಿ ಶೆಟ್ಟಿ, ಕಾರ್ಯಕ್ರಮ ಸಂಯೋಜಕಿ ವಿಮಲ ಶ್ರೀನಿವಾಸ್, ಪೂರ್ವಾಧ್ಯಕ್ಷರಾಧ ಯತೀಶ್ ಕರ್ಕೆರಾ, ಸದಾನಂದ ಬಂಗೇರಾ, ಸಂತೋಷ್ ಜೈನ್ ಸದಸ್ಯ ಉಮೇಶ್ ಪೂಜಾರಿ ಉಪಸ್ಥಿತರಿದ್ದರು.
Advertisement