Author: admin

ಬಂಟ್ವಾಳ: ಸರೋಶ್ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಎಡ್ಮಿನಿಸ್ಟ್ರೇಶನ್ ನಿಟ್ಟೆ ಕ್ಯಾಂಪ್ಸ್ ನ ವಿದ್ಯಾರ್ಥಿ ಅರ್ವಿನ್ ಸುವಾರಿಸ್ ಮಂಗಳೂರು ವಿಶ್ವವಿದ್ಯಾನಿಲಯ 2021 22 ನೇ ಸಾಲಿನ ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ (ಬಿ.ಎಚ್.ಎಮ್) ಪದವಿಯಲ್ಲಿ ಎರಡನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಕಲ್ಲಡ್ಕ ಅಮ್ಟೂರಿನ ಎಡ್ವಿನ್ ಸುವಾರಿಸ್ ಮತ್ತು ಅನಿತಾ ಸುವಾರಿಸ್ ದಂಪತಿಯ ಪುತ್ರರಾಗಿದ್ದಾರೆ. Advertisement promotion

Read More

ಪಿಲಾತಬೆಟ್ಟು ಗ್ರಾ.ಪಂ: ತಹಶೀಲ್ದಾರರ ಗ್ರಾಮವಾಸ್ತವ್ಯ ಕಾರ್ಯಕ್ರಮ ಬಂಟ್ವಾಳ : ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಎಂಬ ಕಾರ್ಯಕ್ರಮದನ್ವಯ ಬಂಟ್ವಾಳ ತಾಲೂಕು ತಹಶೀಲ್ದಾರರ ಗ್ರಾಮವಾಸ್ತವ್ಯ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾ.ಪಂ.ವ್ಯಾಪ್ತಿಯ ಪುಂಜಾಲಕಟ್ಟೆ ಬಂಗ್ಲೆ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು.ಬಂಟ್ವಾಳ ತಹಶೀಲ್ದಾರ್ ಸತೀಶ ಕೂಡಲಿಗಿ ಅವರು ಮಾತನಾಡಿ, ಸರಕಾರದ ವತಿಯಿಂದ ಗ್ರಾಮೀಣ ಜನತೆಯ ಸಮಸ್ಯೆಗಳ ಬಗ್ಗೆ ಅರಿತು ಸ್ಥಳದಲ್ಲಿ ಪರಿಹಾರ ಕಲ್ಪಿಸಲು ಗ್ರಾಮ ಭೇಟಿ ಅಭಿಯಾನ ನಡೆಸಲಾಗುತ್ತಿದ್ದು, ಗ್ರಾಮಸ್ಥರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. Advertisement ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರಕಾರ ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಅಭಿನಂದನೀಯ. ಪಿಲಾತಬೆಟ್ಟು ಗ್ರಾಮಸ್ಥರ ಹಲವಾರು ಸಮಸ್ಯೆಗಳಿಗೆ ಇಲ್ಲಿ ಕಾನೂನು ಚೌಕಟ್ಟಿನಲ್ಲಿ ಪರಿಹರಿಸಲು ಸಹಕಾರಿಯಾಗಿದೆ ಎಂದರು. ಗ್ರೇಡ್ ೨ ತಹಶೀಲ್ದಾರ್ ದಯಾನಂದ, ಗ್ರಾ.ಪಂ.ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ ಹೆಗ್ಡೆ, ಪಿಡಿಒ ಯಮುನಪ್ಪ ಕೊರವರ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ಪ್ರಮಾಣಪತ್ರ ವಿತರಿಸಲಾಯಿತು.ತಾಲೂಕು ಆರೋಗ್ಯಾಧಿಕಾರಿ ಡಾ.…

Read More

ಬಂಟ್ವಾಳ: ಜಿಲ್ಲೆಯ ಕಾರಣಿಕದ ದೈವ ಕ್ಷೇತ್ರ ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಮಾ.21 ರಂದು ಮಂಗಳವಾರ ಅಮಾವಾಸ್ಯೆ ಇರುವುದರಿಂದ ಅಗೇಲು ಸೇವೆ ಮತ್ತು ಕೋಲ ಸೇವೆ ಇರುವುದಿಲ್ಲ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ. Advertisement Promotion

Read More

ಮಂಜದಗೋಳಿ ಗಡುವಾಡು ಸ್ಥಳದಲ್ಲಿ ಶ್ರೀನಾಲ್ಕೈತ್ತಾಯ ದೈವದ ಕಟ್ಟೆ ಲೋಕಾರ್ಪಣೆ ಬಂಟ್ವಾಳ: ಸಜೀಪ ಮಾಗಣೆ ಮಂಜದಗೋಳಿ ಗಡುವಾಡು ಸ್ಥಳದಲ್ಲಿ ನೂತನವಾಗಿ ವಾಸ್ತು ಪ್ರಕಾರ ನಿರ್ಮಾಣ ಗೊಂಡ ಶ್ರೀನಾಲ್ಕೈತ್ತಾಯ ದೈವದ ಕಟ್ಟೆ ಲೋಕಾರ್ಪಣೆ ಶುಕ್ರವಾರ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ಧಾರ್ಮಿಕ ವಿಧಿ ವಿಧಾನ ದೊಂದಿಗೆ ಸಂಪನ್ನ ಗೊಂಡಿತು. ಗಡಿ ಪ್ರಧಾನರಾದ ಗಣೇಶ್ ನಾಯ್ಕ್ ಯಾನೆ ಉಗ್ಗ ಶೆಟ್ಟಿ, ದೇವಿ ಪ್ರಸಾದ್ ಪೂಂಜ ಕೋಚು ಪೂಜಾರಿ ಯಾನೆ ಶಂಕರ ಪೂಜಾರಿ, ಕುಂಛ ಪೂಜಾರಿ, ವೆಂಕಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. Advertisement Promotion

Read More

ಅಡೆಪಿಲದಲ್ಲಿ ಶ್ರೀಧರ್ಮರಸು ವೈದ್ಯನಾಥ ಜುಮಾದಿ ಬಂಟ ದೈವಗಳ ನೇಮೋತ್ಸವ ಬಂಟ್ವಾಳ: ಶಂಭೂರು ಗ್ರಾಮದ ಅಡೆಪಿಲ ಶ್ರೀಧರ್ಮರಸು ವೈದ್ಯನಾಥ ಜುಮಾದಿ ಬಂಟ ದೈವಗಳ ವಾರ್ಷಿಕ ಮೂರು ದಿನಗಳ ನೇಮೋತ್ಸವವು ಊರ, ಪರವೂರ ಜನರ ಕೂಡುವಿಕೆ ಹಾಗೂ ಗ್ರಾಮದ ಮನೆತನಗಳ ಮತ್ತು ಅಡೆಪಿಲ ಭಂಡಾರದ ಮನೆಯ ವಾರೀಸು ಕುಟುಂಬಸ್ಥರ ಉಪಸ್ಥಿತಿಯೊಂದಿಗೆ ವಿದ್ಯುಕ್ತವಾಗಿ ಸಂಪನ್ನಗೊಂಡಿತು. Advertisement ಮೊದಲ ದಿನದಂದು ಶ್ರೀ ವೈದ್ಯನಾಥ ಜುಮಾದಿ ದೈವಗಳ ಕಿರುವಾಲು ವೈದ್ಯನಾಥ ಭಂಡಾರದ ಮನೆಯಿಂದ ಹೊರಟು ಅಡೆಪಿಲ ಶ್ರೀ ಧರ್ಮರಸು ಅಲಂಗಾರ ಮಾಡದಲ್ಲಿ ನೆಮೋತ್ಸವ ನಡೆಯಿತು. ಎರಡು ಮತ್ತು ಮೂರನೇ ದಿನ ಅಡೆಪಿಲ ದಿಂಡಿಕೆರೆ ಜೋಡುಸ್ಥಾನದಲ್ಲಿ ಶ್ರೀವೈದ್ಯನಾಥ ಮತ್ತು ಜುಮಾದಿ ದೈವಗಳಿಗೆ ನೇಮೋತ್ಸವ ನಡೆಯಿತು. ಈ ಸಂದರ್ಭದಲ್ಲಿ ದೈವದ ಪ್ರಧಾನ ಅರ್ಚಕ, ಜಗನ್ನಾಥ ಪೂಜಾರಿ, ಶೇಖರ ಕೋಟ್ಯಾನ್, ಸೀತರಾಮ ಪೂಜಾರಿ, ಒಂದನೇ ಮನೆಯ ಹಿರಿಯರಾದ ವಿಶ್ವನಾಥ ಇರಂತಬೆಟ್ಟು, ಗುತ್ತಿನ ಮನೆಯವರು, ಅಡೆಪಿಲ ಭಂಡಾರದ ಮನೆಯ ಹಿರಿಯರಾದ ಜನಾರ್ಧನ ಧರ್ಮಸ್ಥಳ, ಹಿಮಕರ ಪೂಜಾರಿ, ಭಂಡಾರದ ಮನೆ ಟ್ರಸ್ಟ್ ಅಧ್ಯಕ್ಷೆ ಮೀನ ಭಗವಾನ್…

Read More

ಕುಲಶೇಖರ ಶ್ರೀ ವೀರ ನಾರಾಯಣ ದೇವಸ್ಥಾನ ಬ್ರಹ್ಮಕಲಶೋತ್ಸವದ ಸಮಾಲೋಚನಾ ಸಭೆ ಮಂಗಳೂರು : ಇತಿಹಾಸ ಪ್ರಸಿದ್ದ ಮಂಗಳೂರಿನ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಸಮಗ್ರ ಜೀರ್ಣೋದ್ಧಾರಗೊಂಡು ಮೇ 14ರಿಂದ 24ರ ವರೆಗೆ ನಡೆಯಲಿರುವ ಬ್ರಹ್ಮ ಕಲಶೋತ್ಸವದ ಸಮಾಲೋಚನಾ ಸಭೆ ಕ್ಷೇತ್ರದ ಸಭಾಂಗಣದಲ್ಲಿ ನಡೆಯಿತು,ಸಭೆಯಲ್ಲಿ ಬ್ರಹ್ಮ ಕಲಶೋತ್ಸವದ ಅಧ್ಯಕ್ಷರಾಗಿ ಪ್ರೇಮಾನಂದ ಕುಲಾಲ್ ಆಯ್ಕ ಮಾಡಲಾಯಿತು ಅಧ್ಯಕ್ಷತೆಯನ್ನು ವಹಿಸಿದ್ದ. ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡಿ ದೇವಸ್ಥಾನ ಜೀರ್ಣೋದ್ಧಾರಗೊಂಡಾಗ ಗ್ರಾಮ ಅಭಿವೃದ್ಧಿಯಾಗುತ್ತದೆ, ಸಮಾಜ ಬಲಿಷ್ಠ ಕೊಳ್ಳುತ್ತದೆ ,ದೇವಸ್ಥಾನ ಧಾರ್ಮಿಕ ಕೇಂದ್ರವಾಗದೆ ಸಾಮಾಜಿಕ ಶೈಕ್ಷಣಿಕ ಸೇವಾಕಾರಿಗಳ ಕೇಂದ್ರವಾಗಲಿದೆ , ವೀರನಾರಾಯಣ ಕ್ಷೇತ್ರ ಹಿಂದು ಸಮಾಜದ ಪವಿತ್ರ ಕ್ಷೇತ್ರವಾಗಲಿದೆ ಎಂದು ನುಡಿದರು. ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಕುಲಾಲ್ ಕಲ್ಪಾವಿ ಜೀರ್ಣೋದ್ಧಾರದ ಪ್ರಕ್ರಿಯೆಗೆಗಳ ಬಗ್ಗೆ ಮತ್ತು ಸಮಿತಿಯ ಪದಾಧಿಕಾರಿಗಳ ಸದಸ್ಯರ ಯಾದಿಯನ್ನು ವಾಚಿಸಿದರು.ವಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎ. ದಾಮೋದರ್ ಪ್ರಾಸ್ತಾವಿಕ ಮಾತುಗಳಾಡಿದರು, Advertisement ವೇದಿಕೆಯಲ್ಲಿ ದೇವಸ್ಥಾನದ…

Read More

ಬಂಟ್ವಾಳ: ತಾಲೂಕಿನ ಕನ್ಯಾನ ಗ್ರಾಮದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಆತ್ಮಿಕಾ ಕುಟುಂಬಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಬಂಟ್ವಾಳ ಬಿಜೆಪಿ ಕ್ಷೇಮ ನಿಧಿಯಿಂದ ಪುನರ್ ವಸತಿಗಾಗಿ ರೂ.2.50 ಲಕ್ಷ ನಗದು ಹಣವನ್ನು ಬಂಟ್ವಾಳ ನಿರೀಕ್ಷಣಾ ಮಂದಿರದಲ್ಲಿ ಬುಧವಾರ ಹಸ್ತಾಂತರ ಮಾಡಲಾಯಿತು. ಕಳೆದ ಆರು ತಿಂಗಳ ಹಿಂದೆ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿನಿಯಾಗಿದ್ದ ಆತ್ಮಿಕಾ ಳ ಶವ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡು ಬಂದರೂ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಭಜರಂಗದಳ ಕಾರ್ಯಕರ್ತರು ಪೋಲೀಸರಿಗೆ ದೂರು ನೀಡಿ ಪ್ರಕರಣ ದಾಖಲಾಗಿತ್ತು .ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಇಲ್ಲಿನ ನಿವಾಸಿ ಶಾಹುಲ್ ಹಮೀದ್ ಎಂಬಾತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದರು.ಶಾಸಕರಿಗೆ ಅಭಿನಂದನೆ: ಮುರಳಿಕೃಷ್ಣ ಹಸಂತಡ್ಕಅತ್ಮಿಕಾಳನ್ನು ಕಳಕೊಂಡ ಬಡ ಕುಟುಂಬಕ್ಕೆ ನೆರವಾಗಿರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಕಾಳಜಿಗೆ ಭಜರಂಗದಳದ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅಭಿನಂದನೆ ಸಲ್ಲಿಸಿದ್ದಾರೆ. Promotion ಈ ಕುರಿತು ಮಾಧ್ಯಮದವ ಜೊತೆ ಮಾತನಾಡಿದ ‌ಅವರು, ಮುಸ್ಲಿಂ…

Read More

ಬಂಟ್ವಾಳ: ರಾಜ್ಯದಲ್ಲಿರುವ ದರಿದ್ರ ಸರಕಾರವನ್ನು ಮನೆಗೆ ಕಳುಹಿಸ ಬೇಕಾದರೆ ಜನರು ನೂರು ಶೇಕಡ ಮತದಾನ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ. ಅಬ್ದುಲ್ ಜಬ್ಬಾರ್ ಹೇಳಿದರು.ಬಂಟ್ವಾಳ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಸರಪಾಡಿ ಗ್ರಾಮದ ಮಾವಿನಕಟ್ಟೆಯಲ್ಲಿ ಮಂಗಳವಾರ ಸಂಜೆ ನಡೆದ 4 ನೇ ದಿನದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಿ ಸ್ವಾಮ್ಯದ ಎಲ್ಲ ಸಂಸ್ಥೆಗಳನ್ನು ಮಾರಿದ ಕೇಂದ್ರ ಸರಕಾರ ಈಗ ಎಲೈಸಿಗೂ ಕೈ ಹಾಕಿದೆ. ಸಣ್ಣ ಸಣ್ಣ ಪಕ್ಷಗಳನ್ನು ಖರೀದಿ ಮಾಡಿ, ಕಾಂಗ್ರೆಸ್ ಗೆ ಬರುವ ಮತವನ್ನು ಹೇಗೆ ತಮ್ಮ ಪಕ್ಷಕ್ಕೆ ಸೆಳೆಯಬಹುದು ಎನ್ನುವ ಹುನ್ನಾರದಲ್ಲಿ ಬಿಜೆಪಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿದರು. ಸುಳ್ಳು ಭರವಸೆ ನಮ್ಮಲ್ಲಿ ಇಲ್ಲ. ಹೇಳಿದ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ತಿಳಿಸಿದರು.ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಪ್ರತೀ ಪಂಚಾಯತಿಗೆ ತೆರಳಿ ಜನರನ್ನು, ಕಾರ್ಯಕರ್ತರನ್ನು ಭೇಟಿ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಹಂತ ಹಂತವಾಗಿ ಪಕ್ಷದ ಜವಾಬ್ದಾರಿ…

Read More

ಬಂಟ್ವಾಳ: ತಾಲೂಕಿನ ಕಾವಳ ಮೂಡೂರು ಗ್ರಾಮದ ಕಾರಿಂಜೇಶ್ವರ ಸನ್ನಿಧಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗೆ ನಿಷೇಧ ಮಾಡುವಂತೆ ಸರಕಾರದ ಗಣಿ ಇಲಾಖೆಯ ಅಧೀನ ಕಾರ್ಯದರ್ಶಿ ಸುಮಾ ಎಸ್. ಆದೇಶ ಹೊರಡಿಸಿದ್ದಾರೆ.ಕಾರಿಂಜ ದೇವಾಲಯದ ಸುತ್ತಮುತ್ತ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದುದರಿಂದ ದೇವಸ್ಥಾನಕ್ಕೆ ಹಾನಿಯಾಗುತ್ತಿದೆ ಎಂಬ ದೂರು ಕೇಳಿ ಬಂದಿದ್ದು ಇದರ ವಿರುದ್ಧ ಪ್ರತಿಭಟನೆ, ಹೋರಾಟಗಳು ನಡೆದಿತ್ತು. ಆದ್ದರಿಂದ ಕಾವಳಮೂಡೂರು ಗ್ರಾಮ ವ್ಯಾಪ್ತಿಯ ಶ್ರೀ ಕಾರಿಂಜೇಶ್ವರ ದೇವಸ್ಥಾನದ ೦೨ ಕಿಲೋ ಮೀಟರ್ ಸುತ್ತಳತೆಯ ಪ್ರದೇಶವನ್ನು ಧಾರ್ಮಿಕ ಚಟುವಟಿಕೆಗಳ ಉದ್ದೇಶಕ್ಕಾಗಿ ಕಾಯ್ದಿರಿಸಿ, ಸದರಿ ಸ್ಥಳದ ೦೨ ಕಿಲೋ ಮೀಟರ್ ಸುತ್ತಳತೆ ವ್ಯಾಪ್ತಿಯಲ್ಲಿ, ಎಲ್ಲಾ ರೀತಿಯ ಗಣಿಗಾರಿಕೆ ಮತ್ತು ಕಲ್ಲುಪುಡಿ (ಕ್ರಷರ್) ಚಟುವಟಿಕೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿಷೇಧಿಸಿರುವುದಾಗಿ ಆದೇಶ ಪತ್ರದಲ್ಲಿ ತಿಳಿಸಲಾಗಿದೆ. Promotion

Read More

ಬಂಟ್ವಾಳ: ಕಳೆದ ನಾಲ್ಕುವರೆ ವರ್ಷಗಳಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರವನ್ನು ಶಾಂತಿಯುತ ಬಂಟ್ವಾಳವಾಗಿ ಪರಿವರ್ತಿಸಿರುವ ತೃಪ್ತಿ ನನಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.ಅವರು ಕರೋಪಾಡಿ ಗ್ರಾ.ಪಂ. ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು. ಕರೋಪಾಡಿ ಗ್ರಾಮದಲ್ಲಿ ೧೩ ಕೋಟಿಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಲಾಗಿದೆ, ಕ್ಷೇತ್ರ ವ್ಯಾಪ್ತಿಯಲ್ಲಿ ೨ ಸಾವಿರ ಕೋಟಿಗೂ ಹೆಚ್ಚು ಅನುದಾನಗಳ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇನೆ ಎಂದು ಅವರು ತಿಳಿಸಿದರು.ನಮ್ಮ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಯೋಜನೆಗಳ ಪ್ರತಿಯೊಂದು ಸಹಿತ ದಾಖಲೆ ನಮ್ಮಲ್ಲಿದೆ, ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಮತದಾರರಲ್ಲಿ, ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯ ಕೆಲವರಿಂದ ನಡೆಯುತ್ತಿದ್ದು, ಈ ಕುರಿತು ಎಚ್ಚರ ವಹಿಸುವಂತೆ ಅವರು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಿಂದ ಇಡೀ ಜಗತ್ತು ದೇಶದತ್ತ ನೋಡುತ್ತಿದೆ. ಇತ್ತೀಚಿಗೆ ನಡೆದ ಸರ್ವೇಯಲ್ಲೂ ಪ್ರಧಾನಿ ಮೋದಿಯವರು ನಂ.೧ ಸ್ಥಾನದಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವಾರು ಜನಪರವಾದ…

Read More