ಬಂಟ್ವಾಳ : ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಮತ್ತು
ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲ ಬಿ.ಸಿ.ರೋಡ್ , ಹಾಗೂ
ಶ್ರೀ ಗುರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮೆಲ್ಕಾರ್ ಇದರ ಸಿಬಂದಿಗಳಿಗೆ ಸಹಕಾರಿ ಕಾನೂನು, ವ್ಯವಹಾರ ಮಾಹಿತಿ ಕಾರ್ಯಾಗಾರವು ಫೆ 25 ರಂದು ಮೆಲ್ಕಾರ್ ಬಿರ್ವ ಸೆಂಟರ್ ಮಿನಿ ಆರ್ಚಿಡ್ ಹಾಲ್ನಲ್ಲಿ ನಡೆಯಿತು.
ಮೂರ್ತೆದಾರರ ಮಹಾ ಮಂಡಲ .ಮತ್ತು ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು.
ನಿರ್ದೇಶಕರಾದ ಆಶೋಕ್ ಪೂಜಾರಿ, ಆಶಿಶ್ ವಾಮದಪದವು, ಸುಜಾತಾ, ವಾಣಿ ವಸಂತ , ಅರುಣ್ ಕುಮಾರ್ ಉಪಸ್ಥಿತರಿದ್ದರು.
ಪುತ್ತೂರು ವಿಭಾಗ ಸಹಕಾರಿ ಸಂಘಗಳ ಸಹಾಯಕ ನಿಬಂದಕಿ ತ್ರಿವೇಣಿ ರಾವ್, ಜಿಲ್ಲಾ ಕೇ೦ದ್ರ ಸಹಕಾರಿ ಬ್ಯಾಂಕ್ ನಿವೃತ್ತ ಡಿಜಿಎಂ
ಲೀಲಾ ರಾಮ್, ಹಿರಿಯ ನ್ಯಾಯವಾದಿ ಅಶ್ವನಿ ಕುಮಾರ್ ರೈ ವಿವಿಧ ಮಾಹಿತಿ ನೀಡಿದರು.
ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸಿಇಒ ಮಮತಾ ಜಿ ಚೇಳೂರು, ಶ್ರೀ ಗುರು ಕ್ರೆಡಿಟ್ ಸಿಇಒ ಪ್ರವೀಣ್ ಉಪಸ್ಥಿತರಿದ್ದರು.
ಶ್ರೀಗುರು ಸೊಸೈಟಿ ಉಪಾಧ್ಯಕ್ಷ . ರಮೇಶ ಅನ್ನಪ್ಪಾ ಡಿ ಸ್ವಾಗತಿಸಿ, ನಿರ್ದೇಶಕ ಜಯಶಂಕರ ಕಾನ್ಸಾಲೆ ವಂದಿಸಿದರು.