
ಬಂಟ್ವಾಳ: ಸೆಕ್ಯೂರ್ ಇನ್ಸುರೆನ್ಸ್ ಕನ್ಸಲ್ಟೆನ್ಸಿ ಹಾಗೂ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ 136ನೇ ರಕ್ತದಾನ ಶಿಬಿರ ಜೂ.14ರಂದು ಭಾನುವಾರ ಬಿ.ಸಿ.ರೋಡಿನ ರಕ್ತೇಶ್ವರೀ ದೇವಸ್ಥಾನದ ಬಳಿ ಇರುವ ಆರ್. ಕಾಂಪ್ಲೆಕ್ಸ್ ನ ಎರಡನೇ ಮಹಡಿಯಲ್ಲಿ ನಡೆಯಲಿದೆ.
ಶಾಸಕ ರಾಜೇಶ್ ನಾಯ್ಕ್, ತಹಶೀಲ್ದಾರ್ ಜಿ.ಮಂಜುನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಎಂದು ಸೆಕ್ಯೂರ್ ಇನ್ಸೂರೆನ್ಸ್ ಕನ್ಸಲೆನ್ಸಿಯ ಸಂಸ್ಥಾಪಕ ಪ್ರಶಾಂತ್ ಫ್ರಾಂಕ್ ಹಾಗೂ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣ ಕುಮಾರ್ ಪೂಂಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ


Advertisement







