
ಬಂಟ್ವಾಳ: ಮದುವೆ ಸೀರೆ ಸಹಿತ ವೈವಿಧ್ಯಮಯ ವಸ್ತ್ರಗಳ ಮೂಲಕ ಮನೆಮಾತಾದ ಹೆಸರಾಂತ ಮಳಿಗೆ ಬಂಟ್ವಾಳದ ಬೈಪಾಸ್ನಲ್ಲಿರುವ ಪ್ರತಿಷ್ಠಿತ ಅಂಚನ್ ಸಿಲ್ಕ್ಸ್ ವಸ್ತ್ರ ಮಳಿಗೆಯಲ್ಲಿ ಬಹು ಸಂಭ್ರಮದ ಅಂಚನೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಕೈಮಗ್ಗ ಸೀರೆಗಳ ಬೃಹತ್ ಮಾರಾಟ ಮೇಳಕ್ಕೆ ಯೋಗ ದಿನವಾದ ರವಿವಾರ ಚಾಲನೆ ನೀಡಲಾಯಿತು.
ಸಂಸದ ಕ್ಯಾ|ಬ್ರಿಜೇಶ್ ಚೌಟ ಅವರು ಚಾಲನೆ ನೀಡಿ ಮಾತನಾಡಿ “ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ ವೋಕಲ್ ಫಾರ್ ಲೋಕಲ್ ಎಂಬ ಪರಿಕಲ್ಪನೆಯಲ್ಲಿ ಖಾದಿ ಉದ್ಯಮಕ್ಕೆ ವಿಶೇಷ ಪ್ರೋತ್ಸಾಹ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಕಾಶ್ ಅಂಚನ್, ಶೇಖರ್ ಅಂಚನ್ ಹಾಗೂ ಪುರುಷೋತ್ತಮ ಅಂಚನ್ ಅವರ ಸಮರ್ಥ ನೇತೃತ್ವದ ಅಂಚನ್ ಸಿಲ್ಕ್ಸ್ ಕೈಮಗ್ಗ ಸೀರೆಗಳ ಅಭೂತಪೂರ್ವ ಮಾರಾಟಕ್ಕೆ ಮುನ್ನುಡಿ ಬರೆದಿರುವುದು ಶ್ಲಾಘನೀಯ” ಎಂದರು.

ಅಂಚನ್ ಸಿಲ್ಕ್ಸ್ ವಸ್ತ್ರ ಮಳಿಗೆಯಲ್ಲಿ ನೂತನವಾಗಿ ತೆರೆಯಲಾಗಿರುವ ವೋಲ್ ಸೇಲ್ ಕೌಂಟರ್ ಅನ್ನು ಶಾಸಕ ರಾಜೇಶ್ ನಾಯ್ಕ್ ಅವರು ಉದ್ಘಾಟಿಸಿದರು. “ಅಂಚನ್ ಸಿಲ್ಕ್ಸ್ ವಸ್ತ್ರ ಮಳಿಗೆ ಬಂಟ್ವಾಳಕ್ಕೆ ಹೆಮ್ಮೆಯ ಮಳಿಗೆಯಾಗಿದೆ. ಕೈಮಗ್ಗಕ್ಕೆ ಪ್ರೋತ್ಸಾಹ ನೀಡುವ ಪ್ರಕಾಶ್ ಅಂಚನ್ ಸಹೋದರರ ಕಾರ್ಯ ಅದ್ವಿತೀಯ” ಎಂದರು.
ಅಂಚನ್ ಸಿಲ್ಕ್ಸ್ ಪ್ರವರ್ತಕರಾದ ಪ್ರಕಾಶ್ ಅಂಚನ್, ಶೇಖರ್ ಅಂಚನ್ ಹಾಗೂ ಪುರುಷೋತ್ತಮ ಅಂಚನ್ ಪಿಲ್ಕಾಜೆಗುತ್ತು ಸ್ವಾಗತಿಸಿದರು.
ಮುಖಂಡರಾದ ಚೆನ್ನಪ್ಪ ಕೋಟ್ಯಾನ್, ಹರಿಕೃಷ್ಣ ಬಂಟ್ವಾಳ್, ದೇವಪ್ಪ ಪೂಜಾರಿ, ಸುದರ್ಶನ್ ಬಜ, ಮಾಧವ ಮಾವೆ, ಪದ್ಮನಾಭ ಪೂಜಾರಿ ಕೇಲ್ಯೆದಗುತ್ತು, ಆನಂದ ಪೂಜಾರಿ ಕೇಂದೋಡಿ, ರಾಮಚಂದ್ರ ಪೂಜಾರಿ ಕರೆಂಕಿ, ಬಾಲಕೃಷ್ಣ ಗೌಡ ಕರೆಂಕಿ, ಲಕ್ಷ್ಮೀನಾರಾಯಣ ಗೌಡ ಪಂಜಿಕಲ್ಲು, ಹರಿಪ್ರಸಾದ್, ಪ್ರವೀಣ್ ಅಂಚನ್, ಸಂತೋಷ್ ಕುಮಾರ್ ರಾಯಿಬೆಟ್ಟು, ರವೀಶ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಪುಷ್ಪರಾಜ್ ಚೌಟ ಮುಂತಾದವರು ಉಪಸ್ಥಿತರಿದ್ದರು.

ಕರಾವಳಿಯ ಮನೆ ಮಾತಾಗಿರುವ ಅಂಚನ್ ಗಾರ್ಮೆಂಟ್ಸ್ನ 28ನೇ ವರ್ಷಾಚರಣೆ ಭಾಗವಾಗಿ ಈ ಉತ್ಸವ ಆಯೋಜನೆಗೊಂಡಿದೆ. ಸಂಸ್ಥೆಯ ಪ್ರವರ್ತಕರಾದ ಅಂಚನ್ ಸಹೋದರರು ಕಳೆದ 3 ವರ್ಷಗಳ ಹಿಂದೆ ಮಹಾನಗರಿಗಳಲ್ಲಿ ಕಾಣಬಹುದಾದ ಬಹು ಅಂತಸ್ತಿನ ವಸ್ತ್ರ ಮಳಿಗೆಯನ್ನು ಬಂಟ್ವಾಳಕ್ಕೆ ಪರಿಚಯಿಸಿದ್ದಾರೆ. ಬಂಟ್ವಾಳದ ಬೈಪಾಸ್ ನ ಅಂಚನ್ ಸಿಲ್ಕ್ಸ್ ನಲ್ಲಿ ಮಾತ್ರ ವಿಶೇಷ ರಿಯಾಯಿತಿ ದರದ ಮಾರಾಟ ಇರಲಿದೆ. ಹೋಲ್ ಸೇಲ್ ದರದಲ್ಲಿ ನೇರವಾಗಿ ಕಂಪೆನಿಯಿಂದ ಇಲ್ಲಿಯ ಗ್ರಾಹಕರಿಗೆ ತಲುಪಿಸುವ ಸಂಭ್ರಮಾಚರಣೆ ಇದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ವಿಶೇಷ ರಿಯಾಯಿತಿ ದರದ ಮಾರಾಟ:
ಅಂಚನ್ ಸಿಲ್ಕ್ಸ್ ವಸ್ತ್ರ ಮಳಿಗೆಯಲ್ಲಿ ಅಂಚನೋತ್ಸವ ಜೂ.17ರಿಂದ ಆರಂಭವಾಗಿದ್ದು ಆ.17ರವರೆಗೆ ನಡೆಯಲಿದೆ. ಎಲ್ಲ ರೀತಿಯ ವಸ್ತ್ರಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಅಂಚನೋತ್ಸವದಲ್ಲಿ ಕೈಮಗ್ಗ ಸೀರೆಗಳ ಪ್ರದರ್ಶನ, ಮಾರಾಟ ಹಮ್ಮಿಕೊಳ್ಳಲಾಗಿದೆ. ಉತ್ತರ ಕರ್ನಾಟಕದಿಂದ ತರಿಸಿದ ವಿನೂತನ ಶೈಲಿಯ ಕೈಮಗ್ಗ ಸೀರೆಗಳು 500 ರೂ.ಗಳಿಂದ ಆರಂಭವಾಗಿ 2 ಸಾವಿರ ರೂ.ಗಳಿಗೂ ಅಧಿಕ ಬೆಲೆಯಲ್ಲಿ ಲಭ್ಯವಿದೆ. ಹಾಗೂ ಹ್ಯಾಂಡ್ ಲೋಮ್ ಮತ್ತಿತತರ ಹೋಲ್ ಸೇಲ್ ಕೌಂಟರ್ ಆರಂಭಿಸಲಾಗಿದೆ. ಶುಭಸಮಾರಂಭಗಳಿಗೆ, ಧಾರ್ಮಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಬೇಕಾಗುವ ಎಲ್ಲಾ ರೀತಿಯ ಶಾಲುಗಳು, ಧೋತಿ, ಮೈಸೂರು ಪೇಟ, ಆಕರ್ಷಕ ಹಾರಗಳು, ಸಮ್ಮಾನ ಶಾಲುಗಳು, ಬಂಟಿಂಗ್ಸ್ ಹಾಗೂ ಪ್ಲಾಗ್ಸ್ ಹೋಲ್ ಸೇಲ್ ದರದಲ್ಲಿ ದೊರೆಯಲಿದೆ ಎಂದು ಪ್ರವರ್ತಕರಾದ ಪ್ರಕಾಶ್ ಅಂಚನ್ ತಿಳಿಸಿದ್ದಾರೆ.


Advertisement







