
ಬಂಟ್ವಾಳ: ಕಳೆದ 2001ನೇ ಇಸವಿಯಿಂದ ವಿದ್ಯುತನ್ನು ಖಾಸಗಿಕರಣಗೊಳಿಸಲು ಸರಕಾರ ಹೊರಟಿದೆ.ಆಗ ಕ.ರಾ ರೈತ ಸಂಘ ಹಸಿರುಸೇನೆ ತೀವ್ರವಾಗಿ ಪ್ರತಿಭಟಿಸಿ ಸರಕಾರದ ಈ ಷಡ್ಯಂತ್ರವನ್ನು ವಿಫಲಗೊಳಿಸಿದೆ.
ರಾಜ್ಯದಾದ್ಯಂತ ಪಂಪ್ ಸೆಟ್ ಮೀಟರ್ ಗಳನ್ನು ಕಿತ್ತು ಇಲಾಖೆ ಕಛೇರಿಗಳ ಮುಂದೆ ಪ್ರತಿಭಟಿಸಿದ ಕಾರಣ ಅಂದು ಸರಕಾರ ಕಾರ್ಯವನ್ನು ಕೈಬಿಟ್ಟಿತ್ತು.
ಈಗ ರಾಜ್ಯ ಸರಕಾರ ಟಾಟಾ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು ವಿದ್ಯುತ್ ಸಂಸ್ಥೆಯನ್ನು ಖಾಸಗಿ ಕಂಪೆನಿಗೆ ನೀಡಿ ಕೃಷಿ ಪಂಪ್ ಸೆಟ್ಗೆ ಸ್ಮಾರ್ಟ್ ಮೀಟರ್ ಅಳವಡಿಸಿ ದುಬಾರಿ ಹಣ ವಸೂಲಿ ಮಾಡಲು ಮುಂದಾಗಿದೆ.
ರಾಜ್ಯಾದ್ಯಂತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಹೊರತುಪಡಿಸಿ ಕ.ರಾ ರೈತ ಸಂಘ ಹಸಿರುಸೇನೆಯ ರಾಜ್ಯಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಇವರ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಯುತ್ತಿದೆ.
ಈ ಹೋರಾಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ರೈತರು ಈ ಯೋಜನೆಯನ್ನು ಉಗ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸುವುದಲ್ಲದೆ ಉಭಯ ಜಿಲ್ಲೆಯ ಶಾಸಕರು ರಾಜಕೀಯ ರಹಿತವಾಗಿ ಈ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸಿ ಈ ಪ್ರಯತ್ನವನ್ನು ತಡೆಯಲು ಮುಂದೆ ಬರಬೇಕೆಂದು ಕ.ರಾ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ಹಾಗೂ ಕ.ರಾ ರೈತ ಸಂಘ ದ.ಕ ಜಿಲ್ಲಾಧ್ಯಕ್ಷರಾದ ಶ್ರೀಧರ ಶೆಟ್ಟಿಯವರು ಕರೆ ಕೊಟ್ಟಿದ್ದಾರೆ.


Advertisement







