
ಬಂಟ್ವಾಳ: ಸನಾತನ ಹಿಂದೂ ಧರ್ಮದ ಪರಿಪಾಲನೆ, ರಾಷ್ಟೀಯ ವಿಚಾರ ಧಾರೆಯ ಮೂಲಕ, ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಮಾರ್ಗದರ್ಶನದ ಅನುಸರಣೆಯ ಮೂಲಕ ಹಿಂದೂ ರಾಷ್ಟ್ರಭಾರತದಲ್ಲಿ ಅಧಿಕಾರದ ಜವಾಬ್ದಾರಿ ಪಡೆದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಲ್ಲಿ ಅತೀ ಸುಧೀರ್ಘ ಅವಧಿಯಲ್ಲಿ ಪ್ರಧಾನಿಯಾಗಿ ಯಶಸ್ವಿ ಆಡಳಿತ ನಡೆಸಿ, ದೇಶ ಅಲ್ಲದೇ ಪ್ರಪಂಚದಲ್ಲಿಯೇ ಅತ್ತ್ಯುನುತ ನಾಯಕರಾಗಿ ಹೊರಹೊಮ್ಮಿ
ಸರ್ವರಿಗೂ ಸಮಪಾಲು ಎಂಬ ಕಲ್ಪನೆಯಂತೆ ಅಧಿಕಾರ ನಡೆಸಿ ಲೋಕ ನಾಯಕರಾಗಿರುವ ಮೋದಿಜಿ ಯವರಿಗೆ ಇನ್ನಷ್ಟು ಧೀರ್ಘವದಿ ಅಧಿಕಾರ ನಡೆಸಲು ಶಕ್ತಿನೀಡುವರೊಂದಿಗೆ ಜಗತ್ತಿನ ಮಹಾನ್ ಶಕ್ತಿಯಾಗಿ ಮೋದಿಜೀ ಬೆಳಗಳಿ ಹಾಗೂ
ಹಾಗೂ ಆಯುರಾರೋಗ್ಯ ವರ್ಧನೆಗಾಗಿ,
ಮೋದಿಜಿಗೆ ಬರುವ ಎಲ್ಲಾ ವಿಘ್ನಗಳಿಗೆ ಪರಿಹಾರ ಪ್ರಾಪ್ತಿಯಾಗಬೇಕು ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಬಿಜೆಪಿ ಕಾರ್ಯಕರ್ತರ ಪರವಾಗಿ ಸಾಮೂಹಿಕ
ಪ್ರಾರ್ಥನೆ ಮಾಡಿದರು.

ದೇವಸ್ಥಾನದ ಅರ್ಚಕ ಜಗದೀಶ್ ಶೆಟ್ಟಿ ಮಾವಿನಕಟ್ಟೆ ಪೂಜೆ ನೆರೆವೇರಿಸಿ ಮೋದಿಜೀ ಯವರಿಗೆ ಶುಭ ಹಾರೈಸಿದರು.
ಈ ಐತಿಹಾಸಿಕ ಪ್ರಗತಿ ಹಿನ್ನೆಲೆಯಲ್ಲಿ ಕುಕ್ಕಿಪಾಡಿ ಹಾಗೂ ಎಲಿಯನಡುಗೋಡು ಬಿಜೆಪಿ ಶಕ್ತಿ ಕೇಂದ್ರಗಳ ವತಿಯಿಂದ ವಾಮದಪದವು ಸಮೀಪದ ಮಾವಿನಕಟ್ಟೆ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಕುಕ್ಕಿಪಾಡಿ ಶಕ್ತಿ ಕೇಂದ್ರದ ಪ್ರಮುಖರಾದ ಯೋಗೀಶ್ ಆಚಾರ್ಯ ಹಾಗೂ ಕುಕ್ಕಿಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ್ ಶೆಟ್ಟಿ ಬದ್ಯಾರ್,ಬೂತ್ ಅಧ್ಯಕ್ಷರಾದ ಲಿಂಗಪ್ಪ ಪೂಜಾರಿ, ಪುಷ್ಪರಾಜ್ ಪೂಜಾರಿ, ಬೂತ್ ಕಾರ್ಯದರ್ಶಿ ಶಿವಾನಂದ ಪೂಜಾರಿ, ಪ್ರಭಾತ್ ನಾಯಕ್,ಪ್ರವೀಣ್ ಶೆಟ್ಟಿ, ಪಕ್ಷದ ಪ್ರಮುಖರಾದ ಹರೀಶ್ ಪೂಜಾರಿ, ರಾಜು ಪೂಜಾರಿ, ಯಶವಂತ ಆಚಾರ್ಯ ಉಪ್ಪಿರ,ಪೂವಪ್ಪ ಪೂಜಾರಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು


Advertisement







