ಬಂಟ್ವಾಳ: ಮುಂಬರುವ ಚುನಾವಣೆಯ ಉದ್ದೇಶದಿಂದ ಬಿ.ಸಿ.ರೋಡಿನ ಹೊಟೇಲ್ ರಂಗೋಲಿಯಲ್ಲಿ ಬಿಎಲ್ಎ ಮತ್ತು ಬಿಎಲ್ಓಗಳ ಸಭೆ ಕರೆದು ಏಕಾಏಕಿ ಸಮಯ ಬದಲಾವಣೆ ಮಾಡಿರುವ ಬಗ್ಗೆ ಬಿಎಲ್ಓ ಗಳು ಸಭಗೆ ಆಹ್ವಾನಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಮುಂಬರುವ ಚುನಾವಣೆಯ ಉದ್ದೇಶದಿಂದ ಬಿ.ಸಿ.ರೋಡಿನ ಹೊಟೇಲ್ ರಂಗೋಲಿಯಲ್ಲಿ ಸೋಮವಾರ ಸಂಜೆ ಮೂರು ಗಂಟೆಗೆ ಸಭೆ ನಡೆಯಲಿದ್ದು ಎಲ್ಲಾ ಬಿಎಲ್ಓಗಳು ಭಾಗವಹಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಅಂಗವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕಿಯರು ಮೂರು ಗಂಟೆಗೆ ಮುಂಚಿತವಾಗಿಯೇ ಸಭಾಂಗಣಕ್ಕೆ ಆಗಮಿಸಿದರು. ಆದರೆ ಇಲ್ಲಿಗೆ ಬಂದ ಬಳಿಕ ಸಭೆಯನ್ನು ನಾಲ್ಕು ಗಂಟೆಗೆ ಮುಂದೂಡಿರುವ ಬಗ್ಗೆ ತಿಳಿಸಿದ್ದು ಬಿಎಲ್ಓಗಳನ್ನು ಕೆರಳಿಸಿದೆ. ಸಭಾಂಗಣದ ಮುಂದೆ ಕಾದು ಸುಸ್ತಾಗಿ ತಮ್ಮ ಅಸಮಾಧಾನವನ್ನು ಮಾಧ್ಯಮದ ಮುಂದೆ ತೋಡಿಕೊಂಡ ಬಿಎಲ್ಓಗಳು ನಾವು ಮನೆಗೆ ಹೋಗುವ ಸಂದರ್ಬದಲ್ಲಿ ನಮ್ಮನ್ನು ಸಭೆಗೆ ಕರೆಯುತ್ತಾರೆ, ಆದರೆ ಗ್ರಾಮೀಣ ಭಾಗದ ದೂರದೂರುಗಳಿಂದ ನಾವು ಬರುತ್ತೇವೆ, ಸಭೆಯನ್ನು ಇಷ್ಟು ತಡವಾಗಿ ಆರಂಭಿಸಿದರೆ ವಾಪಸ್ಸು ಮನೆಗೆ ಹೋಗಲು ನಮಗೆ ಸಮಸ್ಯೆಯಾಗುತ್ತದೆ. ಯಾಕೆ ಈ ರೀತಿ ಅಧಿಕಾರಿಗಳು ತೊಂದರೆ ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ತಮಗೆ ಬೇಕಾದಂತೆ ದುಡಿಸುವ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು, ಮಹಿಳೆಯರು ಭಾಗವಹಿಸುವ ಸಭೆಯನ್ನು ಅವರಿಗೆ ತೊಂದರೆಯಾಗದಂತೆ ಸಮಯವನ್ನು ನಿಗದಿ ಪಡಿಸಿ ಸಭೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಸಭೆಯಲ್ಲಿ ಚಾ ತಿಂಡಿ ಬಿಡಿ ಕುಡಿಯಲು ನೀರನ್ನು ನೀಡುವುದಿಲ್ಲ ಎಂದು ಕೆಲವು ಬಿಎಲ್ಓಗಳು ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ.
—