
ಬಂಟ್ವಾಳ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ ನೇತ್ರಾವತಿ ವಲಯ ಬಂಟ್ವಾಳ ತಾಲೂಕು ಇವರ ವತಿಯಿಂದ ಮಹತೋಭಾರ ಶ್ರೀಕಾರಿಂಜೇಶ್ವರ ದೇಗುಲದಲ್ಲಿ ರಥಸಪ್ತಮಿಯ ಪ್ರಯುಕ್ತ 108 ಸೂರ್ಯ ನಮಸ್ಕಾರ ನಡೆಯಿತು.
ಮಹತೋಭಾರ ಶ್ರೀ ಕಾರಿಂಜೇಶ್ವರ ದೇಗುಲದ ಅರ್ಚಕ ಮಿಥುನ್ ಭಟ್ ನಾವಡ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ವಿಸ್ತರಣಾ ಪ್ರಮುಖ್ ಈಶ್ವರ್, ತಾಲೂಕು ಸಂಚಾಲಕ ನಾರಾಯಣ, ಶಾಖಾ ಸಂಚಾಲಕ ಹೇಮಂತ್ ಹಾಗೂ ತಾಲೂಕು ಪ್ರಮುಖರು ಹಾಗೂ ಬಂಟ್ವಾಳ ತಾಲೂಕಿನ ಎಲ್ಲಾ ಯೋಗ ಬಂಧುಗಳು ಭಾಗವಹಿಸಿದ್ದರು.
ಪ್ರಕಾಶ್ ರವರು ರಥಸಪ್ತಮಿಯ ವಿಶೇಷದ ಬಗ್ಗೆ ಬೌದ್ಧಿಕ್ ನೀಡಿದರು.ನಯನ ನಿರೂಪಿಸಿ, ಸುಗುಣ ವಂದಿಸಿದರು.
