
ಬಂಟ್ವಾಳ : ಬಿ.ಮೂಡ ಗ್ರಾಮದ ಸಂಚಯಗಿರಿ ನಾಗರಿಕ ಕ್ರಿಯಾ ಸಮಿತಿ ಇದರ 2025- 26ನೇ ಸಾಲಿನ ಮಹಾಸಭೆಯು ಸಂಚಯ ಗಿರಿಯ ನರಸಿಂಹ ಹೊಳ್ಳ ಕಲಾ ವೇದಿಕೆಯಲ್ಲಿ ಮಂಗಳವಾರ ನಡೆಯಿತು. ಅಧ್ಯಕ್ಷರಾಗಿ ಸುರೇಶ್ ಬಂಗೇರವರು ಸತತ ನಾಲ್ಕನೇ ಬಾರಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಕಾರ್ಯದರ್ಶಿಯಾಗಿ ಹರೀಶ ಶೆಣೈ, ಕೋಶಾಧಿಕಾರಿಯಾಗಿ ಎ.ದಾಮೋದರ್, ಗೌರವಾಧ್ಯಕ್ಷರಾಗಿ ನರಸಿಂಹರಾಜ ಹೊಳ್ಳ ,ಕ್ರೀಡಾ ಕಾರ್ಯದರ್ಶಿಯಾಗಿ ಧನಂಜಯ ಬಾಳಿಗ, ಉಪಾಧ್ಯಕ್ಷರಾಗಿ ತಾಯಮ್ಮ,
ಸಮಿತಿ ಸದಸ್ಯರುಗಳಾಗಿ ಸಂಕಪ್ಪ ಶೆಟ್ಟಿ, ಪಾಂಡುರಂಗ ನಾಯಕ್ , ಸುಧಾಕರ್ ಸಾಲಿಯಾನ್, ಪುರಂದರ ಶೆಟ್ಟಿ ,ಪ್ರಭಾಕರ ಪ್ರಭು, ದಾಮೋದರ ಗೌಡ ,ರಾಘವೇಂದ್ರ ಬನ್ನಿಂತಾಯ, ಸತೀಶ್ ಬಂಗೇರ ,ಶೇಖರ್ ಕುಲಾಲ್, ಪ್ರದೀಪ್ ,ಪವಿತ್ರ ಕುಮಾರ್ ,ಪ್ರಿಯಾಲತ, ಭವತಾರಿಣಿ, ರೀಟಾ ಆಯ್ಕೆಯಾದರು
