
ಬಂಟ್ವಾಳ: ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ಬಂಟ್ವಾಳ ಎಲ್ಲೈಸಿ ಶಾಖೆ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ನೇತೃತ್ವದ ವಿಮಾ ಪ್ರತಿನಿಧಿಗಳ ತಂಡದ ವತಿಯಿಂದ ಬೆಳ್ಳಿಹಬ್ಬ ಕಾರ್ಯಕ್ರಮ ಮೇ.16ರಂದು ಸಂಜೆ 4 ಗಂಟೆಗೆ ನಡೆಯಲಿದೆ.
ಕನಸು ಹೆಸರಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಉಡುಪಿ ಹಿರಿಯ ವಿಭಾಗೀಯ ಅಧಿಕಾರಿ ಗಣಪತಿ ಎನ್.ಭಟ್ ಉದ್ಘಾಟಿಸಲಿದ್ದು, ಬಂಟ್ವಾಳ ಹಿರಿಯ ಶಾಖಾಧಿಕಾರಿ ಗುರುದತ್ ನಾಯಕ್ ಅಧ್ಯಕ್ಷತೆ ವಹಿಸುವರು. ಹಿರಿಯ ಅಧಿಕಾರಿಗಳಾದ ಗುರುರಾಜ್ ರಾವ್, ದುರ್ಗಾರಾಮ್ ಶೆಣೈ, ಬೆಳ್ತಂಗಡಿ ಶಾಖಾಧಿಕಾರಿ ಕೆ.ಪ್ರಕಾಶ್, ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಡಾ.ಗೀತ್ ಪ್ರಕಾಶ್, ಉಪ ಶಾಖಾಧಿಕಾರಿ ಮುತ್ತಯ್ಯ ಮರಾಟೆ ಭಾಗವಹಿಸುವರು. ಇದೇ ವೇಳೆ ಮೆರವಣಿಗೆ, ಸಾಧಕರಿಗೆ ಸನ್ಮಾನ, ಕಡೇಶ್ವಾಲ್ಯ ಶ್ರೀ ಚಿಂತಾಮಣಿ ತಂಡದಿಂದ ನೃತ್ಯ ಪ್ರದರ್ಶನ ಮತ್ತು ಉಮೇಶ್ ಮಿಜಾರ್ ತಂಡದಿಂದ ತೆಲಿಕೆದ ಗೊಂಚಿಲ್ ಹಾಸ್ಯ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.



Advertisement







