
ಬಂಟ್ವಾಳ: ಇಲ್ಲಿನ ಬೈಪಾಸ್ ಜಂಕ್ಷನಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಸಮಾಜ ಸೇವಾ ಸಹಕಾರಿ ಸಂಘದ 18ನೇ ಶಾಖೆಯು ಉಳ್ಳಾಲ ತಾಲೂಕಿನ ಬೋಳಿಯಾರು ದೇವಿಕಿರಣ್ ಸಂಕೀರ್ಣದಲ್ಲಿ ಮೇ.17ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಪ್ರಜ್ವಲಿಸಿ ಆಶೀರ್ವಚನ ನೀಡುವರು. ಸಂಸದ ಕ್ಯಾ| ಬ್ರಿಜೇಶ್ ಚೌಟ ನೂತನ ಶಾಖೆಯನ್ನು ಉದ್ಘಾಟಿಸುವರು. ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಅಧ್ಯಕ್ಷತೆ ವಹಿಸುವರು. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಭದ್ರತಾ ಕೊಠಡಿಯನ್ನು, ಶಾಸಕ ರಾಜೇಶ್ ನಾಯ್ಕ್ ಸೇಫ್ ಲಾಕರನ್ನು, ಕಂಪ್ಯೂಟರ್ ವ್ಯವಸ್ಥೆಯನ್ನು ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸುವರು. ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಕೆ. ಠೇವಣಿ ಪತ್ರ ಬಿಡುಗಡೆಗೊಳಿಸುವರು ಮುಖ್ಯ ಅತಿಥಿಗಳಾಗಿ ಅಮ್ಮೆಂಬಳ ವ್ಯ. ಸೇ. ಸ. ಸಂಘದ ಅಧ್ಯಕ್ಷ ರಾಜರಾಮ ಭಟ್, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಮಯೂರ್ ಉಳ್ಳಾಲ್, ಅಮ್ಮೆಂಬಳ ಸಂತ ಥೋಮಸರ ಚರ್ಚ್, ಧರ್ಮಗುರುಗಳಾದ ಫಾ| ಮೈಕಲ್ ಡಿಸಿಲ್ವ, ಬೋಳಿಯಾರ್ ಎಂ.ಜೆ.ಎಂ. ಮಸೀದಿ ಅಧ್ಯಕ್ಷ ಪಿ.ಕೆ. ಅಬ್ದುಲ್ಲ, ಮಂಗಳೂರು ತಾ.ಪಂ. ಸದಸ್ಯ ಬಿ.ಕೆ. ಅಬ್ದುಲ್ ಜಬ್ಬಾರ್, ಬೋಳಿಯಾರ್ ಗ್ರಾ.ಪಂ. ಅಧ್ಯಕ್ಷ ಶಕೂರು, ಶ್ರೀ ಪಣೋಲಿಬೈಲು ಕ್ಷೇತ್ರದ ಪ್ರಧಾನ ಅರ್ಚಕ ವಾಸುದೇವ ಮೂಲ್ಯ, ಅನುವಂಶಿಕ ಅರ್ಚಕ ನಾರಾಯಣ ಮೂಲ್ಯ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಹಾಪ್ಕಮ್ಸ್ ಅಧ್ಯಕ್ಷ ಪ್ರಶಾಂತ್ ಗಟ್ಟಿ, ಮಂಗಳೂರು ಮಂಡಲ ಬಿಜೆಪಿ ಅಧ್ಯಕ್ಷ ಜಗದೀಶ ಆಳ್ವ ಕುವೆತ್ತಬೈಲು, ಬೆಂಗಳೂರು ಕುಲಾಲ ಸಂಘ ಅಧ್ಯಕ್ಷ ದಿವಾಕರ ಮೂಲ್ಯ, ಕಟ್ಟಡ ಮಾಲಿಕ ಕೇಶವ ಭಂಡಾರಿ ಮೊದಲಾದವರು ಭಾಗವಹಿಸುವರು ಎಂದು ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಪ್ರಧಾನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.


ಸಂಘದ ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಮಾಹಿತಿ ನೀಡಿ
ಸ್ವಾತಂತ್ರ್ಯಯೋಧ ಹಾಗೂ ಸಮಾಜರತ್ನ ಡಾ| ಅಮ್ಮೆಂಬಳ ಬಾಳಪ್ಪರವರ ನೇತ್ರತ್ವದಲ್ಲಿ ಹಾಗೂ ಸಹಕಾರಿ ಧುರೀಣ ಶ್ರೀ ಬಿ. ಹೂವಯ್ಯ ಮೂಲ್ಯರವರ ಸಾರಥ್ಯದಲ್ಲಿ ಸಂಘ ಸ್ಥಾಪನೆಯಾಗಿದ್ದು
ಬಂಟ್ವಾಳ ಪಟ್ಟಣ, ಫರಂಗಿಪೇಟೆ, ವಿಟ್ಲ, ಮುಡಿಪು, ಕುಕ್ಕಾಜೆ, ಬಂಟ್ವಾಳ ಬೈಪಾಸ್, ಪಡೀಲ್, ಕಲ್ಲಡ್ಕ, ಬಜಪೆ, ಬಿ. ಸಿ. ರೋಡ್, ಪುಂಜಾಲಕಟ್ಟೆ, ಪುತ್ತೂರು, ಮೆಲ್ಕಾರ್, ಸಿದ್ಧಕಟ್ಟೆ, ಉಪ್ಪಿನಂಗಡಿ, ತೊಕ್ಕೊಟ್ಟು-ದೇರಳಕಟ್ಟೆ ಮತ್ತು ಆಲಂಕಾರು ಶಾಖೆಗಳಲ್ಲಿ ಉತ್ತಮ ಬ್ಯಾಂಕಿಂಗ್ ಸೇವಾ ಸೌಲಭ್ಯವನ್ನು ನೀಡುತ್ತಾ ಬಂದಿದೆ. ಕಳೆದ ಮಾರ್ಚ್ 31ಕ್ಕೆ ಸಹಕಾರಿಯಲ್ಲಿ ಒಟ್ಟು 9319 ‘ಎ’ ತರಗತಿ ಸದಸ್ಯರಿದ್ದು ಪಾಲು ಬಂಡವಾಳ ರೂ. 8.23 ಕೋಟಿ, ಠೇವಣಾತಿಗಳು ರೂ. 264.08ಕೋಟಿ, ನಿಧಿಗಳು 22.64 ಕೋಟಿ, ವಿನಿಯೋಗಗಳು 62.88 ಕೋಟಿ, ಸಾಲಗಳು ರೂ. 248.99ಕೋಟಿ, ಇದ್ದು ವಸೂಲಾತಿ ಶೇಕಡ 95.15 ಆಗಿರುತ್ತದೆ. 2025.26ನೇ ಸಾಲಿನಲ್ಲಿ ರೂ. 1432.13 ಕೋಟಿ ವ್ಯವಹಾರ ನಡೆಸಿ ರೂ. 5.28 ಕೋಟಿ ತಾತ್ಕಾಲಿಕ ಲಾಭ ಗಳಿಸಿದೆ. ಸಂಘದ ದುಡಿಯುವ ಬಂಡವಾಳ ರೂ. 297.71 ಕೋಟಿ ಮೀರಿದ್ದು ಅಡಿಟ್ ವರ್ಗೀಕರಣದಲ್ಲಿ ಸತತವಾಗಿ ಎ ತರಗತಿ ಕಾಯ್ದುಕೊಂಡಿದೆ.. ಕಳೆದ ಸಾಲಿನಲ್ಲಿ ಸದಸ್ಯರಿಗೆ ಶೇಕಡ 17 ಡಿವಿಡೆಂಡ್ ನೀಡಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಇನ್ನು ಐದು ಶಾಖೆಗಳನ್ನು ಆರಂಭಿಸಲು ಆಡಳಿತ ಮಂಡಳಿ ತಿರ್ಮಾನಿಸಿದೆ. ಗ್ರಾಹಕರ ಅನುಕೂಲಕ್ಕಾಗಿ ಮತ್ತು ಸಹಕಾರಿಯ ಹಿತದೃಷ್ಟಿಯಿಂದ ಆನ್ಲೈನ್ ಮುಖಾಂತರ ಸೇವೆಯನ್ನು ಕೊಡುವ ಬಗ್ಗೆ ಆಡಳಿತ ಮಂಡಳಿಯ ಯೋಜನೆಯಂತೆ ಈಗಾಗಲೇ ಸಂಪೂರ್ಣ ಗಣಕಿಕೃತ ಸಿಬಿಎಸ್ ತಂತ್ರಾಂಶದೊಂದಿಗೆ ಗ್ರಾಹಕರು ನೆಪ್ಟ್, ಆರ್.ಟಿ.ಜಿ.ಎಸ್. ಹಾಗೂ ಗೂಗಲ್-ಪೇ, ಪೋನ್-ಪೇ ಮುಂತಾದ ಯು.ಪಿ.ಐ. ಅಪ್ಲಿಕೇಶನ್ ಗಳ ಮೂಲಕ ಸಂಘದಲ್ಲಿರುವ ತಮ್ಮ ಖಾತೆಗೆ ನೇರವಾಗಿ ಜಮೆ ಮಾಡುವಂತಹ ಇ-ಕಲೆಕ್ಷನ್ ತಂತ್ರಾಜ್ಞಾನವನ್ನು ಮತ್ತು ಐ.ಎಫ್.ಎಸ್.ಸಿ. ಕೋಡನ್ನು ಐ.ಸಿ.ಐ.ಸಿ.ಐ. ಬ್ಯಾಂಕ್ನ ಸಹಯೋಗದೊಂದಿಗೆ ಆಳವಡಿಸಿಕೊಂಡಿರುತ್ತದೆ. ಈ ಮೂಲಕ ಬಂಟ್ವಾಳ ತಾಲೂಕಿನಲ್ಲಿಯೆ ಈ ಸೌಲಭ್ಯವನ್ನು ಹೊಂದಿರುವ ಮೊದಲ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಸಂಘವು ತನ್ನದೆ ಆದ ಮೊಬೈಲ್ ಅಪ್ಲಿಕೇಶನ್ ಹೊಂದಿ ಆ ಮೂಲಕ ಯಾವುದೇ ವಾಣಿಜ್ಯ ಬ್ಯಾಂಕುಗಳಿಗೆ ಕಡಿಮೆ ಇಲ್ಲದಂತೆ ಗ್ರಾಹಕರಿಗೆ ಸೇವೆ ನೀಡಬೇಕೆಂಬ ಆಲೋಚನೆ ಆಡಳಿತ ಮಂಡಳಿಯು ಹೊಂದಿದೆ ಎಂದರು.
ಸಂಘವು ವ್ಯವಹಾರದಲ್ಲಿ ಸರ್ವತೋಮಖ ಪ್ರಗತಿ ಸಾಧಿಸಿ ಹಾಗೂ ಬ್ಯಾಂಕಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ಇವರಿಂದ ಹಲವು ಬಾರಿ ಸಾಧನಾ ಪ್ರಶಸ್ತಿ ಪಡೆದುಕೊಂಡಿರುತ್ತದೆ. ಅಲ್ಲದೆ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಸಂಘವು ದಕ್ಷಿಣ ಕನ್ನಡ ಜಿಲ್ಲೆಯ ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ ಪಡೆದುಕೊಂಡಿರುತ್ತದೆ ಸಹಕಾರಿಯ ವತಿಯಯಿಂದ 2025-26ನೇ ಸಾಲಿನಲ್ಲಿ ಉನ್ನತ ವ್ಯಾಸಂಗಕ್ಕಾಗಿ 204 ಸದಸ್ಯರ ಮಕ್ಕಳಿಗೆ ರೂ. 8.80 ಲಕ್ಷ ವಿದ್ಯಾರ್ಥಿ ವೇತನ ನೀಡಿದೆ. ಉನ್ನತ ವ್ಯಾಸಂಗಕ್ಕಾಗಿ ಸಹಕಾರಿಯಲ್ಲಿ ವಿದ್ಯಾ ಸಾಲದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸದಸ್ಯರ ಅನೂಕೂಲಕ್ಕಾಗಿ ಇ-ಸ್ಟ್ಯಾಂಪ್ ಸೌಲಭ್ಯವನ್ನು ಬಂಟ್ವಾಳ ಬೈಪಾಸ್ ಶಾಖೆಯಲ್ಲಿ ಆಳವಡಿಸಲಾಗಿದೆ.
ಸಹಕಾರಿಯಲ್ಲಿ ಪ್ರಸ್ತುತ 241 ಅಮೂಲ್ಯ ಸ್ವಸಹಾಯ ಗುಂಪುಗಳು ಇದ್ದು 2161 ಸದಸ್ಯರು ಸಕ್ರಿಯವಾಗಿ ವ್ಯವಹರಿಸುತ್ತಿದ್ದಾರೆ. ಸದಸ್ಯರಿಗೆ ಸೇಫ್ ಡೆಪಾಸಿಟ್ ಲಾಕರ್ ಸೌಲಭ್ಯವನ್ನು ನೀಡಲಾಗುತ್ತಿದೆ. ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಸೌಲಭ್ಯವನ್ನು ಒದಗಿಸಲಾಗಿದೆ. ರೂ. 10ಸಾವಿರ ಮೇಲ್ಪಟ್ಟ ನಿರಖು ಠೇವಣಾತಿದಾರರಿಗೆ ರೂ. ಒಂದು ಲಕ್ಷ ಮೊತ್ತದ ಅಪಘಾತ ವಿಮೆಯ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸಂಘದ ಸದಸ್ಯರ ವೈದ್ಯಕೀಯ ಚಿಕಿತ್ಸೆಗೆ ಸಹಾಯ ಧನ ನೀಡಲಾಗುತ್ತಿದೆ. ಪ್ರಸ್ತುತ ಸದಸ್ಯರಿಗೆ ಸರಕಾರದ ಯಶಸ್ವಿನಿ ಆರೋಗ್ಯ ರಕ್ಷಣಾ ಸೌಲಭ್ಯ ಯೋಜನೆ ಮತ್ತು ಮಣಿಪಾಲ ಆರೋಗ್ಯ ಕಾರ್ಡ್ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಜನಾರ್ದನ ಬೊಂಡಾಲ, ನಿರ್ದೇಶಕರಾದ ರಮೇಶ್ ಸಾಲ್ಯಾನ್, ಅರುಣ್ ಕುಮಾರ್ ಕೆ. ಸತೀಶ್, ಸುರೇಶ್ ಕುಲಾಲ್ ಎನ್., ಭೋಜ ಸಾಲಿಯಾನ್, ಹರೀಶ್, ಪ್ರೇಮನಾಥ ಬಂಟ್ವಾಳ, ಜಗನ್ನಿವಾಸ ಗೌಡ, ಗಣೇಶ್ ಸಮಗಾರ, ರೇಖಾ ನಾಯಕ್, ಕಿರಣ್ ಕುಮಾರ್ ಎ. ಉಪಸ್ಥಿತರಿದ್ದರು.
Advertisement







