
ಬಂಟ್ವಾಳ: ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಬದುಕಿನ ಕ್ರಮವನ್ನು ಕಲಿಸಿ ಅವರ ಸರ್ವೋತೋಮುಖ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಮಂಗಳೂರು ವಿವಿಯ ರಾ.ಸೇ.ಯೋ ಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಶೇಷಪ್ಪ ಹೇಳಿದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜು ವಾಮದಪದವು ವತಿಯಿಂದ ಪಂಜಿಕಲ್ಲು ಗ್ರಾಮದ ಆಚಾರಿಪಲ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಎನ್.ಎಸ್. ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ನವೀನ್ ಚಂದ್ರ ಶೆಟ್ಟಿ ಅವರು ಮಾತನಾಡಿ ಗ್ರಾಮಸ್ಥರ ಸಹಕಾರದೊಂದಿಗೆ ಕಾಲೇಜಿನ ವಾರ್ಷಿಕ ಶಿಬಿರವು ಯಶಸ್ವಿಯಾಗಲಿ. ಈ ಶಿಬಿರವು ಕಾಲೇಜಿಗೆ ಹಾಗೂ ವಿದ್ಯಾರ್ಥಿಗಳಿಗೆ ಒಳ್ಳೆಯ ಹೆಸರನ್ನು ತರಲಿ ಎಂದು ಆಶಿಸಿದರು. ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕರಣೇಂದ್ರ ಪೂಜಾರಿ, ಗ್ರಾ.ಪಂ. ಮಾಜಿ ಸದಸ್ಯ ಕೇಶವ ಪೂಜಾರಿ, ಶಾಲೆಯ ಮುಖ್ಯೋಪಧ್ಯಾಯಿನಿ ಮರ್ಸಿನ್ ಮೇಥಿ ಪಾಯಸ್ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ್ ಕೆ.ಬಿ.ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ಸಂಚಾಲಕ ಪ್ರೊ. ಶ್ರೀಧರ್ ಕೆ., ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಅಮ್ಮುರೈ ಹರ್ಕಾಡಿ, ಆಚಾರಿಪಲ್ಕೆ ಸರ್ಕಾರಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ದಯಾನಂದ ಗೌಡ, ಪಂಜಿಕಲ್ಲು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಲಕ್ಷ್ಮಿನಾರಾಯಣ ಗೌಡ, ಉದ್ಯಮಿಗಳಾದ ಗಂಗಾಧರ ಪೂಜಾರಿ ಅಮಯ್ಯಗುತ್ತು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪ್ರವೀಣ್ ಗಟ್ಟಿ, ಪ್ರಾಧ್ಯಪಕ ಸುನೀಲ್, ಸಹ ಶಿಬಿರಾಧಿಕಾರಿಗಳಾದ ಡಾ.ಉದಯ್ ಕುಮಾರ್ ಹಾಗೂ ದಿನೇಶ್ ಹಾಜರಿದ್ದರು.


ಕಾರ್ಯಕ್ರಮದ ಶಿಬಿರಾಧಿಕಾರಿಗಳಾದ ಡಾ.ಪುಟ್ಟಲಕ್ಷ್ಮಮ್ಮ ಸ್ವಾಗತಿಸಿ, ಡಾ.ವಿಶಾಲ್ ಪಿಂಟೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರಾಧಿಕಾರಿ ಡಾ. ಮಧು ಎ.ಎಸ್. ವಂದಿಸಿದರು.
Advertisement







