ಬಂಟ್ವಾಳ: ಲಯನ್ಸ್ ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ ಅವರು ಲಯನ್ಸ್ ಕ್ಲಬ್ ಬಂಟ್ವಾಳಕ್ಕೆ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು.
ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ಪ್ರಶಾಂತ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಪ್ರಥಮ ಮಹಿಳೆ ಸಂಧ್ಯಾ ವಲಯಾಧ್ಯಕ್ಷ ಡೋನಾಲ್ಡ್ ಬಂಟ್ವಾಳ, ಪ್ರಾಂತೀಯ ರಾಯಬಾರಿ ದಾಮೋದರ ಬಿ.ಎಂ., ಕೋಶಾಧಿಕಾರಿ ಕೇಶವ ಆಚಾರ್, ವಿಜಯ್ ರೈ ಹಾಗೂ ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.
Advertisement
ಬಂಟ್ವಾಳ ತಾಲೂಕಿನ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಕಿರಣ್ ಕುಮಾರ್, ರೀಟಾ ತಾವ್ರೋ. ಉಮರಗಿ ಶರಣಪ್ಪ, ಹೇಮಾವತಿ, ವಲಯಾಧ್ಯಕ್ಷ ರಮಾನಂದ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಬಂಟ್ವಾಳದ ಸದಸ್ಯರಾಗಿರುವ ಶಿಕ್ಷಕರನ್ನು ಗೌರವಿಸಲಾಯಿತು.
ಕಾರ್ಯದರ್ಶಿ ಸುನೀಲ್ ಬಿ. ವರದಿ ವಾಚಿಸಿದರು. ತಪೋದನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ಆಚಾರ್ಯ ವಂದಿಸಿದರು.
Advertisement