ಬಂಟ್ವಾಳ: ಜೆಸಿಐ ಜೋಡುಮಾರ್ಗ ನೇತ್ರಾವತಿ ಅತ್ಯುತ್ತಮವಾದ ಕಾರ್ಯಕ್ರಮವನ್ನು ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದ ವೇಳೆ ನೀಡಿರುವುದು ಅಭಿನಂದನೀಯ. ಮೂರು ಶಾಲೆಗಳಿಗೆ ನೀಡಿದ ಯೋಜನೆಗಳು ಹೆಚ್ಚು ಪ್ರಯೋಜನಕಾರಿಯಾಗಿದ್ದು ನನಗೆ ಹೆಚ್ಚು ಖುಷಿ ನೀಡಿದೆ, ಕೊಡಬೇಕಲ್ಲ ಎಂದು ಕೊಡುವ ಬದಲು ಅಗತ್ಯ ಇರುವಲ್ಲಿಗೆ ಅಗತ್ಯ ಇರುವ ವಸ್ತುಗಳನ್ನು ನೀಡುವುದು ಹೆಚ್ಚು ಅರ್ಥಪೂರ್ಣ. ಆ ನಿಟ್ಟಿನಲ್ಲಿ ಘಟಕ ಹೆಚ್ಚು ಉಪಯುಕ್ತ ಯೋಜನೆಗಳನ್ನು ವಲಯಾಧ್ಯಕ್ಷರ ಭೇಟಿ ವೇಳೆ ನೀಡಿದೆ ಎಂದು ಜೇಸಿ ವಲಯ 15ರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಹೇಳಿದರು.
ಜೆಸಿಐ ಜೋಡುಮಾರ್ಗ ನೇತ್ರಾವತಿ ಇಲ್ಲಿಗೆ ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ವೇ ಜೆಸಿಐ ಜೋಡುಮಾರ್ಗ ನೇತ್ರಾವತಿ ವತಿಯಿಂದ ಒಟ್ಟು 6 ಲಕ್ಷ ರೂಪಾಯಿ ವೆಚ್ಚದ ವಿವಿಧ ಶಾಶ್ವತ ಯೋಜನೆಗಳನ್ನು ಹಸ್ತಾಂತರಿಸಿ ಸಂಜೆ ಬಿ.ಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್ ಸಭಾಭವನದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಯರ್ ಪಲ್ಕೆಯ ಹೆಗ್ಡೆಸ್ ಆಂಗ್ಲಮಾಧ್ಯಮ ಶಾಲೆಗೆ ಕೊಡುಗೆಯಾಗಿ ನೀಡಿದ ಜೇಸಿ ಕಿಂಡರ್ ಪ್ಲೇ ಯಾರ್ಡ್ ಅನ್ನು ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಶುಭ ಕೋರಿದರು.
ಜೆಸಿಐ ಜೋಡುಮಾರ್ಗ ನೇತ್ರಾವತಿಯ ಅಧ್ಯಕ್ಷೆ ಗಾಯತ್ರಿ ಲೋಕೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಘಟಕಾಧ್ಯಕ್ಷೆ ಗಾಯತ್ರಿ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಅಮ್ಟಾಡಿ ಗ್ರಾಮದ ನಲ್ಕೆಮಾರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಚೆಯರ್ ಹಾಗೂ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಗೆ ನ್ಯಾಪ್ಕಿನ್ ಪ್ಯಾಡ್ ಬರ್ನರ್ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು. ಘಟಕಾಧ್ಯಕ್ಷೆ ಗಾಯತ್ರಿ ಲೋಕೇಶ್ ಮಾತನಾಡಿ ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದ ವೇಳೆ ಮೂರು ಶಾಲೆಗಳಿಗೆ ಒಟ್ಟು 6 ಲಕ್ಷ ರೂಪಾಯಿ ವೆಚ್ಚದ ಯೋಜನೆಗಳನ್ನು ಒಂದೇ ದಿನದಲ್ಲಿ ನೀಡಲಾಗಿದೆ. ಈ ಸಂದರ್ಭವೇ ಜೇಸಿ ಸಪ್ತಾಹವೂ ನಡೆಯುತ್ತಿದ್ದು ಅನೇಕ ವೈವೀದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿ ಲೋಕೇಶ್, ಘಟಕದ ಕೋಶಾಧಿಕಾರಿ ದೀಪ್ತಿ, ಹಾಗೂ ಅನಿಲ್ ವಡಗೇರಿ ಅವರನ್ನು ಸನ್ಮಾನಿಸಲಾಯಿತು.
ವಲಯ 15ರ ಉಪಾಧ್ಯಕ್ಷ ಅಜಿತ್ ಕುಮಾರ್ ರೈ, ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಕಾರ್ತಿಕ್, ನಿಕಟ ಪೂರ್ವಾಧ್ಯಕ್ಷ ಹರಿಪ್ರಸಾದ್ ಕುಲಾಲ್ ಶುಭ ಕೋರಿದರು. ಹೆಗ್ಡೆಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಪ್ರಕಾಶ್ ಎಂ. ಹೆಗ್ಡೆ, ಸಂಚಾಲಕಿ ಪ್ರೀತಿ ಪ್ರಕಾಶ್ ಹೆಗ್ಡೆ, ಜೆಸಿ ಸಪ್ತಾಹ ಕಾರ್ಯಕ್ರಮ ಸಂಯೋಜಕ ಸುಬ್ರಹ್ಮಣ್ಯ ಪೈ, ಮುಖ್ಯೋಪಾಧ್ಯಾಯಿನಿ ಸಬಿತಾ, ನಲ್ಕೆಮಾರ್ ಶಾಲೆಯ ಮುಖ್ಯೊಪಧ್ಯಾಯಿನಿ ಜ್ಯೋತಿ ಕುಮಾರಿ, ಎಸ್ಡಿಎಸಿ ಅಧ್ಯಕ್ಷ ವಿಜಯ್ ಕುಮಾರ್ ಸಹಶಿಕ್ಷಕಿ ರೇಖಾ, ಬೊಂಡಾಲ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕಮಲಾಕ್ಷ, ಸಹಶಿಕ್ಷಕ ಹರಿಪ್ರಸಾದ್, ಜೆಸಿಐ ಜೋಡುಮಾರ್ಗ ನೇತ್ರಾವತಿಯ ಸದಸ್ಯರು ಉಪಸ್ಥಿತರಿದ್ದರು.
ಅಧ್ಯಕ್ಷೆ ಗಾಯತ್ರಿ ಲೋಕೇಶ್ ಸ್ವಾಗತಿಸಿದರು, ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರ ರಾವ್ ವೇದಿಕೆಗೆ ಆಹ್ವಾನಿಸಿದರು, ಕಾರ್ಯದರ್ಶಿ ರಮ್ಯ ಬಿಎಸ್ ವರದಿ ವಾಚಿಸಿ, ವಂದಿಸಿದರು.